ಅಡ್ಡ ಮರದಲ್ಲಿ ಬಡ್ಡ ಕುಳಿತಿದ್ದಾನೆ ಎಂಬ ಹಲಸಿನ ಹಣ್ಣಿನ ಒಗಟಿನಂತೆ ವಿಭಿನ್ನ ರೀತಿಯಲ್ಲಿ ಹಲವು ವಿಧದ ಹಲಸನ್ನು ನಾವು
ಪುತ್ತೂರಿನ ಜೈನ ಭವನದಲ್ಲಿ ಶನಿವಾರ ಹಾಗೂ ಭಾನುವಾರ ನಡೆಯುತ್ತಿರುವ ಹಲಸಿನ ಮೇಳದಲ್ಲಿ ಕಾಣಬಹುದು. ಹಲವು ಬಗೆಯ ವೆರೈಟಿ ಹಲಸಿನ ಹಣ್ಣಿನ ಖಾಧ್ಯಗಳಿವೆ. ಒಂದನ್ನೊಂದು ಮೀರಿಸುವ ರುಚಿ.ಎಲ್ಲರೂ ಭೇಟಿ ಕೊಡಲೇ ಬೇಕಾದ ಒಂದು ಮೇಳ ಇದಾಗಿದೆ. ಕೇವಲ ಹಲಸಿಗೆ ಮಾತ್ರ ಸೀಮಿತವಾಗದೆ ಹಲವಾರು ಬಗೆಯ ಹಣ್ಣು ಹಂಪಲುಗಳು, ಔಷಧಿ ಮೂಲಿಕೆಗಳು, ಯಂತ್ರೋಪಕರಣಗಳು, ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಈ ಮೇಳವು ಒಳಗೊಂಡಿದೆ.
ಹಲಸಿನ ಹಣ್ಣಿನ ಘಮಘಮಿಸೋ ತಿನಿಸುಗಳು:
ಹಲಸಿನ ಹಣ್ಣಿನ ಕಬಾಬು, ಹಲಸಿನ ಹಣ್ಣಿನ ಮುಳ್ಕ, ಹಲಸಿನ ಹಣ್ಣಿನ ಕಡುಬು, ಹಲಸಿನ ಹಣ್ಣಿನ ಪತ್ರೊಡೆ, ಹಲಸಿನ ಹಣ್ಣಿನ ಕೇಸರಿಬಾತ್, ಹಲಸಿನ ಹಣ್ಣಿನ ಬೀಜದೊಡೆ, ಹಲಸಿನ ಹಣ್ಣಿನ ಪಾಯಸ, ಹಲಸಿನ ಹಣ್ಣಿನ ಚಿಪ್ಸ್, ಹಲಸಿನ ಹಣ್ಣಿನ ಬರ್ಗರ್ ,ಹಲಸಿನ ಹಣ್ಣಿನ ಐಸ್ ಕ್ರೀಮ್, ಹಲಸಿನ ಹಣ್ಣಿನ ಹೋಳಿಗೆ, ಹಲಸಿನ ಹಣ್ಣಿನ ಹಿಟ್ಟು ಹೀಗೆ ವೈವಿಧ್ಯಮಯ ತಿನಿಸುಗಳು ಇಲ್ಲಿವೆ.
ಮಾತ್ರವಲ್ಲದೆ ಹಲಸಿನ ಉಪ್ಪಿನಕಾಯಿ, ಹಲಸಿನ ಸಾಟ್, ಹಲಸಿನ ಸ್ಕ್ವಾಶ್, ಹಲಸಿನ ಹಣ್ಣಿನ ಜ್ಯೂಸ್, ಹಲಸಿನ ಹಣ್ಣಿನ ಹಪ್ಪಳ, ಹಲಸಿನ ಹಣ್ಣಿನ ಜಾಮೂನ್, ಸಂಡಿಗೆ ಉಪ್ಪು ನೀರಿನಲ್ಲಿ ಹಾಕಿದ ಹಲಸಿನ ಸೊಳೆ, ಮಾವು ಹೆಬ್ಬಲಸು ,ಹತ್ತಿಕಾಯಿ, ಮಸಾಲೆ ಹುಡಿಗಳು ,ರಾಸಾಯನಿಕಗಳನ್ನು ಬಳಸದೆ ವಿಶೇಷವಾಗಿ ತಯಾರಿಸಿದ ಉಪ್ಪಿನಕಾಯಿಗಳು, ದೇಶಿಯ ಉತ್ಪನ್ನಗಳು, ಹಲವಾರು ತರಹದ ಬಟ್ಟೆಗಳು, ಮಾವು ,ಪಪ್ಪಾಯ, ರಂಬುಟನ್ ಹೀಗೆ ಹಲವು ತರಹದ ವಸ್ತು, ಹಣ್ಣುಗಳು ಕೂಡ ಈ ಮೇಳದಲ್ಲಿದೆ.
ತೆಂಗಿನಕಾಯಿ ತುರಿಯುವ ಯಂತ್ರ, ಏಣಿ, ಹಲವು ವಿಧದ ಕತ್ತಿ ಅಂತಹ ಬೇರೆ ಬೇರೆ ಯಂತ್ರೋಪಕರಣಗಳಿವೆ. 150ಕ್ಕೂ ಅಧಿಕ ಜಾತಿಯ ತಾವರೆಯ ಗಿಡಗಳು, ಹಲವಾರು ಹಣ್ಣು ಹಂಪಲುಗಳ ಗಿಡಗಳು ಇವೆ.
ಜನರ ಆಗಮನವು ಈ ಹಲಸಿನ ಮೇಳಕ್ಕೆ ಶೋಭೆ. ಇಲ್ಲಿ ಮೇಳೈಸುತ್ತಿರುವ ಖಾದ್ಯಗಳ ಘಮ ತನ್ನತ್ತ ಜನರನ್ನು ಸೆಳೆಯುತ್ತಿದೆ. ಒಂದು ಉತ್ತಮ ಮೇಳವು ಇದಾಗಿದ್ದು ಯಾವೆಲ್ಲ ರೀತಿಯ ಹಲಸು ಹಣ್ಣುಗಳಿವೆ ಎಂಬುದನ್ನು ನಾವಿಲ್ಲಿ ಕಾಣಬಹುದಾಗಿದೆ. ಒಮ್ಮೆ ಯಾವುದಾದರೊಂದು ಪದಾರ್ಥವನ್ನು ತಿಂದರೆ ಇನ್ನೂ ಬೇಕೆನಿಸುವಂತಹ ರುಚಿಯನ್ನು ಹೊಂದಿದೆ.
ಎಲ್ಲಾ ಹಣ್ಣು ಹಂಪಲುಗಳು ಗಿಡಗಳು ನಶಿಸಿ ಹೋಗುತ್ತಿರುವ ಈ ಕಾಲದಲ್ಲಿ ಇಂತಹ ಮೇಳ ಬಹಳ ಮುಖ್ಯವಾಗಿದೆ. ಅನೇಕರಿಗೆ ಇಲ್ಲಿ ಇರುವಂತಹ ಅನೇಕ ವಿಚಾರಗಳು ವಸ್ತುಗಳು ಹಣ್ಣು ಹಂಪಲುಗಳ ಪರಿಚಯವೇ ಇರುವುದಿಲ್ಲ ಆದ್ದರಿಂದ ಇಂತಹ ಮೇಳ ನಡೆಸಿದ್ದಲ್ಲಿ ಹಲವರಿಗೆ ಹಲವಾರು ವಿಧದಲ್ಲಿ ಅನುಕೂಲವಾಗುತ್ತದೆ.
ದೀಪ್ತಿ ಅಡ್ಡಂತ್ತಡ್ಕ
ಪತ್ರಿಕೋದ್ಯಮ ವಿದ್ಯಾರ್ಥಿನಿ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು