ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸುಮಾರು 83 ರೌಡಿ ಶೀಟರ್ಗಳ ಮನೆಯಲ್ಲಿ ಆಯಾ ವ್ಯಾಪ್ತಿಯ ಠಾಣೆಯ ಪೊಲೀಸರು ಜೂ.11ರಂದು ಶೋಧ ನಡೆಸಿದ್ದಾರೆ.
ರೌಡಿ ಶೀಟರ್ಗಳ ಮನೆಗಳನ್ನು ಸ್ಥಳೀಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಅನಿರೀಕ್ಷಿತವಾಗಿ ತಪಾಸಣೆ ಕೈಗೊಂಡು ಅಕ್ರಮ ಆಯುಧಗಳ ಪತ್ತೆಗೆ ಶೋಧನೆ ನಡೆಸಿದ್ದಾರೆ. ಸದ್ರಿ ರೌಡಿ ಶೀಟರ್ಗಳಿಗೆ ಯಾವುದೇ ರೌಡಿ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಲಾಗಿರುತ್ತದೆ ಎಂದು ದ.ಕ.ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.