ಕಥೋಲಿಕ್ ಸಭಾ ಕೇಂದ್ರೀಯ ಜೊತೆ ಕಾರ್ಯದರ್ಶಿಯಾಗಿ ಮಾಣಿಯ ರೋಶನ್ ಮಾರ್ಟಿಸ್ ಆಯ್ಕೆ

0

ಪುತ್ತೂರು:ಮಂಗಳೂರು ಧರ್ಮಕ್ಷೇತ್ರದ ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ 2023-24 ನೇ ಸಾಲಿಗೆ ವಾರ್ಷಿಕ ಚುನಾವಣೆಯು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆಯಿತು.


ನೂತನ ಕಾರ್ಯದರ್ಶಿಯಾಗಿ ಮಾಣಿ ಸೂರಿಕುಮೇರು ನಿವಾಸಿ ರೋಶನ್ ಭೊನಿಪಾಸ್ ಮಾರ್ಟಿಸ್ ರವರು ಆಯ್ಕೆಯಾಗಿದ್ದಾರೆ. ರೋಶನ್ ಮಾರ್ಟಿಸ್ ರವರು ಕರಾವಳಿ ಸುದ್ದಿ ವಾರಪತ್ರಿಕೆಯ ಸಂಪಾದಕರಾಗಿದ್ದು, ಬರಿಮಾರು ಚರ್ಚ್ ನ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಪಾನೀರ್, ಆಧ್ಯಾತ್ಮಿಕ ನಿರ್ದೇಶಕರಾಗಿ ವಂ| ಜೆ.ಬಿ.ಸಲ್ಡಾನ್ಹಾರವರು ಸೇರಿದಂತೆ ಉಳಿದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಈ ಸಂದರ್ಭದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here