ರಾಮಕುಂಜ: 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಉತ್ತಿರ್ಣರಾದ ಕೊಯಿಲ ಗ್ರಾಮದ ವಿದ್ಯಾರ್ಥಿಗಳಿಗೆ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಜೂ.15ರಂದು ನಡೆದ ಸಂಕ್ರಾತಿ ಪೂಜೆ ಸಂದರ್ಭ ಸನ್ಮಾನ ನಡೆಯಿತು.
ಅತಿಥಿಯಾಗಿದ್ದ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ, ಬಲ್ಯ ಉಮಾಮಹೇಶ್ವರಿ ದೇವಸ್ಥಾನದ ಸೇವಾ ಟ್ರಸ್ಟ್‌ನ ಕಾರ್ಯದರ್ಶಿಯೂ ಆದ ನಾರಾಯಣ ಎನ್ ಹಾಗು ಅವರ ಪತ್ನಿ ಬಲ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪುಷ್ಪಾ, ಬಲ್ಯ ರಾಜನ್ ದೈವಸ್ಥಾನದ ಪ್ರಮುಖರಾದ ದೇವಣ್ಣ ಕೊಲ್ಲಿಮಾರುರವರು ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಗ್ರಾಮ ಮಟ್ಟದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕೌಶಿಕ್ ಎಮ್ ಕೆ ಹೊಸಗದ್ದೆ, ಅನ್ವಿತ್ ಸಬಳೂರು ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ತೇಜಶ್ರೀ ಓಕೆ, ಚೈತನ್ಯ ಕಲ್ಕಾಡಿ ಅವರಗಳನ್ನು ಸನ್ಮಾನಿಸಲಾಯಿತು. ಉಳಿದಂತೆ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯಸವ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಸದಸ್ಯರಾದ ಶ್ರೀರಾಮ ಕೆಮ್ಮಾರ, ಸಂಜೀವ ಕೊನೆಮಜಲು, ಮುರಳಿಕೃಷ್ಣ ಬಡಿಲ, ಬೈಲುವಾರು ಸಂಚಾಲಕ ರವಿ ಸಂಕೇಶ ಮತ್ತಿತರರು ಉಪಸ್ಥಿತರಿದ್ದರು.