ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ | ಸಾರ್ವಜನಿಕರಿಗೆ/ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಕೋರ್ಸ್ ಗಳು | ಶೈಕ್ಷಣಿಕ ಸಾಲದ ವ್ಯವಸ್ಥೆ
ಪುತ್ತೂರು: ಪುತ್ತೂರು ಎಂಬ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಜೊತೆಗೆ ಭವಿಷ್ಯದಲ್ಲಿ ಉದ್ಯೋಗ ಹಾಗೂ ಉದ್ಯಮವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವೃತ್ತಿ ಆಧಾರಿತ ಕೋರ್ಸ್ ಗಳನ್ನು ಸಮಾಜಕ್ಕೆ ಪರಿಚಯಿಸಿರುವುದು ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ಆಧುನಿಕತೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಅಕ್ಷಯ ಕಾಲೇಜಿನಲ್ಲಿ ಇದೀಗ 2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಬಾಕಿ ಇರುವ ಕೆಲವೇ ಸೀಟುಗಳಿಗೆ ದಾಖಲಾತಿ ಕೊನೆಗೊಳ್ಳುತ್ತಿದೆ. ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅಕ್ಷಯ ಕಾಲೇಜಿನಲ್ಲಿ ದಾಖಲಾತಿ ಗಿಟ್ಟಿಸಿಕೊಳ್ಳಲು ಮತ್ತು ಸುಂದರ ಭವಿಷ್ಯವನ್ನು ತಮ್ಮದಾಗಿಸಿಕೊಳ್ಳಲು ಸುವರ್ಣಾವಕಾಶವಾಗಿದೆ.
ವೃತ್ತಿಪರ ಕೋರ್ಸ್ ಗಳು:
ಕಾಲೇಜಿನಲ್ಲಿ ಬಿಕಾಂನ ಏವಿಯೇಶನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್, ಬಿಎಸ್ಸಿಯ ಫ್ಯಾಶನ್ ಡಿಸೈನಿಂಗ್, ಬಿಎಸ್ಸಿಯ ಇಂಟೀರಿಯರ್ ಡಿಸೈನ್ ಆಂಡ್ ಡೆಕೊರೇಶನ್, ಬಿಸಿಎಯ ಡಾಟ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಂಡ್ ಸೈಬರ್ ಸೆಕ್ಯೂರಿಟಿ, ಬಿ.ಎಚ್.ಎಸ್.ನ ಬ್ಯಾಚಲರ್ಸ್ ಇನ್ ಹಾಸ್ಪಿಟಾಲಿಟಿ ಸೈನ್ಸ್(ಹೊಟೇಲ್ ಮ್ಯಾನೇಜ್ಮೆಂಟ್) ಮುಂತಾದ ವೃತ್ತಿಪರ ಆಧಾರಿತ ಕೋರ್ಸ್ ಗಳನ್ನು ಸಂಸ್ಥೆ ಹೊಂದಿದ್ದು, ಜಾಗತಿಕವಾಗಿ ಹೆಚ್ಚಿನ ಅವಕಾಶವನ್ನು ಕಲ್ಪಿಸಿ ಗಮನ ಸೆಳೆಯುತ್ತಿದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕೊಡಗು ಹೀಗೆ ಸುತ್ತಮುತ್ತಲಿನ ಪ್ರದೇಶಗಳ ವಿದ್ಯಾರ್ಥಿಗಳಿಗೆ ವೃತ್ತಿರ ಕೋರ್ಸ್ ಗಳ ವ್ಯಾಸಂಗಕ್ಕೆ ಅಪೂರ್ವ ಅವಕಾಶವನ್ನು ಸಂಸ್ಥೆಯು ಕಲ್ಪಿಸಿಕೊಟ್ಟಿದ್ದು ಮಾತ್ರವಲ್ಲ ಇಂತಹ ಕೋರ್ಸ್ ಗಳನ್ನು ಪರಿಚಯಿಸಿರುವ ಏಕೈಕ ಕಾಲೇಜು ಎಂಬ ಹಿರಿಮೆಯನ್ನು ಹೊಂದಿರುತ್ತದೆ.
ಸಿಇಟಿ/ನೀಟ್ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್:
ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ಜೊತೆಗೆ ಅತ್ಯಂತ ಬಡ ವಿದ್ಯಾರ್ಥಿಗಳಿಗೆ ಕಲಿಕೆಗೆ ಪ್ರೋತ್ಸಾಹ ಮಾಡುವ ಮೂಲಕ ಸಂಸ್ಥೆಯು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುವತ್ತ ಮುನ್ನಡೆದಿದೆ. ಕಳೆದ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬಿಎಸ್ಸಿ ಫ್ಯಾಶನ್ ಡಿಸೈನ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿರುವುದು ಸಂಸ್ಥೆಯ ಮತ್ತೊಂದು ಮೈಲಿಗಲ್ಲು ಎನಿಸಿದೆ. ಇದೀಗ ಸಂಸ್ಥೆಯು ಸಿಇಟಿ ಹಾಗೂ ನೀಟ್ ಪರೀಕ್ಷೆ ಬರೆದು ರ‍್ಯಾಂಕ್ ಗಳಿಸದಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುವ ಮೂಲಕ ಮತ್ತೊಂದು ಹೆಜ್ಜೆಯನ್ನಿಟ್ಟಿದೆ. ಸಿಇಟಿ ಹಾಗೂ ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಉನ್ನತ ರ‍್ಯಾಂಕ್ ಗಳಿಸದಿದ್ದರೂ ಕಾಲೇಜಿನ ಯಾವುದೇ ಅತ್ಯುತ್ತಮ ವೃತ್ತಿಪರ ಪದವಿಗಳಿಗೆ ದಾಖಲಾತಿ ಸಂದರ್ಭ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶೇಷವಾದ ಸ್ಕಾಲರ್ ಶಿಪ್ ಒದಗಿಸಲಾಗುತ್ತದೆ ಎಂದು ಸಂಸ್ಥೆಯು ಪ್ರಕಟಣೆ ಹೊರಡಿಸಿದೆ. ಸಿಇಟಿ ಹಾಗೂ ನೀಟ್ ಪರೀಕ್ಷೆಯ ರ್ಯಾಂಕ್ ಗಳಿಸದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಸಾರ್ವಜನಿಕರಿಗೆ/ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಕೋರ್ಸ್ ಗಳು:
ಶಿಕ್ಷಣದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಈ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ 3 ತಿಂಗಳು, 6 ತಿಂಗಳು, 12 ತಿಂಗಳುಗಳ ವಿವಿಧ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಪ್ರಾರಂಭಿಸುತ್ತಿದೆ. ಯಾವುದೇ ಪದವಿ ಹೊಂದಿದವರಿಗೆ 6 ಅಥವಾ 12 ತಿಂಗಳಿನ ಏವಿಯೇಶನ್ ಆಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಕೋರ್ಸ್, ಎಸೆಸ್ಸೆಲ್ಸಿ ಪಾಸ್ ಅಥವಾ ಫೇಲ್ ಆದವರಿಗೆ 3 ಅಥವಾ 6 ತಿಂಗಳಿನ ಮೇಕಪ್ ಆಂಡ್ ಹೇರ್ ಸ್ಟೇಲ್ ಕೋರ್ಸ್, ಪಿಯುಸಿ ಪಾಸ್ ಅಥವಾ ಫೇಲ್ ಆದವರಿಗೆ 3 ಅಥವಾ 6 ತಿಂಗಳಿನ ಗ್ರಾಫಿಕ್ ಡಿಸೈನ್ ಕೋರ್ಸ್, ಯಾವುದೇ ಪದವಿ ಹೊಂದಿದವರಿಗೆ 10 ತಿಂಗಳ ಪಿಜಿಡಿಸಿಎ ಕಂಪ್ಯೂಟರ್ ತರಗತಿ, ಎಸೆಸ್ಸೆಲ್ಸಿ ಪಾಸ್ ಅಥವಾ ಫೇಲ್ ಆದವರಿಗೆ 3 ಅಥವಾ 6 ತಿಂಗಳಿನ ಟೈಲರಿಂಗ್ ಆಂಡ್ ಎಂಬ್ರಾಯಿಡರಿ ಕೋರ್ಸ್ ಅನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಲಿಯುವಂತಹ ಅವಕಾಶವಿದೆ.
ಶೈಕ್ಷಣಿಕ ಸಾಲದ ವ್ಯವಸ್ಥೆ:
ಪುತ್ತೂರಿನಿಂದ ಅನತಿ ದೂರದಲ್ಲಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಈ ಕಾಲೇಜು ವಿದ್ಯಾರ್ಥಿಗಳ ಸೃಜನಶೀಲ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದು ಮಾತ್ರವಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುತ್ತದೆ. ಇದೀಗ ಶೇ.75 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಅವರ ಕಲಿಕಾ ದೃಷ್ಟಿಕೋನದಿಂದ ಶೈಕ್ಷಣಿಕ ಸಾಲದ ವ್ಯವಸ್ಥೆಯನ್ನು ಸಂಸ್ಥೆಯಿಂದ ಮಾಡಿಕೊಡಲಾಗುತ್ತದೆ.
ಮಾಹಿತಿಗೆ ಸಂಪರ್ಕಿಸಿ:
ಸಂಸ್ಥೆಯನ್ನು ಚೇರ್ ಮ್ಯಾನ್ ಜಯಂತ್ ನಡುಬೈಲುರವರು ಪ್ರಾಂಶುಪಾಲ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಉಪನ್ಯಾಸಕ, ಬೋಧಕೇತರ ವೃಂದದ ಸಹಕಾರದೊಂದಿಗೆ ಸಮರ್ಥವಾಗಿ ಮುನ್ನೆಡೆಸುತ್ತಿದ್ದಾರೆ. ಕಾಲೇಜಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು 08251-298016, 9141160704, 8050108510, 8088381678 ನಂಬರಿಗೆ
ಅಲ್ಲದೆ www.akshayacollegeputtur.com ಸಂಪರ್ಕಿಸಬಹುದಾಗಿದೆ.