ಬೆಥನಿ ಪ.ಪೂ.ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಚುನಾವಣೆ

0

ನಾಯಕನಾಗಿ ಮಿಲ್ಜಿತ್ ಆಯ್ಕೆ

ನೆಲ್ಯಾಡಿ: ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಯಂತ್ರದ ಮೂಲಕ ವಿದ್ಯಾರ್ಥಿ ಸರಕಾರದ ಚುನಾವಣೆ ಜೂ.17ರಂದು ನಡೆಯಿತು.
ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸಲು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುವ ಉದ್ದೇಶದಿಂದ ಮತದಾನದ ಮೂಲಕ ಶಾಲಾ ನಾಯಕರನ್ನು ಚುನಾಯಿಸಲಾಯಿತು. ಶಾಲಾ ನಾಯಕನಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಮಿಲ್ಜಿತ್‌ರವರು ಆಯ್ಕೆಯಾದರು. ಉಳಿದಂತೆ ಗೃಹ ಮಂತ್ರಿಯಾಗಿ ಅಕ್ಷಯ್ ಪ್ರಿನ್ಸ್, ಶಿಕ್ಷಣ ಮಂತ್ರಿಯಾಗಿ ಆಲ್ಬಿನ್ ಬಿನು, ಸಂವಹನ ಮಂತ್ರಿಯಾಗಿ ಜಿಶ್ಮ ಜಾನ್, ಕ್ರೀಡಾ ಮಂತ್ರಿಯಾಗಿ ಶಾರೋನ್ ರೋಯಿ, ಸಾಂಸ್ಕೃತಿಕ ಮಂತ್ರಿಯಾಗಿ ಎಸ್.ಎಂ ಸಾರ್ಥಕ್, ನೀರಾವರಿ ಮಂತ್ರಿಯಾಗಿ ಆಶಿಶ್ ಬಾಸ್, ಪಾರ್ಲಿಮೆಂಟರಿ ಮಂತ್ರಿಯಾಗಿ ಫಾತಿಮತ್ ಫಿದಾ, ಆರೋಗ್ಯ ಮಂತ್ರಿಯಾಗಿ ಅನ್ಸ್ಲೀನರವರು ಆಯ್ಕೆಯಾದರು.

LEAVE A REPLY

Please enter your comment!
Please enter your name here