ಪುತ್ತೂರು: ಮುಂಬಯಿಯ ಜಿಯೋ ಕನ್ವೆನ್ಸ್ಯನ್ ಸೆಂಟರ್ ನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಅಖಿಲ ಭಾರತ ಶಾಸಕಾಂಗ ಸಮ್ಮೇಳನದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸಿದರು. ಸಮ್ಮೇಳನದಲ್ಲಿ ಶಾಸಕರಿಗೆ ತರಬೇತಿ ಸೇರಿದಂತೆ ಶಾಸಕಾಂಗ ವಿಚಾರಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ದೇಶದ ವಿವಿಧೆಡೆಯಿಂದ ಸುಮಾರು 2000 ಮಂದಿ ಸೇರಿದಂತೆ ವಿವಿಧ ರಾಜ್ಯಗಳ ಶಾಸಕರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.ಜೂನ್ 17ರ ಶನಿವಾರ ಸಮಾವೇಶಕ್ಕೆ ತೆರೆ ಬೀಳಲಿದೆ.