ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಫಿಲೋಮಿನಾ ಪಿಯು ಕಾಲೇಜಿಗೆ ಹಲವು ಪ್ರಶಸ್ತಿ

0

ಪುತ್ತೂರು: ರೆಸ್ಕ್ಯೂ ಇಂಡಿಯಾ 2023, 18ನೇ ರಾಷ್ಟ್ರಮಟ್ಟದ ಜೀವ ರಕ್ಷಕ ಈಜು ಸ್ಪರ್ಧೆ ಬೆಂಗಳೂರು ಇವರು ಆಯೋಜಿಸಿದ ಈಜು ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 9 ಚಿನ್ನ 5 ಬೆಳ್ಳಿ ಹಾಗೂ 2 ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.

ದ್ವಿತೀಯ ವಿಜ್ಞಾನ ವಿಭಾಗದ ಜೋತ್ಸ್ನಾ ಲೈಸಾ ಜಾನ್ಸನ್ ಇವರು 4×50 ಮೀ ಮೆಡ್ಲೇ ರಿಲೇ, 4ಷ50 ಮೀ ಫೂಲ್ ಲೈಫ್ ಸೇವರ್ ಮಿಕ್ಸಡ್ ರಿಲೇ, 4 x 25 ಮೀ. ಮ್ಯಾನಿಕಿನ್ ಕ್ಯಾರಿ ರಿಲೇ, 4ಷ50 ಒಬ್‌ಸ್ಟಾಕಲ್ ರಿಲೇಯಲ್ಲಿ ಒಟ್ಟು 4 ಚಿನ್ನದ ಪದಕ ಹಾಗೂ 100 ಮೀ ಮ್ಯಾನಿಕಿನಿ ಟೋ ವಿತ್ ಫಿನ್ಸ್ನಲ್ಲಿ ಒಂದು ಬೆಳ್ಳಿಯ ಪದಕವನ್ನು ಪಡೆದು ಕೊಂಡಿರುತ್ತಾರೆ.

ಪ್ರಥಮ ವಿಜ್ಞಾನ ವಿಭಾಗದ ನಂದನ್ ನಾಯಕ್ 12×5 ಮೀ. ಲೈನ್ ಥ್ರೋನಲ್ಲಿ 1 ಚಿನ್ನದ ಪದಕ, 4×50 ಮೀ ಮೆಡ್ಲೇ ರಿಲೇ ಮತ್ತು 4×25 ಮ್ಯಾನಿಕಿನ್ ಕ್ಯಾರಿ ರಿಲೇಯಲ್ಲಿ, 2 ಬೆಳ್ಳಿಯ ಪದಕ ಹಾಗೂ 4×50ಮೀ ಓಬ್‌ಸ್ಟಾಕಲ್ ರಿಲೇಯಲ್ಲಿ 1 ಕಂಚಿನ ಪದಕ ಪಡೆದುಕೊಂಡಿರುತ್ತಾರೆ. ದ್ವಿತೀಯ ವಿಜ್ಞಾನ ವಿಭಾಗದ ನೀತಿ ರೈ ಇವರು 4×25 ಮೀ ಮ್ಯಾನ್‌ಕಿನ್ ಕ್ಯಾರಿ ರಿಲೇ, 4×50ಮೀ ಓಬ್‌ಸ್ಟಾಕಲ್ ರಿಲೇ, 4×50 ಮೆಡ್ಲೇ ರಿಲೇ ಮತ್ತು 4×50 ಫುಲ್ ಲೈಫ್ ಸೇವರ್ ಮಿಕ್ಸ್ಡ್ ರಿಲೇಯಲ್ಲಿ 4 ಚಿನ್ನದ ಪದಕ 100 ಮೀ ಮ್ಯಾನಿಕಿನಿ ಟೋ ವಿತ್ ಫಿನ್ಸ್ನಲ್ಲಿ ಒಂದು ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ. ದ್ವಿತೀಯ ವಿಜ್ಞಾನ ವಿಭಾಗದ ಅದ್ವಿತ್ 4×50ಮೀ ಮೆಡ್ಲೇ ರಿಲೇ ಮತ್ತು 4×25 ಮೀ ಮ್ಯಾನ್‌ಕಿನ್ ಕ್ಯಾರಿ ರಿಲೆಯಲ್ಲಿ 2 ಬೆಳ್ಳಿ ಹಾಗೂ 4×50 ಮೀ ಓಬ್‌ಸ್ಟಾಕಲ್ ರಿಲೇಯಲ್ಲಿ 1 ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.

ಇವರುಗಳಿಗೆ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ರೋಹಿತ್ ಪ್ರಕಾಶ್. ದೀಕ್ಷಿತ್ ರಾವ್ ಇವರು ತರಬೇತಿ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲ ರೆ.ಫಾ.ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕರಾದ ಎಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here