ಆರೋಗ್ಯ, ಪೌಷ್ಠಿಕ ಸಮೀಕ್ಷೆ ಕರ್ತವ್ಯ ನಿರ್ವಹಣೆಯ ವಿರುದ್ಧದ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಸಂಘದ ಪ್ರತಿಭಟನೆ ಮುಂದೂಡಿಕೆ

0

ಪುತ್ತೂರು: ಆರೋಗ್ಯ ಇಲಾಖೆಯ ಆರೋಗ್ಯ ಮತ್ತು ಪೌಷ್ಠಿಕ ಸಮೀಕ್ಷೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒತ್ತಡ ಹೇರುತ್ತಿರುವುದರ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ದ.ಕ.ಜಿಲ್ಲೆ ಇದರ ವತಿಯಿಂದ ಜೂ.9 ರಂದು ದ.ಕ.ಜಿಲ್ಲಾ ಪಂಚಾಯತ್‌ನ ಎದುರುಗಡೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಇಲಾಖೆಯ ಕರ್ತವ್ಯವಾದ 0-6 ಮಕ್ಕಳ ತೂಕ, ಎತ್ತರ, ಗರ್ಭಿಣಿ ಬಾಣಂತಿಯರ ದಾಖಲೆ, ಪೂರಕ ಆಹಾರ ವಿತರಣೆ, ಶಾಲಾ ಪೂರ್ವ ಶಿಕ್ಷಣ, ಮಾತೃವಂದನಾ, ಭಾಗ್ಯಲಕ್ಷ್ಮಿ ದಾಖಲಾತಿ ನಿರ್ವಹಣೆ, ಅಲ್ಲದೆ ಚುನಾವಣಾ ಆಯೋಗದ ಬಿಎಚ್‌ಒ ಕರ್ತವ್ಯ ಇತ್ಯಾದಿ ಕೆಲಸಗಳ ಮಧ್ಯೆಯೇ ಆರೋಗ್ಯ ಮತ್ತು ಪೌಷ್ಠಿಕ ಸಮೀಕ್ಷೆಯನ್ನು ಮಾಡಲು ಒತ್ತಡ ಹಾಕುತ್ತಿದ್ದಾರೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇವೆ ಎಂದು ಪುತ್ತೂರು, ಕಡಬ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರು. ಈ ಬಗ್ಗೆ ಜೂ.8 ರಂದು ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ತುರ್ತು ಸಭೆ ನಡೆದಿದ್ದು ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಉಪನಿರ್ದೇಶಕರ ಭರವಸೆ ನೀಡಿದ ಕಾರಣ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಮುಷ್ಕರದ ಬಗ್ಗೆ ಅಧಿಕಾರಿಗಳ ಒತ್ತಡ ಹಾಗೂ ಇತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು. ಉಪನಿರ್ದೇಶಕರು ಈ ಬಗ್ಗೆ ಮಾತನಾಡಿ ಇದು ರಾಜ್ಯಮಟ್ಟದಲ್ಲಿ ಬಗೆಹರಿಸುವ ಸಮಸ್ಯೆ ಆದ ಕಾರಣ ರಾಜ್ಯ ಸಮಿತಿಯು ಹಾಗೂ ಇತರ ಐದು ಸಂಘಟನೆಗಳ ಸಂಘರ್ಷ ಆದೇಶ ಸಮಿತಿಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಇಲಾಖೆಯ ನಿರ್ದೇಶಕರ ಕಚೇರಿಯ ಆದೇಶ ಬರುವವರೆಗೆ ನೀವು ಮುಷ್ಕರವನ್ನು ಮಾಡಬಾರದು ಎಂದು ತಿಳಿಸಿದ್ದಾರೆ. ಆದುದರಿಂದ ನಮ್ಮ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳ ಅಭಿಪ್ರಾಯದಂತೆ ನಾವು ನಡೆಸುವ ಮುಷ್ಕರವನ್ನು ತೀರ್ಮಾನಿಸಿರುತ್ತೇವೆ ಈ ಬಗ್ಗೆ ಅಧಿಕಾರಿಗಳು ಒತ್ತಡವನ್ನು ತಂದಲ್ಲಿ ಮುಷ್ಕರವನ್ನು ನಡೆಸಲಾಗುವುದು ಒಂದು ವಾರದ ಅವಧಿಯನ್ನು ನೀಡಲಾಗಿದೆ.

LEAVE A REPLY

Please enter your comment!
Please enter your name here