ಇನ್ನರ್‌ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ

0

ಪುತ್ತೂರು: ಪುತ್ತೂರು ಇನ್ನರ್‌ವೀಲ್ ಕ್ಲಬ್‌ನ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂ. 15ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯಿತು.


ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ ಇನ್ನರ್‌ವೀಲ್ ಕ್ಲಬ್‌ನ ಜಿಲ್ಲಾ ಐಎಸ್‌ಒ ರಜನಿ ಭಟ್ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನೂತನ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಕಾರ್ಯದರ್ಶಿ ಶ್ರೀದೇವಿ ರೈ, ಉಪಾಧ್ಯಕ್ಷೆ ರಾಜೇಶ್ವರಿ ಆಚಾರ್, ಕೋಶಾಧಿಕಾರಿಯಾಗಿ ಸೀಮಾ ನಾಗರಾಜ್, ಕ್ಲಬ್‌ನ ಸಂಪಾದಕಿಯರಾದ ಸುಧಾ ಕಾರ್ಯಪ್ಪ, ಐಎಸ್‌ಓ ಆಶಾ ನಾಯಕ್, ವೆಬ್ ಕೋ-ಆರ್ಡಿನೇಟರ್ ವಚನಾ ಜಯರಾಮ್‌ ಮತ್ತು ನಿಕಟಪೂರ್ವ ಅಧ್ಯಕ್ಷೆ ಟೈನಿ ದೀಪಕ್ ಅವರಿಗೆ ಪದಪ್ರಧಾನ ಮಾಡಲಾಯಿತು. ನಿರ್ದೇಶಕರುಗಳಾದ ರಾಜಿ ಬಲರಾಮ್, ರಮಾ ಪ್ರಭಾಕರ್, ಪುಷ್ಪಾ ಕೆದಿಲಾಯ, ವೈ. ವಿಜಯಲಕ್ಷ್ಮಿ ಶೆಣೈ ವೀಣಾ ಬಿ.ಕೆ ಅವರನ್ನು ಗೌರವಿಸಲಾಯಿತು.
ಕಾರ್ಯದರ್ಶಿ ಮನೋರಮ ಸೂರ್ಯ ವರದಿ ವಾಚಿಸಿದರು. ಶ್ರೀದೇವಿ ರೈ ವಿವಿಧ ಕ್ಲಬ್ ಗಳಿಂದ ಬಂದಿರುವ ಪ್ರಶಂಸನಾ ಪತ್ರವನ್ನು ಮಂಡಿಸಿದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಟೈನಿ ದೀಪಕ್ ಸ್ವಾಗತಿಸಿದರು. ಕೃಷ್ಣವೇಣಿ ಮುಳಿಯ ಪ್ರಾರ್ಥಿಸಿದರು. ಅನಿತಾ ಎಸ್ ಶೆಟ್ಟಿ ಇನ್ನರ್ ವೀಲ್ ಪ್ರಾರ್ಥನೆ ನಡೆಸಿದರು.

LEAVE A REPLY

Please enter your comment!
Please enter your name here