ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಡಿಸೈನ್ ತಿಂಕಿಂಗ್ ತರಬೇತಿ ಉದ್ಘಾಟನೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಡಿಸೈನ್ ತಿಂಕಿಂಗ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜರಗಿತು.


ಶಾಲಾ ಹಿರಿಯ ವಿದ್ಯಾರ್ಥಿನಿ ಕೃತಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಶಾಲಾ ಹಿರಿಯ ವಿದ್ಯಾರ್ಥಿನಿ ನಮಿತಾ ಶುಭಹಾರೈಸಿದರು. ಟೆಕ್ನಾಲಜಿಯ ಉದ್ಯೋಗಿ ಜಯಪ್ರಕಾಶ್‌ರವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದಲ್ಲಿ Artificial Intelligence , Drones & Internet of things ಕುರಿತು ತರಬೇತಿಯನ್ನು ನೀಡಲಿದ್ದಾರೆ. ಶಾಲಾ ಮುಖ್ಯಗುರು ಸತೀಶ್ ಭಟ್ ಸ್ವಾಗತಿಸಿದರು. ತರಬೇತಿಯ ಸಂಯೋಜಿಕಿ ಶಾಲಾ ಶಿಕ್ಷಕಿಯಾದ ಮೋಕ್ಷ ವಂದಿಸಿದರು. ಶಾಲಾ ಶಿಕ್ಷಕವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here