ಬೆದ್ರಾಳ ರೈಲ್ವೇ ಬ್ರಿಡ್ಜ್ ಬಳಿ ರಸ್ತೆಯಲ್ಲಿ ಹರಡಿದ ಜೆಲ್ಲಿಕಲ್ಲು-ಬೈಕ್ ಸವಾರರು ಪಲ್ಟಿ

0

ಪುತ್ತೂರು: ಬೆದ್ರಾಳ ರೈಲ್ವೇ ಬ್ರಿಡ್ಜ್ ಬಳಿ ರಸ್ತೆಯಲ್ಲಿ ಹರಡಿದ ಜೆಲ್ಲಿಕಲ್ಲುಗಳ ರಾಶಿಯಲ್ಲಿ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜೂ. 17ರಂದು ನಡೆದಿದೆ.


ರೈಲ್ವೇ ಹಳಿಗಳ ಕೆಲಸ ನಡೆಯುತ್ತಿದ್ದ ಸಂದರ್ಭ ಹಳಿಗಳಿಗೆ ಜೆಲ್ಲಿ ಹಾಕುವ ವೇಳೆ ಬೆದ್ರಾಳ ರೈಲ್ವೇ ಬ್ರಿಡ್ಜ್ ಬಳಿಯೂ ಹಳಿಗಳ ಮೇಲಿಂದ ಜೆಲ್ಲಿಕಲ್ಲುಗಳು ಕೆಳಗೆ ಡಾಮರು ರಸ್ತೆಗೆ ಬಿದ್ದು ಹರಡಿಕೊಂಡಿತ್ತು. ಇದರಿಂದ ಆ ರಸ್ತೆಯಾಗಿ ಹೋಗುತ್ತಿದ್ದ ಅನೇಕ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here