ಜು 3-ಸೆ 29: ಪಡುಕುತ್ಯಾರಿನಲ್ಲಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ 19ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆ-ಪೂರ್ವಭಾವಿ ಸಭೆ

0

ಜು. 8ರಂದು ಪುತ್ತೂರು ವಿಶ್ವಕರ್ಮ ಸಮಾಜ ಭಾಂದವರಿಂದ ಹೊರೆಕಾಣಿಕೆ ಸಮರ್ಪಣೆ

ಕುಲ ಗುರುಗಳ ಸೇವೆ, ಕುಲ ದೇವರ ಪೂಜೆ ಸಮಾಜದ ಧ್ಯೇಯವಾಗಿರಬೇಕು – ಗಣೇಶ್ ಆಚಾರ್ಯ ಕೆಮ್ಮಣ್ಣು
ಸಮಾಜ ಮತ್ತು ಮಠ ಕೊಂಡಿಯಾಗಿರಬೇಕು – ಲೋಲಾಕ್ಷ ಆಚಾರ್ಯ

ಪುತ್ತೂರು: ಕುಲ ಗುರುಗಳ ಸೇವೆ, ಕುಲ ದೇವರ ಪೂಜೆ ಮಾಡುವುದು ನಮ್ಮ ಸಮಾಜದ ಧ್ಯೇಯವಾಗಿರಬೇಕು ಎಂದು ಪಡುಕುತ್ಯಾರು ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿಯ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು ಹೇಳಿದರು.

ಜು. 3ರಿಂದ ಸೆ. 29ರವರೆಗೆ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ ಪಡುಕುತ್ಯಾರಿನಲ್ಲಿ ನಡೆಯಲಿರುವ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಯವರ ಶೋಭಕೃತ್ ನಾಮ ಸಂವತ್ಸರದ 19ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆ ಕಾರ್ಯಕ್ರಮದ ಪ್ರಯುಕ್ತ ಪುತ್ತೂರು ವಲಯದ ಗುರುಸೇವಾ ಪರಿಷತ್ ನ ನೇತೃತ್ವದಲ್ಲಿ ಪುತ್ತೂರು ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಜೂ 18ರಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶ್ರೇಷ್ಠ ಕುಲದಲ್ಲಿ ಜನಿಸಿದ ನಾವು ನಮ್ಮ ಶಿಲ್ಪ ಹಾಗೂ ವೈದಿಕ ಶಾಸಗಳನ್ನು ಅಭ್ಯಾಸ ಮಾಡಿ ಅನುಷ್ಠಾನಗೊಳಿಸಬೇಕು. ಗುರುಗಳ ಚಾತುರ್ಮಾಸ್ಯ ವೃತಾಚರಣೆಯ ಸಂದರ್ಭದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಅವರು ಹೇಳಿದರು.

ಪಡುಕುತ್ಯಾರು ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಲೋಲಾಕ್ಷ ಆಚಾರ್ಯ ಮಾತನಾಡಿ, ಶ್ರೀಮತ್ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಕ್ಕೆ ಸುಮಾರು 2,3೦೦ ವರ್ಷಗಳ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಅಸ್ಥಾನ ಗುರುಗಳಾಗಿದ್ದರು. ಸಾಮ್ರಾಜ್ಯ ಪತನಗೊಂಡ ನಂತರ ಆಗಿನ ಗುರುಗಳಾದ ನಾಗಧರ್ಮೇಂದ್ರ ಮಹಾಸ್ವಾಮಿಗಳು ಕಟಪಾಡಿಗೆ ಬಂದು ನೆಲೆಸಿದರು. ವಿಶ್ವಕರ್ಮರಿಗೆ ಇರುವುದೊಂದೇ ಪೀಠ, ಅದು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ. ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಚಾತುರ್ಮಾಸ್ಯ ವೃತಾಚರಣೆಯಲ್ಲಿ ನಾವೆಲ್ಲ ಭಾಗಿಗಳಾಗಿ ಪುನೀತರಾಗೋಣ. ಈ ನಿಟ್ಟಿನಲ್ಲಿ ಕಾರ್ಯಕ್ರಮದ ಆಮಂತ್ರಣ ಪ್ರತಿ ಮನೆ ಮನೆಗೂ ತಲುಪಬೇಕು ಎಂದರು. ಮಠದಲ್ಲಿ ನಡೆಯುವ ಪ್ರತಿಯೊಂದು ಅಭಿವೃದ್ಧಿ ಕೆಲಸಗಳು ಪ್ರತಿ ಮನೆಗೆ ತಲುಪಬೇಕು ಮತ್ತು ಪ್ರತಿ ಮನೆಯ ವಿಚಾರಗಳು ಮಠಕ್ಕೆ ತಲುಪಬೇಕು. ಈ ನಿಟ್ಟಿನಲ್ಲಿ ಸಮಾಜ ಮತ್ತು ಮಠ ಕೊಂಡಿಯಾಗಿರಬೇಕು ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಪುತ್ತೂರು ವಲಯದ ಗುರುಸೇವಾ ಪರಿಷತ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಜಯಪ್ರಕಾಶ್ ಆಚಾರ್ಯ ಕುಡ್ಚಿಲ, ಕೋಶಾಧಿಕಾರಿ ನಿರಂಜನ್ ಆಚಾರ್ಯ ಉಪಸ್ಥಿತರಿದ್ದರು. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಪ್ರಾರ್ಥಿಸಿದರು. ಪುತ್ತೂರು ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಮಾಜಿ ಅಧ್ಯಕ್ಷ ಉದಯ ಕುಮಾರ್ ಆಚಾರ್ಯ ಕೆಮ್ಮಾಯಿ ವಂದಿಸಿದರು.

ಚಾತುರ್ಮಾಸ್ಯ ವೃತಾಚರಣೆ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ – ಪುರುಷೋತ್ತಮ ಆಚಾರ್ಯ ಕೊಕ್ಕಡ
ಪುತ್ತೂರು ವಲಯದ ಗುರುಸೇವಾ ಪರಿಷತ್ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಕೊಕ್ಕಡರವರು, ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಗುರುಸೇವಾ ಪರಿಷತ್ ನ ಪುತ್ತೂರು ವಲಯದ ಬಗ್ಗೆ ಪಡುಕುತ್ಯಾರಿನಲ್ಲಿ ಹೆಮ್ಮೆಯಿದೆ. ಜು 3ರಿಂದ ಸೆ 29ರ ತನಕ ನಡೆಯುವ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಚಾತುರ್ಮಾಸ್ಯ ವೃತಾಚರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಕಾರ್ಯಕ್ರಮದ ಪ್ರಯುಕ್ತ ಜು 8ರಂದು ಪುತ್ತೂರು ವಲಯದ ಸಮಾಜ ಬಾಂಧವರಿಂದ ಹೊರೆಕಾಣಿಕೆ ನಡೆಯಲಿದೆ. ಜಗದ್ಗುರುಗಳ ಶೈಕ್ಷಣಿಕ ಯೋಜನೆಯನ್ವಯ ಆನೆಗುಂದಿ ಶ್ರೀ ಸರಸ್ವತಿ ಎಜ್ಯುಕೇಶನಲ್ ಟ್ರಸ್ಟ್ ಸುಮಾರು ರೂ 6ಕೋಟಿ ವೆಚ್ಚದಲ್ಲಿ ಕುತ್ಯಾರಿನ ಸೂರ್ಯಚೈತನ್ಯ ಗ್ಲೋಬಲ್ ಹೈಸ್ಕೂಲ್ ನ ಖರೀದಿಗಾಗಿ ಮುಂಗಡ ಹಣ ಪಾವತಿಸಿ ಶಿಕ್ಷಣ ಸಂಸ್ಥೆಯ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಶಕ್ತ್ಯಾನುಸಾರ ದೇಣಿಗೆ ನೀಡಿ ಸಹಕರಿಸಬೇಕು ಎಂದರು.

LEAVE A REPLY

Please enter your comment!
Please enter your name here