





ಪುತ್ತೂರು: ಕುರಿಯ ಗ್ರಾಮದ ಬೈಲಾಡಿ ನಿವಾಸಿ ನಿವೃತ್ತ ಸೈನಿಕ ಕೂಸ ಪೂಜಾರಿ(99) ಜೂ.7 ರಂದು ರಾತ್ರಿ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ. 1945 ರಲ್ಲಿ ತನ್ನ 14ನೇ ವಯಸ್ಸಿನಲ್ಲಿ ದಫೇದಾರರಾಗಿ ಸೈನ್ಯಕ್ಕೆ ಸೇರಿದ್ದ ಅವರು 21 ವರ್ಷಗಳ ಸೇವೆಯ ಬಳಿಕ ನಾಯಿಕ್ ಆಗಿ ಪದೋನ್ನತಿ ಹೊಂದಿ 1966 ರಲ್ಲಿ ನಿವೃತ್ತಿ ಹೊಂದಿದ್ದರು.




ಮೃತರು ತಮ್ಮ ಸೇವಾ ಅವಧಿಯಲ್ಲಿ ವಾರ್ ಮೆಡಲ್, ಭಾರತ ಸ್ವಾತಂತ್ರ್ಯ ಮೆಡಲ್, ಜೆಕೆ, ಎನ್ಇ ಎಫ್ ಎ, ಎಸ್ ಎಸ್ ಮೆಡಲ್ ಗೆ ಭಾಜನರಾಗಿದ್ದರು. ಮೃತರು ಪತ್ನಿ, ಎರಡು ಗಂಡು, ಮೂರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪುತ್ತೂರು ತಾಲೂಕು ನಿವೃತ್ತ ಸೈನಿಕ ಸಂಘದ ಪದಾಧಿಕಾರಿಗಳು ಮೃತ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು.














