ಮನವಿ ನೀಡಲು ಬಂದ ವಿಕಲಚೇತನಗೆ ಎದ್ದು ನಿಂತು ಗೌರವ ಕೊಟ್ಟ ಶಾಸಕರು

0

ಪುತ್ತೂರು: ಪುತ್ತೂರಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಶಾಸಕರು ಜೂ. 9 ರಂದು ಸಂಜೆ ಕಾರ್ಯಕರ್ತರ ಸಭೆಯನ್ನು ಕರೆದಿದ್ದರು. ಸಭೆ ಆರಂಭವಾಗುತ್ತಿದ್ದಂತೆಯೇ ಅನೇಕ ಮಂದಿ ಫಲಾನುಭವಿಗಳು ಅರ್ಜಿಯೊಂದಿಗೆ ಶಾಸಕರ ಸುತ್ತ ನೆರೆದಿದ್ದರು. ನೂರಾರು ಸಮಸ್ಯೆಗಳನ್ನು ಹೊತ್ತ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದೆ ಹೇಳುತ್ತಿದ್ದರು. ಸುಮಾರು 10 ಕ್ಕೂ ಮಿಕ್ಕಿ ಸಾರ್ವಜನಿಕರ ಅರ್ಜಿಯನ್ನು ಶಾಸಕರು ಸ್ವೀಕರಿಸಿ ಕೆಲವರಿಗೆ ಸ್ಥಳದಲ್ಲೇ ಸಮಸ್ಯೆಯನ್ನು ಪರಿಹರಿಸಿದರು. ಕಚೇರಿಯಲ್ಲಿ ಕುಳಿತುಕೊಂಡೇ ಸಾರ್ವಜನಿಕರ ಸಮಸ್ಯೆಯನ್ನು ಆಲಿಸುತ್ತಿದ್ದರು. ಈ ನಡುವೆ ವಿಕಲಚೇತನ ಬಾಲಕನೋರ್ವ ತನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ತಂದೆಯೊಂದಿಗೆ ಶಾಸಕರ ಮುಂದೆ ಬಂದಾಗ, ಬಾಲಕ ವಿಕಲ ಚೇತನ ಎಂದು ಗೊತ್ತಾದಾಗ ಶಾಸಕರು ಎದ್ದು ನಿಂತು ಬಾಲಕನ ಅರ್ಜಿಯನ್ನು ಸ್ವೀಕರಿಸಿ ಆ ಬಾಲಕನ ಸಮಸ್ಯೆಯನ್ನು ಆಲಿಸಿ ತಕ್ಷಣವೇ ಸಮಸ್ಯೆಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಶಾಸಕರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here