ಪುತ್ತೂರು:ಬಿಳಿನೆಲೆ ಬೈಲು ಶಾಲೆಯಲ್ಲಿ ಪರಿಸರ ದಿನಾಚರಣೆ,ಪುಸ್ತಕ ವಿತರಣಾ ಕಾರ್ಯಕ್ರಮ ಜೂ.8ರಂದು ನಡೆಯಿತು.
ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸುಮಾರು 13,000 /- ರೂಪಾಯಿಯ ಬರೆಯುವ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ನೀಡಿದರು. ಸೈಂಟ್ ಮೇರಿ ಚರ್ಚ್ ವತಿಯಿಂದ 3 ವಿದ್ಯಾರ್ಥಿಗಳಿಗೆ ಕೊಡೆ , ಚೀಲ ವಿತರಿಸಲಾಯಿತು.ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಪೊಂಬೋಳಿ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉಪ ಅರಣ್ಯಧಿಕಾರಿ ಅಪೂರ್ವ ಕುಮಾರ ಪರಿಸರ ದಿನದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಶಂಕರ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮಪಂಚಾಯತ್ ಸದಸ್ಯ ಸತೀಶ್ ಕಳಿಗೆ , ಉಪ ಅರಣ್ಯ ಅಧಿಕಾರಿ ಅಪೂರ್ವ ಕುಮಾರ್ , ಎಸ್. ಡಿ.ಎಂ. ಸಿ ಅಧ್ಯಕ್ಷ ಯಶೋಧರ ಹೊಸೋಕ್ಲು , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಪೊಂಬೋಳಿ , ಯುವಕ ಮಂಡಲ ಬಿಳಿನೆಲೆ ಇದರ ಅಧ್ಯಕ್ಷ ಪ್ರದೀಪ್ ಸಣ್ಣಾರ , ನವಜೀವನ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಇದರ ಕಾರ್ಯದರ್ಶಿ ಉಮೇಶ್ ಕಾಯರ್ಗ , ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರಾದ ದಯಾನಂದ ಸಣ್ಣಾರ , ವಿನಯ ಕಳಿಗೆ, ಕುಮಾರ ಪರ್ಲ, ಹರ್ಷಿತ್ ಸೂಡ್ಲು ,ವಿಜೇಶ್ ಯೋಗ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರು ಸುನಂದಾ ಸ್ವಾಗತಿಸಿದರು, ಸಹ ಶಿಕ್ಷಕಿ ದಮಯಂತಿ ವಂದಿಸಿ, ಶಿಕ್ಷಕಿರಜನಿ ನಿರೂಪಿಸಿದರು.ದೈ ಶಿ ಶಿ ಚಂದ್ರಶೇಖರ್,ಪಾರ್ವತಿ ಮತ್ತು ಲತಾ ಪಿ ಎಸ್ ಸಹಕರಿಸಿದರು. ಕಾರ್ಯಕ್ರಮದ ನಂತರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶಾಲಾ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.