ಮಾಡನ್ನೂರು: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ವಿದ್ಯಾರ್ಥಿಗಳ ಸಂಘಟನೆಯಾದ ಎನ್‌ಎಸ್‌ಯು ನೂರುಲ್ ಹುದಾ ಸ್ಪೂಡೆಂಟ್ಸ್ ಯೂನಿಯನ್‌ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಫ್ವಾನ್ ಪಾರಪಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಮದಸ್ಸಿರ್ ಸರಾವು, ಕೋಶಾಧಿಕಾರಿಯಾಗಿ ಜಮೀಲ್ ಬನ್ನೂರು ಹಾಗು ಪಿ ಆರ್ ಓ ಆಗಿ ಮುಹಮ್ಮದ್ ಶಮಿ ಉಪ್ಪಿನಂಗಡಿ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಅರ್ಫಾಝ್ ಮುಕ್ವೆ, ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಸನಾಫ್ ಉಪ್ಪಿನಂಗಡಿ ಜೊತೆ ಕಾರ್ಯದರ್ಶಿಯಾಗಿ ಇಹ್ಸಾನ್ ಕಡಬ, ಹಣಕಾಸು ಕಾರ್ಯದರ್ಶಿಯಾಗಿ ಹಾಶಿರ್ ಕಟ್ಟತ್ತಾರುರವರನ್ನು ಆಯ್ಕೆ ಮಾಡಲಾಯಿತು. ಸಂಘಟನಾ ಉಸ್ತುವಾರಿ ರಾಶಿದ್ ಹುದವಿ ಉಸ್ತಾದ್ ನೇತೃತ್ವದಲ್ಲಿ ಸಭೆ ನಡೆಯಿತು.
ಉಪಸಮಿತಿಗಳನ್ನು ರಚಿಸಿ ಅದರ ನಾಯಕರನ್ನು ಆಯ್ಕೆ ಮಾಡಲಾಯಿತು. ಹೆಚ್.ಆರ್.ಡಿ ಚೇರ್‌ಮೆನ್ ಆಗಿ ಅಶ್ಫಾಖ್ ಮಾಸ್ತಿಕುಂಡು, ಆರ್ಗನೈಝೇಷನ್ ಸಮಿತಿಯ ಚೇರ್‌ಮೆನ್ ಆಗಿ ಬಾಸಿತ್ ಅಜ್ಜಾವರ, ರೈಟರ್ಸ್ ಕ್ಲಬ್ ಚೇರ್‌ಮೆನ್ ಆಗಿ ಸಲೀಂ ಮಾಣಿ, ಸ್ಪೀಕರ್ಸ್ ಫೋರಂ ಚೇರ್‌ಮೆನ್ ಆಗಿ ವಸೀಂ ಕಾಸರಗೋಡು, ಇಂಟೆಲಿಜೆನ್ಸ್ ಚೇರ್‌ಮೆನ್ ಆಗಿ ಇಲ್ಯಾಸ್ ಮೆಲ್ಕಾರ್, ಜೂನಿಯರ್ಸ್ ಕಾಡಿನೇಟರ್ಸ್‌ಗಳಾಗಿ ಶಾಮಿಲ್ ಮತ್ತು ರಾಝಿ ಕೊಡಾಜೆ ಲಾಂಗ್ವೇಜ್ ಕ್ಲಬ್ ಚೇರ್‌ಮೆನ್ ಆಗಿ ಆಸಿಂ ಗಾಳಿಮುಖ, ಕನ್ನಡ ಸಂಘದ ಚೇರ್‌ಮೆನ್ ಆಗಿ ಅಜ್ಮಲ್ ಉಜಿರೆ, ಎಸ್‌ಕೆಎಸ್‌ಎಸ್‌ಎಸ್‌ಎಫ್ ಕ್ಯಾಂಪಸ್ ಚೇರ್‌ಮೆನ್ ಆಗಿ ಶಬೀರ್ ಈಶ್ವರಮಂಗಲ, ಮೆಡಿಕಲ್ ವಿಂಗ್ ಚೇರ್‌ಮೆನ್ ಆಗಿ ಶುಹೂದ್ ಗಡಿಯಾರ್, ಮೀಡಿಯಾ ಚೇರ್‌ಮೆನ್ ಆಗಿ ಬದ್ರುದ್ದೀನ್ ಮೂಡಿಗೆರೆರವರನ್ನು ಆಯ್ಕೆ ಮಾಡಲಾಯಿತು.
ಪ್ರಾಂಶುಪಾಲರಾದ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಮಾತನಾಡಿ ನವಪೀಳಿಗೆಯ ಹಿತಾಸಕ್ತಿಗೆ ಪೂರಕವಾದ ರೀತಿಯಲ್ಲಿ ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡಿ, ವಿದ್ಯಾರ್ಥಿಗಳು ಕಾಲದ ಬದಲಾವಣೆಯನ್ನು ಓದಿ ಪರಿಹಾರ ಕಂಡುಕೊಳ್ಳುವಲ್ಲಿ ಅವರನ್ನು ಸಬಲೀಕರಿಸುವಲ್ಲಿ ವಿದ್ಯಾರ್ಥಿ ಸಂಘಟನೆಯು ಹೆಜ್ಜೆಯಿಡಲಿದೆಯೆಂದು ಹೇಳಿದರು.