ಆಲಂಕಾರು ಭಾರತಿ ಹಿ ಪ್ರಾ ಶಾಲೆಯಲ್ಲಿ ಎಸ್.ಪಿ.ವೈ.ಎಸ್.ಎಸ್ ರವರಿಂದ ಉಚಿತ ಯೋಗ ತರಗತಿ ಉದ್ಘಾಟನೆ

0

ಯೋಗದಿಂದ ಅತ್ಮಸೈರ್ಯ ಹೆಚ್ಚುತ್ತದೆ – ಜಯರಾಮ್ ಮಂಗಳೂರು
ಶಾಲೆಗಳಿಂದ ಸಮಾಜ ಪರಿವರ್ತನೆಯಾಗಬೇಕು- ಡಾ!ಸುರೇಶ್ ಕುಮಾರ್ ಕುಡೂರು


ಆಲಂಕಾರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು ಇವರ ಸಹಯೋಗದೊಂದಿಗೆ ಉಚಿತ ಯೋಗ ತರಗತಿಯ ಉದ್ಘಾಟನಾ ಕಾರ್ಯಕ್ರಮ ಆಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಆಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಅಡಳಿತ ಮಂಡಳಿಯ ಅಧ್ಯಕ್ಷ ಆಯುರ್ವೆದ ವೈದ್ಯ ಡಾ.ಸುರೇಶ್ ಕುಮಾರ್ ಕುಡೂರು ಮಾತನಾಡಿ ಯೋಗಭ್ಯಾಸದಿಂದ ನಮ್ಮ ಅರೋಗ್ಯ ವರ್ಧನೆಯ ಜೊತೆಗೆ ಸಂಸ್ಕಾರ,ಸಂಸ್ಕೃತಿ, ಹೆಚ್ಚುತ್ತದೆ.ಯಾವುದೇ ಬಂಡವಾಳವಿಲ್ಲದೇ ಅರೋಗ್ಯ ಕಾಪಾಡಿಕೊಳ್ಳುವ ಏಕೈಕ ಸಾಧನವೇ ಯೋಗಭ್ಯಾಸ .ಮನುಷ್ಯನ ಕಾಯಿಲೆಯನ್ನು ಔಷಧಿ ಅರ್ಧದಷ್ಟು ಗುಣಪಡಿಸಿದರೆ ಅರ್ಧದಷ್ಟು ಕಾಯಿಲೆಯನ್ನು ವ್ಯಾಯಾಮ ಹಾಗು ಚಿಂತನೆ ಗುಣಪಡಿಸುತ್ತದೆ. ಬೆಳಗ್ಗಿನ ಯೋಗಭ್ಯಾಸದಿಂದ ನಮ್ಮ ಕಲ್ಪನೆಗೆ ಪೂರಕವಾದ ಶಕ್ತಿ ಬರುತ್ತದೆ ಇದರಿಂದ ಹೆಚ್ಚು ಪ್ರಯೋಜನವಾಗುತ್ತದೆ .ಶಾಲೆಯಿಂದ ಸಮಾಜದ ಪರಿವರ್ತನೆಯಾಗಬೇಕು .ಮನುಷ್ಯ ಜನ್ಮ ಜನ್ಮಾಂತರದಿಂದ ಮಾಡಿದ ಪುಣ್ಯದ ಫಲದಿಂದ ಮಾನವನಾಗಿ ಈ ಜನ್ಮ ಜನಿಸಿದ್ದಾನೆ . ಆ ಪ್ರಾಪ್ತವಾದ ಮಾನವ ಜನ್ಮಕ್ಕೆ ಮುಕ್ತಿ ಸಿಗಬೇಕಾದರೆ ಯೋಗ ಮತ್ತು ಸಂಸ್ಕಾರ ಅತೀ ಅಗತ್ಯ ಎಂದು ತಿಳಿಸಿ ಎಸ್.ಪಿ.ವೈ.ಎಸ್.ಎಸ್ ನವರು ನಡೆಸುತ್ತಿರುವ ಉಚಿತ ಯೋಗಭ್ಯಾಸಕ್ಕೆ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಾಹಾರೈಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಂಚಾಲಕ ಜಯರಾಮ ಮಾತನಾಡಿ ಯೋಗ ಅತ್ಮಸ್ಥೆರ್ಯವನ್ನು ಹೆಚ್ಚಿಸುತ್ತದೆ. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮೂಲಕ ಮಾಡುವ ಯೋಗಭ್ಯಾಸದಲ್ಲಿ ನಾವೆಲ್ಲರೂ ಯೋಗ ಬಂಧುಗಳು ಅಣ್ಣ, ಅಕ್ಕ, ಎಂದು ಎಲ್ಲರನ್ನು ಕರೆಯುವ ಮೂಲಕ ಭಾವನಾತ್ಮಕ ಸಂಬಂಧವನ್ನು ಯೋಗ ಬಂಧುಗಳಲ್ಲಿ ಬೆಸೆಯುತ್ತದೆ ಎಂದು ತಿಳಿಸಿ ಯೋಗವು ವೈಯ್ಯಕ್ತಿಕ,ಕೌಟುಂಬಿಕ,ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವಾಗುವುದರ ಜೂತೆಗೆ ಮಾನಸಿಕ ,ದೈಹಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. .ಕೆಲವರು ಸಮಸ್ಯೆಗಳನ್ನು ಕೆಲವರಲ್ಲಿ ತಿಳಿಸುತ್ತಾರೆ ಇನ್ನು ಕೆಲವರು ಸಮಸ್ಯೆಗಳನ್ನು ತಿಳಿಸದೇ ವೈಯ್ಯಕ್ತಿಕವಾಗಿ ಕೊರಗುತ್ತಾರೆ.ಅಂತಹ ,ಸಮಸ್ಯೆಗಳಿಗೆ ಯೋಗ ಅತ್ಯಂತ ಪರಿಣಾಮಕಾರಿಯಾಲಿದೆ. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮೂಲ ಉದ್ದೇಶ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಯೋಗಸ್ಪರ್ಶ ವಾಗಬೇಕು.ಯೋಗ ಸ್ಪರ್ಶದಿಂದ ಸಮಾಜದಲ್ಲಿರುವ ಎಲ್ಲರ ಅರೋಗ್ಯ ,ವೈಯಕ್ತಿಕ,ಮಾನಸಿಕ ,ದೈಹಿಕ ಸಮಸ್ಯೆಗಳು ನಿವಾರಣೆಯಾಗಿ ಸ್ವಾಸ್ತ್ಯ ಸಮಾಜ ನಿರ್ಮಾಣವಾಗಬೇಕು.
ತಾಯಿ ಭಾರತಾಂಬೆ ಜಗದ್ಗುರುವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಯೋಗ ಶಾಖೆಯ ಶಿಕ್ಷಕ ಸಂತೋಷ ಕುಮಾರ್ ಮಾತನಾಡಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಯಾವುದೇ ಫಲಾಪೇಕ್ಷೆ ಇಲ್ಲದೇ ಉಚಿತ ಯೋಗ ತರಗತಿಯನ್ನು ನೀಡುತ್ತಿದೆ ,ತರಗತಿ ನೀಡುತ್ತಿರುವ ಶಿಕ್ಷಕರಿಗೆ ಯಾವುದೇ ಅರ್ಥಿಕ ಲಾಭ ಹಾಗು ಸಂಭಾವಣೆಗಳಿಲ್ಲ, ಯೋಗಭ್ಯಾಸವನ್ನು ಮಾಡಿಸಿದ್ದೇವೆ ಎನ್ನುವ ಮಾನಸಿಕ ನೆಮ್ಮದಿ ಮಾತ್ರ ಎಂದು ತಿಳಿಸಿ ಉಪ್ಪಿನಂಗಡಿಯಲ್ಲಿ ಸತತ ನಾಲ್ಕು ವರ್ಷಗಳಿಂದ ನಿತ್ಯ ನಿರಂತರ ಮೂರು ಶಾಖೆಗಳಲ್ಲಿ ಯೋಗಭ್ಯಾಸ ನಡೆಯುತ್ತಿದೆ. ಉಪ್ಪಿನಂಗಡಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಪೆರಿಯಡ್ಕದ ಆನಂದರವರ ಮಂಗಳೂರಿನಲ್ಲಿ ಯೋಗಭ್ಯಾಸ ಮಾಡುತ್ತಿರುವ ಸಂಧರ್ಭದಿಂದ ಉಪ್ಪಿನಂಗಡಿಯಲ್ಲಿ ಯೋಗಭ್ಯಾಸ ಪ್ರಾರಂಭವಾಗಿ ನಂತರ ಉಪ್ಪಿನಂಗಡಿ ಶಾಖೆಯಲ್ಲಿ ಯೋಗಭ್ಯಾಸ ಮಾಡುತ್ತಿದ್ದ ರಾಜೇಶ್ ಶೆಟ್ಟಿ ಸಂಪ್ಯಾಡಿ ಹಾಗು ಸದಾಶಿವ ಶೆಟ್ಟಿ ಮಾರಂಗರವರ ಒತ್ತಾಸೆಯಂತೆ
ಆಲಂಕಾರಿನಲ್ಲಿ ಯೋಗ ಪ್ರಾರಂಭ ಮಾಡಬೇಕೆನ್ನುವ ಉದ್ದೇಶ ದಿಂದ ಆಲಂಕಾರಿನಲ್ಲಿ ಇದೀಗ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಚಿತ ಯೋಗ ಶಿಕ್ಷಣ ವನ್ನು ಪ್ರಾರಂಭ ಮಾಡಿದ್ದೇವೆ ಎಂದರು.

ಕಾರ್ಯಕ್ರಮವನ್ನು ಪ್ರಾರ್ಥನೆ ಶ್ರೇಯಾ ನೆರವೇರಿಸಿ, ಸರಿತಾ ಜನಾರ್ಧನ್ ಸ್ವಾಗತಿಸಿ, ತಾಲೂಕ್ ಯೋಗ ಸಹ ಶಿಕ್ಷಣ ಪ್ರಮುಖ್ ಪ್ರದೀಪ್ ಆಚಾರ್ಯ,ರಾಜೇಶ್ ಶೆಟ್ಟಿ ಸಂಪ್ಯಾಡಿ ,ಗುತ್ತಿಗೆದಾರರಾದ ಆನಂದ್ ಬಿ.ಕೆ ಅತಿಥಿಗಳನ್ನು ಸ್ವಾಗತಿಸಿ, ಸದಾಶಿವ ಶೆಟ್ಟಿ ಮಾರಂಗ ಕಾರ್ಯಕ್ರಮ ನಿರೂಪಿಸಿದರು,

ಉಪ್ಪಿನಂಗಡಿಯ ಯೋಗಶಿಕ್ಷಕಿ ಆಶಾ ಹೊಸ ಯೋಗ ಬಂಧುಗಳು ಪಾಲಿಸಬೇಕಾಸ ಸೂಚನೆಗಳನ್ನು ನೀಡಿ ,ಮಂಗಳೂರಿನ ಯೋಗ ಮಾರ್ಗದರ್ಶಕ ಆನಂದ ಯೋಗ ಮಾರ್ಗದರ್ಶನ ನೀಡಿ, ಅನ್ ಲೈನ್ ಯೋಗ ಬಂಧು ಲಲಿತಾವರು ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗಾಣಿಗ ಸಮುದಾಯ ಭವನದ ಯೋಗ ಶಿಕ್ಷಕ ಯಶೋಧರ ಆಚಾರ್ಯ ಸೇರಿದಂತೆ ಯೋಗ ಬಂಧುಗಳು ಸಹಕರಿಸಿದರು.

LEAVE A REPLY

Please enter your comment!
Please enter your name here