ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖೆ 10ನೇ ವರ್ಷಕ್ಕೆ ಪಾದಾರ್ಪಣೆ-ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ

0

ಜು.6ರಂದು ಬೆಳ್ಳಾರೆಯಲ್ಲಿ 9ನೇ ಶಾಖೆ ಶುಭಾರಂಭ: ಚಿದಾನಂದ ಬೈಲಾಡಿ

ನೆಲ್ಯಾಡಿ: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಿತ ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಕಟ್ಟಡದಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ನೆಲ್ಯಾಡಿ ಶಾಖೆಯ 10ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ನೆಲ್ಯಾಡಿ ಮುಖ್ಯರಸ್ತೆಯ ಡೆಂಜ ಕಾಂಪ್ಲೆಕ್ಸ್‌ನಲ್ಲಿರುವ ಶಾಖೆಯ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀ ಪೂಜೆ ಜೂ.8ರಂದು ಬೆಳಿಗ್ಗೆ ನಡೆಯಿತು.


ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಅವರ ನೇತೃತ್ವದಲ್ಲಿ ಶಾಖಾ ಕಚೇರಿಯಲ್ಲಿ ಬೆಳಿಗ್ಗೆ ಪೂಜಾ ವಿಧಿ ವಿಧಾನ ನಡೆಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿಯವರು, 22 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಆರಂಭಗೊಂಡಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಪ್ರಸ್ತುತ ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಸ್ವಂತ ಕಟ್ಟಡದಲ್ಲಿ ಪ್ರಧಾನ ಕಚೇರಿ ಹೊಂದಿದೆ. ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಎಸ್‌ಎಂಟಿ ಪುತ್ತೂರು, ಕಾಣಿಯೂರಿನಲ್ಲಿ ಶಾಖೆ ಹೊಂದಿದೆ. ಸಂಘ ಈಗ ಒಟ್ಟು 8 ಶಾಖೆ ಹೊಂದಿದ್ದು ಜು.6ರಂದು ಬೆಳ್ಳಾರೆಯಲ್ಲಿ 9ನೇ ಶಾಖೆ ಆರಂಭಗೊಳ್ಳಲಿದೆ ಎಂದರು.

ಸಂಘವು ಈಗ ರೂ.400 ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟು ಹೊಂದಿದ್ದು ರೂ.1 ಕೋಟಿಗೂ ಹೆಚ್ಚು ಲಾಭಗಳಿಸುತ್ತಿದೆ. ಎಲ್ಲಾ ಶಾಖೆಗಳಲ್ಲೂ ಉತ್ತಮ ರೀತಿಯ ವ್ಯವಹಾರ ನಡೆಯುತ್ತಿದೆ. ನೆಲ್ಯಾಡಿ ಶಾಖೆಯೊಂದರಲ್ಲೇ 8 ಕೋಟಿ ರೂ.ಠೇವಣಿ ಸಂಗ್ರಹಿಸಲಾಗಿದ್ದು 9 ಕೋಟಿ ರೂ.ಸಾಲ ವಿತರಣೆ ಆಗಿದೆ ಎಂದು ಹೇಳಿದರು. ಸಂಘದ ಸದಸ್ಯರಿಗೆ ಜಾಮೀನು, ವಾಹನ, ವ್ಯಾಪಾರ, ಹಳೆಯ ವಾಹನ, ಪಿಗ್ಮಿ ಆಧಾರಿತ, ವೇತನ, ಭೂ ಅಡಮಾನ, ಭೂ ಖರೀದಿ, ಠೇವಣಿ ಆಧಾರಿತ, ಗೃಹ ನಿರ್ಮಾಣ, ಚಿನ್ನಾಭರಣ ಸಾಲ ನೀಡಲಾಗುತ್ತಿದೆ. ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.


ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಮಾತನಾಡಿ, ಸಂಘದ ಪ್ರಧಾನ ಕಚೇರಿ ಹಾಗೂ ಶಾಖೆಗಳಲ್ಲಿ ಉತ್ತಮ ವ್ಯವಹಾರ ನಡೆಯುತ್ತಿದ್ದು ಲಾಭದಲ್ಲಿ ಮುನ್ನಡೆಯುತ್ತಿರುವುದು ಸಂತಸದ ವಿಚಾರ. ಸಂಘ ಇನ್ನಷ್ಟೂ ಬೆಳವಣಿಗೆಯಾಗಲಿ ಎಂದು ಶುಭಹಾರೈಸಿದರು.

ಸಂಘದ ನಿರ್ದೇಶಕರೂ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಅಧ್ಯಕ್ಷರೂ ಆದ ಪ್ರವೀಣ್ ಕುಂಟ್ಯಾನ, ಸಂಘದ ನಿರ್ದೇಶಕಿ, ನೆಲ್ಯಾಡಿ ಶಾಖಾ ಸಲಹಾ ಸಮಿತಿ ಉಪಾಧ್ಯಕ್ಷೆ ಸುಪ್ರಿತಾ ರವಿಚಂದ್ರ, ಸಂಘದ ನಿರ್ದೇಶಕಿ ತೇಜಸ್ವಿನಿ ಕಟ್ಟಪುಣಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ಸಂಘದ ಆಂತರಿಕ ಲೆಕ್ಕಪರಿಶೋಧಕ ಶ್ರೀಧರ ಗೌಡ ಕಣಜಾಲು, ಪುತ್ತೂರು ಎಸ್‌ಎಂಟಿ ಶಾಖಾ ಮೇನೇಜರ್ ಶಿವಪ್ರಸಾದ್, ಸಲಹಾ ಸಮಿತಿ ಸದಸ್ಯರಾದ ಸುಂದರ ಗೌಡ ಅತ್ರಿಜಾಲು, ರಾಧಾಕೃಷ್ಣ ಕೆರ್ನಡ್ಕ, ತುಕ್ರಪ್ಪ ಗೌಡ ಗೋಳಿತ್ತೊಟ್ಟು, ನೋಣಯ್ಯ ಗೌಡ ಡೆಬ್ಬೇಲಿ, ಪದ್ಮನಾಭ ಗೌಡ, ಜಿನ್ನಪ್ಪ ಗೌಡ ಪೊಸೊಳಿಕೆ, ಸುರೇಶ್ ಪಡಿಪಂಡ, ಸುಲತ ಮೋಹನಚಂದ್ರ, ಆಲಂಕಾರು ಶಾಖಾ ಸಿಬ್ಬಂದಿ ಹರಿಶ್ಚಂದ್ರ, ಪುತ್ತೂರು ಶಾಖಾ ಸಿಬ್ಬಂದಿ ಯಶ್ವಿತ್, ಇಂಜಿನಿಯರ್ ನರೇಶ್ ಡಿ.ಎಸ್., ಡೆಂಜ ಕಾಂಪ್ಲೆಕ್ಸ್ ಮಾಲಕ ಪುರಂದರ ಗೌಡ ಡೆಂಜ, ರವಿಚಂದ್ರ ಹೊಸವಕ್ಲು, ಬಾಳಪ್ಪ ಗೌಡ ಅಗರ್ತ, ದಾಮೋದರ ಗೌಡ ಪುಚ್ಚೇರಿ, ಅಶೋಕ ಗೌಡ ಪಜ್ಜಡ್ಕ ಆಲಂಕಾರು, ಬಾಲಕೃಷ್ಣ ಹೆಗರ್ನಡಿ, ಜಯಕುಮಾರ್ ಶಾರದಾ ಫ್ಯಾನ್ಸಿ ನೆಲ್ಯಾಡಿ, ಜನಾರ್ದನ ಗೌಡ ಕೊಣಾಲು, ತಿಮ್ಮಪ್ಪ ಗೌಡ ಇಚ್ಚೂರು, ಬಾಬಣ್ಣ ಗೌಡ ಪಾತ್ರಮಾಡಿ, ನ್ಯಾಯವಾದಿ ವಿನೋದ್, ಸ್ವರ ಸ್ಟುಡಿಯೋದ ಮಹೇಶ್, ನೆಲ್ಯಾಡಿ ಶಿವ ಎಲೆಕ್ಟ್ರಾನಿಕ್ಸ್‌ನ ಪ್ರಶಾಂತ್, ಸುರೇಶ್ ಗೌಡ ತಿರ್ಲೆ, ಸದಾಶಿವ ಗ್ಯಾರೇಜ್‌ನ ಪ್ರಮೋದರ, ಧನಂಜಯ ಗೌಡ ಅಲೆಕ್ಕಿ, ಯೋಧಾನಂದ, ಸಾಯಿ ಮೆಡಿಕಲ್‌ನ ದಿವಾಕರ, ಪರಮೇಶ್ವರ ಕೊಂಬಾರು ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಹಾರೈಸಿದರು.


ಪ್ರವೀಣ್ ಕುಂಟ್ಯಾನ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕ ವಿನೋದ್ ರಾಜ್ ಎಸ್.ವಂದಿಸಿದರು. ನೆಲ್ಯಾಡಿ ಶಾಖಾ ಸಿಬ್ಬಂದಿಗಳಾದ ಕಾರ್ತಿಕ್ ಎಂ., ಅಜಿತ್ ಬಿ.ಕೆ., ಪಿಗ್ಮಿ ಸಂಗ್ರಾಹಕ ಶಿವಪ್ರಸಾದ್ ಸಹಕರಿಸಿದರು.


ಮೌನ ಪ್ರಾರ್ಥನೆ:
ನೆಲ್ಯಾಡಿ ಶಾಖೆಯ ಸಲಹಾ ಸಮಿತಿ ಸದಸ್ಯೆಯಾಗಿದ್ದು ಮೇ 29ರಂದು ನಿಧನರಾದ ಕೊಣಾಲು ಹೊಸಮನೆ ನಿವಾಸಿ ಶ್ರೀಮತಿ ಲೀಲಾವತಿ ಅವರ ಆತ್ಮಕ್ಕೆ ಚಿರಶಾಂತಿ ಕೋರಿ 1 ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.

LEAVE A REPLY

Please enter your comment!
Please enter your name here