ಉಬಾರ್‌ ಗಯಾಪದ ಕಲಾವಿದರ “ಮುರಳಿ ಈ ಪಿರ ಬರೊಲಿ” ನಾಟಕಕ್ಕೆ ಮುಹೂರ್ತ

0

ಪುತ್ತೂರು: ತುಳು ರಂಗಭೂಮಿಯಲ್ಲಿ ಕಳೆದ 4 ವರ್ಷಗಳಿಂದ ಹಲವಾರು ನಾಟಕಗಳ ಮೂಲಕ ಸಂಚಲನ ಮಂಡಿಸಿದ “ಗಯಾಪದ ಕಲಾವಿದೆರ್‌ ಉಬಾರ್‌” ಇದರ 5ನೇ ವರ್ಷದ ಹೊಸನಾಟಕ “ಮುರಳಿ ಈ ಪಿರ ಬರೊಲಿ” ಇದರ ಶುಭ ಮುಹೂರ್ತವು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮತ್ತು ಮಹಾಕಾಳಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳಿಂದ ನಡೆಯಿತು.

ಬಳಿಕ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿಯ ಸದಸ್ಯರು, ಶ್ರೀ ಜಯಂತ ಪರೋಳಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್‌ ರೈ ಅರ್ಪಿಣಿಗುತ್ತು, ಅಮೂಲ್ಯ ಗ್ಯಾಸನ ಮಾಲಕ ಚಂದಪ್ಪ ಮೂಲ್ಯ, ಶ್ರೀ ರಾಘವೇಂದ್ರ ಮಠ 34ನೇ ನಕ್ಕಿಲಾಡಿ ಇದರ ಕಾರ್ಯದರ್ಶಿ ಗೋಪಾಲ ಹೆಗ್ಡೆ, ರಾಮಚಂದ್ರ ಮಣಿಯಾಣಿ, ಪ್ರಭಾಕರ ಪೊಸಂತೋಡಿ, ಹಲೇಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು, ನಾಟಕ ರಚನೆಕಾರ ಶಶಿಕುಮಾರ್‌ ಕುಳೂರು, ತಂಡದ ಯಜಮಾನ ಬಾಲಕೃಷ್ಣ ಪೂಜಾರಿ ನಿರಾಲ, ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರರು ರಾಜೇಶ್‌ ಶಾಂತಿನಗರ ಉಪಸ್ಥಿತರಿದದ್ದು ಕಾರ್ಯಕ್ರಮಕ್ಕೆ ಹಾಗೂ ತಂಡದ ಯಶಸ್ಸಿಗೆ ಶುಭವನ್ನು ಹಾರೈಸಿದರು.

ಶ್ರೀ ದೇವತಾ ಪ್ರಾರ್ಥನೆಯನ್ನು ವೈಶಾಲಿ ಕುಂದರ್‌, ಅನುಷಾಜೋಗಿ, ಶರಣ್ಯ ಇವರು ನೆರವೇರಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಅತಿಥಿಗಳನ್ನು, ಆಗಮಿಸಿದ ಕಲಾಪೋಷಕರನ್ನು, ಹಿತೈಷಿಗಳನ್ನು ಬಿ.ರಂಗಯ್ಯ ಬಿಲ್ಲಾಳ್‌ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಚಾಲಕರಾದ ಕಿಶೋರ್‌ ಜೋಗಿ ವಂದನಾರ್ಪಣೆಯನ್ನು ಸಲ್ಲಿಸಿದರು.

ತಂಡದ ಕಲಾವಿದರಾದ ಗಂಗಾಧರ ಟೈಲರ್, ಅಶೋಕ್‌ ಬನ್ನೂರು, ದಿವಾಕರ ಸುರ್ಯ, ಕಿಶನ್‌ ಸುರ್ಯ, ಸತೀಶ್‌ ಶೆಟ್ಟಿ ಹೆನ್ನಾಳ, ರಾಜಶೇಖರ ಶಾಂತಿನಗರ, ಅನಿಲ್‌ ಇರ್ದೆ, ಕೃಷ್ಣ ಮುಂಡ್ಯ, ಶ್ರೀಮತಿ ವೈಸಾಲಿ ಕುಂದರ್‌, ಸಂಧ್ಯಾಶ್ರೀ ಪೆರಿಯಡ್ಕ, ಚೇತನ್‌ ಪೆರಿಯಟ್ಕ, ಶ್ರೀ ಶರಣ್ಯ ಶಾಂತಿನಗರ, ಕುಮಾರಿ ಅನುಷಾ ಪರುಷರ ಕಟ್ಟೆ, ಶ್ರೀಮತಿ ಅನಂತಾವತಿ, ದೀಪಕ್‌ ಪೈ ರಾಮನಗರ ಹಾಗೂ ಶ್ರೀ ಕ್ಷೇತ್ರದ ಸಹಾಯಕರಾದ ದಿವಾಕರ ಕಟ್ಟೆಚ್ಚಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here