ಪುತ್ತೂರು: ಕುರಿಯ ಕೊಡ್ಲಾರು ನಿವಾಸಿ ಸುಂದರಿ ವಿ.ಶೆಟ್ಟಿಯವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಜೂ. 9 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಜರಗಿತು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ ಕುರಿಯ ಕೊಡ್ಲಾರು ಕೆ.ಪಿ.ವಿಠಲ ಶೆಟ್ಟಿಯವರ ಪತ್ನಿ ಸುಂದರಿ ವಿ.ಶೆಟ್ಟಿಯವರು ಸಮಾಜದಲ್ಲಿ ಆದರ್ಶಯುತ ಬದುಕನ್ನು ಸಾಗಿಸಿ, ಉತ್ತಮ ಗೃಹಿಣಿಯಾಗಿ ಊರಿನವರ ಮತ್ತು ಕುಟುಂಬದ ಬಂಧುಗಳ ಪ್ರೀತಿ-ವಿಶ್ವಾಸವನ್ನು ಪಡೆದಿದ್ದಾರೆ. ಅವರ ಜೀವನದ ಆದರ್ಶಗಳನ್ನು ನಾವೆಲ್ಲ ಅನುಕರಿಸಬೇಕು ಎಂದು ನುಡಿನಮನ ಸಲ್ಲಿಸಿದರು. ಸುಂದರಿ ವಿ.ಶೆಟ್ಟಿಯವರ ಪತಿ ಕೆ.ಪಿ.ವಿಠಲ ಶೆಟ್ಟಿ, ಮಕ್ಕಳು, ಅಳಿಯ, ಸೊಸೆಯಂದಿರು, ಕುಟುಂಬಸ್ಥರು, ಊರ-ಪರವೂರ ಹಿತೈಷಿಗಳು ಉಪಸ್ಥಿತರಿದ್ದರು.

