ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಶಿಕ್ಷಕರಿಗೆ ಕಾರ್ಯಾಗಾರ

0

ಪುತ್ತೂರು: ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪಾತ್ರ, ತಂತ್ರಜ್ಞಾನ, ಇಂದಿನ ಪೀಳಿಗೆಯ ವಿದ್ಯಾರ್ಥಿಗಳ ಮನಸ್ಥಿತಿ ಹಾಗೂ ಅದಕ್ಕೆ ಕಾರಣಗಳು-ಪರಿಹಾರ, ಭಾಷಾ ಜ್ಞಾನ, ಕೌಶಲ್ಯವೃದ್ಧಿ ಇತ್ಯಾದಿ ಹತ್ತು ಹಲವು ವಿಷಯಗಳು, ಒಬ್ಬ ಶಿಕ್ಷಕನಾದವನಿಗೆ ವಿದ್ಯಾರ್ಥಿಯ ಸಾಧನೆಯನ್ನು ಪೋಷಿಸಲು ಹಾಗೂ ಪರಿಣಾಮಕಾರಿ ಕಲಿಕೆಯ ಪರಿಸರವನ್ನು ಸೃಷ್ಟಿಸಲು ಸಾಧ್ಯ ಎಂಬುವುದು ಇಂದಿನ ಕಾಲಘಟ್ಟದಲ್ಲಿ ಸರ್ವಸಾಮಾನ್ಯವಾದ ವಿಷಯವಾಗಿದೆ.

ಈ ನಿಟ್ಟಿನಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಆಡಳಿತ ಮಂಡಳಿಯ ವತಿಯಿಂದ ಶಿಕ್ಷಕರ ಶ್ರೇಯೋಭಿವೃದ್ಧಿಯ ಸಲುವಾಗಿ ಹಲವು ಕಾರ್ಯಾಗಾರಗಳನ್ನು ಸುಮಾರು ಒಂದು ವಾರಗಳ ಕಾಲ ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಹಲವು ವಿಷಯಗಳಲ್ಲಿ ಪರಿಣತಿ ಹೊಂದಿದ ಸಂಪನ್ಮೂಲ ವ್ಯಕ್ತಿಗಳಿಂದ ಪರಿಣಾಮಕಾರಿಯಾದ ತರಗತಿಗಳನ್ನು ನಡೆಸಲಾಯಿತು.

ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ನ ಅಶೋಕ್ ತೆಕ್ಕಟ್ಟೆ ಅವರು, “ಫೊನೆಟಿಕ್ಸ್, ಸ್ಪೋಕನ್ ಇಂಗ್ಲಿಷ್, ಕ್ರಿಯೇಟಿವ್ ಟೀಚಿಂಗ್ ವಿಷಯವಾಗಿ ಮತ್ತು ಶ್ರದ್ಧಾ ರೈ ಅವರು, “ಕಲಿಕೆಯಲ್ಲಿ ಅಸಮರ್ಥತೆಗಳ ಗುರುತಿಸುವಿಕೆ” ಹಾಗೂ ವಿವೇಕಾನಂದ ಇಂಜಿನಿಯರಿಂಗ್ & ಟೆಕ್ನಾಲಜಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹೇಶ ಪ್ರಸನ್ನ “ಟೀಮ್ ಬಿಲ್ಡಿಂಗ್ ಮತ್ತು ವರ್ಕ್ ಕಲ್ಚರ್” ಕುರಿತು ತರಬೇತಿಗಳನ್ನು ಹಲವು ಆಕರ್ಷಕ ಚಟುವಟಿಕೆಗಳ ಮೂಲಕ ನಡೆಸಿ ಕೊಟ್ಟರು.

ಜೂನ್ 3, 4 ರಂದು ಕೊಯಂಬತ್ತೂರಿನ ಡಾ.ಜಿ. ಸುಬ್ರಹ್ಮಣ್ಯನ್ ಅವರು ಆಗಮಿಸಿ, ಅತ್ಯಂತ ಕಲಾತ್ಮಕವಾದ ಚಟುವಟಿಕೆಗಳು, ಶಿಕ್ಷಣದಲ್ಲಿ ಹಲವಾರು ತಂತ್ರಜ್ಞಾನಗಳ ಬಳಕೆ, ಶಿಕ್ಷಕರಿಗಿರಬೇಕಾದ ಮನಸ್ಥಿತಿ, ರಾಷ್ಟ್ರೀಯ ನೆಲೆಯಲ್ಲಿ ಶಿಕ್ಷಕರ ಸ್ಥಾನಮಾನ ಮುಂತಾದ ವಿಷಯಗಳ ಕುರಿತಾಗಿ ತರಬೇತಿ ನೀಡಿದರು.

ಪ್ರಸ್ತುತ ಕಾರ್ಯಕ್ರಮವನ್ನು, ಮಾತೃಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಮ್. ಕೃಷ್ಣ ಭಟ್ ಹಾಗೂ ಉಪಾಧ್ಯಕ್ಷ ಸತೀಶ್ ರಾವ್ ಅವರು ಉದ್ಘಾಟಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಇದರ ಆಡಳಿತ ಮಂಡಳಿಯ ಕೋಶಾಧಿಕಾರಿ ಕೃಷ್ಣಮೋಹನ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಸಂತಿ. ಕೆ, ಶಾಲಾ ಸಂಚಾಲಕ ಭರತ್ ಪೈ, ಪ್ರಾಂಶುಪಾಲ ಸಿಂಧೂ. ವಿ. ಜಿ ಹಾಗೂ ಉಪ ಪ್ರಾಂಶುಪಾಲ ಹೇಮಾವತಿ. ಜಿ ಅವರು ಉಪಸ್ಥಿತರಿದ್ದರು.

ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ಪ್ರತೀ ತರಬೇತಿಯೂ ಅತ್ಯಂತ ಪರಿಣಾಮಕಾರಿಯಾಗಿರುವುದು ಮಾತ್ರವಲ್ಲದೆ, ಇಂದಿನ ಒತ್ತಡದ ದಿನಗಳಲ್ಲಿ ಮತ್ತೆ ಉತ್ಸಾಹವನ್ನು ಹೆಚ್ಚಿಸಿ, ಅರ್ಥಪೂರ್ಣ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದೆ ಎಂಬುದಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

LEAVE A REPLY

Please enter your comment!
Please enter your name here