ನೆಲ್ಯಾಡಿ: ಕಂಟೈನರ್ ಲಾರಿ ಬಾಡಿಗೆ ತಾಗಿ ಬೈಕ್ ಪಲ್ಟಿ-ಸವಾರನಿಗೆ ಗಾಯ

0

ನೆಲ್ಯಾಡಿ: ಚಲಿಸುತ್ತಿದ್ದ ಕಂಟೈನರ್ ಲಾರಿಯ ಬಾಡಿಗೆ ತಾಗಿ ಬೈಕ್ ಪಲ್ಟಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡಿರುವ ಘಟನೆ ನೆಲ್ಯಾಡಿ ಪೇಟೆಯಲ್ಲಿ ಜೂ.10ರಂದು ರಾತ್ರಿ ನಡೆದಿದೆ.


ಬೈಕ್ ಸವಾರ ನೇಮಿರಾಜ ಗಾಯಗೊಂಡವರಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿ(ಕೆಎ 19 ಎಎ 5804)ಗೆ ನೆಲ್ಯಾಡಿ ಪೇಟೆಯಲ್ಲಿ ವಿರುದ್ಧ ದಿಕ್ಕಿನಿಂದ ಹೋಗುತ್ತಿದ್ದ ಬೈಕ್(ಕೆಎ21 ಇಎ 5827) ತಾಗಿದೆ. ಬೈಕ್ ಸವಾರ ದುಡುಕುತನ ಯಾ ನಿರ್ಲಕ್ಷತನದ ಚಲಾವಣೆಯ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಕಂಟೈನರ್ ಲಾರಿಯ ಬಾಡಿಗೆ ತಾಗಿ ಪಲ್ಟಿಯಾಗಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಸವಾರ ನೇಮಿರಾಜ ಅವರ ತಲೆಗೆ ಗಾಯವಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಘಟನೆ ಕುರಿತಂತೆ ನೆಲ್ಯಾಡಿ ಸಿಟಿ ಗ್ಲಾಸ್ ಅಂಗಡಿಯ ಶಕೀಲ್ ಅಹಮದ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here