ಪಡೆದ ಲಂಚ ಮರಳಿ ಕೊಡಿಸಿದ ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು: ಶೇಂದಿ ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ತಡೆದು ಆತನ ವಿರುದ್ದ ಪ್ರಕರಣ ದಾಖಲಿಸಿ, ವಾಹನ ಸೀಝ್ ಮಾಡಿದ್ದಲ್ಲದೆ ಆತನಿಂದ ಲಂಚವನ್ನು ಪಡೆದ ಅಧಿಕಾರಿಯಿಂದ ಲಂಚದ ಹಣವನ್ನು ಶಾಸಕರು ಮರಳಿ ಕೊಡಿಸಿದ್ದಾರೆ.


ಕೋಡಿಂಬಾಡಿಯ ಮಹಿಷಮರ್ಧಿನಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಿಷಯ ತಿಳಿಸಿದ ಶಾಸಕ ಅಶೋಕ್ ರೈ ಶೇಂದಿ ಕೊಂಡೊಯ್ಯತ್ತಿದ್ದ ಓರ್ವ ಬಡಪಾಯಿಯ ವಾಹನ ನಿಲ್ಲಿಸಿದ್ದ ಅಬಕಾರಿ ಇಲಾಖೆಯವರು ಆತನನ್ನು ತಡೆದು ಶೇಂದಿ ಕೊಂಡು ಹೋಗುವುದು ಯಾಕೆ ಎಂದೆಲ್ಲಾ ಆತನನ್ನು ಬೆದರಿಸಿ ಆತನ ವಿರುದ್ದ ಪ್ರಕರಣ ದಾಖಲಿಸಿದ್ದು ಮಾತ್ರವಲ್ಲದೆ ಆತನ ವಾಹನವನ್ನು ಜಪ್ತಿ ಮಾಡಿದ್ದಾರೆ. ಆ ಬಳಿಕ ಆತನಿಂದ 50000ರೂ . ಲಂಚವನ್ನು ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಆತ ತನ್ನ ಬಳಿ ಹೇಳಿದಾಗ ಕಚೇರಿಗೆ ಅಧಿಕಾರಿಯನ್ನು ಕರೆಸಿ ಲಂಚ ಪಡೆದುಕೊಂಡಿದ್ದ ಮೊತ್ತವನ್ನು ಶೇಂದಿ ಮಾರಾಟಗಾರನಿಗೆ ಮರಳಿಸಿದ್ದೇನೆ. ಅನ್ಯಾಯವಾಗಿ ಓರ್ವ ಬಡಪಾಯಿಯಿಂದ ಲಂಚ ಪಡೆದುಕೊಳ್ಳುತ್ತಾರೆಂದರೆ ಏನೆನ್ನಬೇಕು. ಲಂಚ,ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಹೇಳಿದರು.ಡಾ ಯು.ಪಿ ಶಿವಾನಂದ್‌ ಅವರ “ಸುದ್ದಿ” ಜನಾಂದೋಲನ ವೇದಿಕೆಯ ನೇತೃತ್ವದಲ್ಲಿ ಕಳೆದ 2 ವರ್ಷಗಳಿಂದ ಭ್ರಷ್ಟಚಾರ ವಿರೋಧಿ ಅಭಿಯಾನ ನಡೆಸುತ್ತಿದ್ದು ಇದಕ್ಕೆ ಶಕ್ತಿ ತುಂಬುವಂತೆ ನಡೆದುಕೊಂಡ ಶಾಸಕರ ಭ್ರಷ್ಟಚಾರ ವಿರೋಧಿ ನಿಲುವಿನ ಬಗ್ಗೆ ಸಾರ್ವಜನಿಕರಿಂದ ಮುಕ್ತ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here