ಪುತ್ತೂರು: ಸ್ವರ ಮಾಧುರ್ಯ ಸಂಗೀತ ಬಳಗದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಗೌರವಾರ್ಪಣೆ ಕಾರ್ಯಕ್ರಮ ಜೂ.10 ರಂದು ಸಂಜೆ 3 ರಿಂದ ಪುತ್ತೂರು ಸುದಾನ ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ನಡೆಯಲಿದೆ. ಸುದಾನ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ವಿಜಯ ಹಾರ್ವಿನ್ ಅಧ್ಯಕ್ಷತೆ ವಹಿಸಲಿದ್ದು ಉದ್ಯಮಿ ಎಚ್.ಎಮ್ ನಂದಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಹೇಮನಾಥ ಶೆಟ್ಟಿ, ಕುಂಬ್ರ ದುರ್ಗಾಪ್ರಸಾದ್ ರೈ, ಡಾ.ರಘು ಬೆಳ್ಳಿಪ್ಪಾಡಿ, ಮಹಮ್ಮದ್ ಬಡಗನ್ನೂರು, ಎಂ.ವೆಂಕಪ್ಪ ಗೌಡ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಶೇಷಪ್ಪ ಬೆದ್ರಕಾಡು, ಕೇಶವ್ ಪಡೀಲ್, ಭಾಸ್ಕರ ಕೋಡಿಂಬಾಳ, ಜಗನ್ನಾಥ ರೈ ಜಿ, ಶೀನಾ ಮೂಲೆತ್ತಮಜಲು, ಸಿಶೇ ಕಜೆಮಾರ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಮೊದಲು ವಿ.ಕೆ ಜೋಡಿತಾರೆ ಪೂರ್ಣಿಮಾ ಕೃಷ್ಣರಾಜ್ ಇವರಿಂದ ಸಂಗೀತ ರಸಸಂಜೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸ್ವರ ಮಾಧುರ್ಯದ ನಿರ್ದೇಶಕಿ ಪ್ರಮೀಳಾ ಜನಾರ್ದನ್, ಕಾರ್ಯಕ್ರಮ ಸಂಘಟಕರಾದ ದಾಮೋದರ ಮುರ, ರಾಮಣ್ಣ ಪಿಲಿಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
