ಬಂಟ್ವಾಳ ತಾಲೂಕು 51 ಗ್ರಾಮ ಪಂಚಾಯತ್‌ಗಳಿಗೆ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ

0

ವಿಟ್ಲ: ಬಂಟ್ವಾಳ ತಾಲೂಕಿನ 51 ಗ್ರಾಮ ಪಂಚಾಯತ್‌ಗಳಿಗೆ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ.ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.

ನೆಟ್ಲಮುಡ್ನೂರು ಗ್ರಾ.ಪಂ.ನ ಅಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ ಬಿ. ಮಹಿಳೆ ಮೀಸಲಾತಿ ಬಂದಿದ್ದು, ಸರಪಾಡಿ ಗ್ರಾ.ಪಂ.ನ ಉಪಾಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ ಬಿ.ಮಹಿಳೆ ಮೀಸಲು ಬಂದಿತ್ತು. ಆದರೆ ಈ ಗ್ರಾಮ ಪಂಚಾಯತ್‌ಗಳಲ್ಲಿ ಹಿಂದುಳಿದ ವರ್ಗ ಬಿ.ಮಹಿಳಾ ಸದಸ್ಯರೇ ಇಲ್ಲ ಎಂಬ ವಿಚಾರ ಆಯ್ಕೆ ಪ್ರಕ್ರಿಯೆ ನಡೆಯುವ ವೇಳೆ ಪ್ರಸ್ತಾಪವಾಗಿತ್ತಲ್ಲದೆ, ಕೆಲ ಹೊತ್ತು ಚರ್ಚೆಗೆ ಕಾರಣವಾಯಿತು. ಆದರೆ ಈ ಎರಡೂ ಮೀಸಲಾತಿ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಮೀಸಲಾತಿ ಪಟ್ಟಿ ಪ್ರಕಟಗೊಳಿಸಲಾಗಿದೆ.

ಬಂಟ್ವಾಳ ತಹಶಿಲ್ದಾರ್ ಎಸ್.ಬಿ.ಕೂಡಲಗಿ, ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ರಾಜಣ್ಣ, ಉಪತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಚುನಾವಣಾ ವಿಷಯ ನಿರ್ವಾಹಕ ಸೀತಾರಾಮ ಪೂಜಾರಿ, ಕಂದಾಯ ನಿರೀಕ್ಷಕರುಗಳಾದ ವಿಜಯ್ ಕುಮಾರ್, ಜನಾರ್ದನ, ಪ್ರಶಾಂತ್, ಸಿಬ್ಬಂದಿ ಶ್ರೀಕಲಾ, ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು. ಎನ್.ಐ.ಸಿ.ತಾಂತ್ರಿಕ ನಿರ್ದೇಶಕ ಅಶ್ವಿನ್ ಕುಮಾರ್ ಮತ್ತು ಅವರ ತಂಡ ಚುನಾವಣಾ ತಾಂತ್ರಿಕ ಪ್ರಕ್ರಿಯೆ ನಡೆಸಿಕೊಟ್ಟರು.

ಗ್ರಾ.ಪಂಗಳ ಮೀಸಲಾತಿ ಪಟ್ಟಿ:

ಕರೋಪಾಡಿ:ಅಧ್ಯಕ್ಷ -ಸಾಮಾನ್ಯ ಮಹಿಳೆ,ಉಪಾಧ್ಯಕ್ಷ-ಹಿಂದುಳಿದ ವರ್ಗ ಎ.
ಕನ್ಯಾನ:ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ,ಉಪಾಧ್ಯಕ್ಷ- ಸಾಮಾನ್ಯ.
ಪೆರುವಾಯಿ:ಅಧ್ಯಕ್ಷ- ಹಿಂದುಳಿದ ವರ್ಗ ಎ,ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.
ಮಾಣಿಲ: ಅಧ್ಯಕ್ಷ- ಸಾಮಾನ್ಯ,ಉಪಾಧ್ಯಕ್ಷ- ಎಸ್.ಸಿ.
ಮಾಣಿ:ಅಧ್ಯಕ್ಷ ಸಾಮಾನ್ಯ,ಉಪಾಧ್ಯಕ್ಷ -ಸಾಮಾನ್ಯ ಮಹಿಳೆ
ಪೆರಾಜೆ:ಅಧ್ಯಕ್ಷ- ಸಾಮಾನ್ಯ,ಉಪಾಧ್ಯಕ್ಷ- ಸಾಮಾನ್ಯ ಮಹಿಳೆ
ನೆಟ್ಲ ಮುಡ್ನೂರು:ಅಧ್ಯಕ್ಷ- ಹಿಂದುಳಿದ ಬಿ.ಮಹಿಳೆ,ಉಪಾಧ್ಯಕ್ಷ-ಸಾಮಾನ್ಯ
ಅನಂತಾಡಿ:ಅಧ್ಯಕ್ಷ-ಸಾಮಾನ್ಯ ಮಹಿಳೆ,ಉಪಾಧ್ಯಕ್ಷ – ಸಾಮಾನ್ಯ
ಕೆದಿಲ:ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ
ಪೆರ್ನೆ:ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ.,ಉಪಾಧ್ಯಕ್ಷ-ಎಸ್‌ಟಿ
ಇಡ್ಕಿದು: ಅಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ,ಉಪಾಧ್ಯಕ್ಷ – ಸಾಮಾನ್ಯ
ಅಳಿಕೆ:ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ವರ್ಗ ಎ ಮಹಿಳೆ.
ಕೇಪು: ಅಧ್ಯಕ್ಷ- ಹಿಂದುಳಿದ ವರ್ಗ ಎ,ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.
ಪುಣಚ:ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ.
ಕಡೇಶಿವಾಲಯ:ಅಧ್ಯಕ್ಷ-ಹಿಂದುಳಿದ ವರ್ಗ ಎ.ಮಹಿಳೆ, ಉಪಾಧ್ಯಕ್ಷ -ಸಾಮಾನ್ಯ.
ಬರಿಮಾರು:ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.
ವೀರಕಂಭ:ಅಧ್ಯಕ್ಷ-ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ ಎ
ಬೋಳಂತೂರು:ಅಧ್ಯಕ್ಷ-ಎಸ್.ಸಿ.ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ
ವಿಟ್ಲ ಮುಡ್ನೂರು: ಅಧ್ಯಕ್ಷ- ಹಿಂದುಳಿದ ವರ್ಗ ಬಿ.,ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.ಮಹಿಳೆ
ವಿಟ್ಲ ಪಡ್ನೂರು:ಅಧ್ಯಕ್ಷ-ಹಿಂದುಳಿದ ವರ್ಗ ಎ.,ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.
ಕೊಳ್ನಾಡು: ಅಧ್ಯಕ್ಷ- ಸಾಮಾನ್ಯ,ಉಪಾಧ್ಯಕ್ಷ-ಹಿಂದುಳಿದ ವರ್ಗ ಎ.ಮಹಿಳೆ.
ಸಾಲೆತ್ತೂರು:ಅಧ್ಯಕ್ಷ- ಸಾಮಾನ್ಯ ಮಹಿಳೆ,ಉಪಾಧ್ಯಕ್ಷ- ಹಿಂದುಳಿದ ವರ್ಗ ಎ.

LEAVE A REPLY

Please enter your comment!
Please enter your name here