ದುಷ್ಕರ್ಮಿಗಳಿಂದ ಕೊಲೆಗೀಡಾದವರ ಕುಟುಂಬಗಳಿಗೆ ಮುಖ್ಯಮಂತ್ರಿಯಿಂದ ತಲಾ 25 ಲಕ್ಷ ಪರಿಹಾರ ವಿತರಣೆ

0

ಪುತ್ತೂರು: ವಿವಿಧ ಸಂದರ್ಭಗಳಲ್ಲಿ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಕೊಲೆಗೀಡಾದ ನಾಲ್ವರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪರಿಹಾರದ ಚೆಕ್ ವಿತರಣೆ ಮಾಡಿದರು.

ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ನಾಲ್ವರ ಕುಟುಂಬಗಳಿಗೂ ತಲಾ 25 ಲಕ್ಷದಂತೆ ಪರಿಹಾರ ನೀಡಲಾಯಿತು. ದೀಪಕ್ ರಾವ್, ಜಲೀಲ್, ಪಾಝಿಲ್ ಮತ್ತು ಮಸೂದ್ ಕುಟುಂಬಗಳಿಗೆ ಪರಿಹಾರ ವಿತರಣೆ ಮಾಡಲಾಯಿತು. ಕುಟುಂಬದ ಸದಸ್ಯರು ಚೆಕ್ ಪಡೆದುಕೊಂಡರು.
ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಈ ನಾಲ್ಕು ಕುಟುಂಬಗಳಿಗೆ ಪರಿಹಾರ ನೀಡಿರದ ಕಾರಣ ಸಿದ್ದರಾಮಯ್ಯ ಅವರು ಮುಂಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಅವರ ಬಳಿ ನಿಯೋಗ ತೆರಳಿ ಪರಿಹಾರ ನೀಡುವಲ್ಲಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ತಾರತಮ್ಯ ಮಾಡಿದ್ದು , ಪರಿಹಾರ ನೀಡುವಂತೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮುಂಖ್ಯ ಮಂತ್ರಿ ಸಿದ್ದರಾಮಯ್ಯ ಸರಕಾರ ನಡಸುವುದು ತೆರಿಗೆ ಹಣದಿಂದ, ಸರಕಾರಕ್ಕೆ ಎಲ್ಲರೂ ಸಮಾನರು. ಬಿಜೆಪಿ ಬೇಕಾದವರಿಗೆ ಮಾತ್ರ ಪರಿಹಾರ ವಿತರಿಸಿದ್ದಾರೆ. ನಾವು ಎಲ್ಲರನ್ನು ಸಮಾನವಾಗಿ ನೋಡಿವುದರಿಂದ ಹತ್ಯೆಯಾದ 6 ಜನರ ಕುಟುಂಬಸ್ಥರಿಗೆ ಧನ ಸಹಾಯ ಮಾಡಿದ್ದೇವೆ, ಹಾಗೆಯೇ 6 ಕುಟುಂಬಕ್ಕೂ ಉದ್ಯೋಗ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಪ್ರವೀಣ್‌ ನೆಟ್ಟಾರ್‌ ಕೊಲೆ ನಡೆದ ಸಂದರ್ಭದಲ್ಲಿ ಅನುಮಾನ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ನ್ಯಾಯಯುತವಾಗಿ ನೆಟ್ಟಾರು ಪ್ರಕರಣದ ತನಿಖೆ ನಡೆಸುವ ಮಾಹಿತಿ ನೀಡಿದ್ದಾರೆ. ಕೋಮುದ್ವೇಷದಲ್ಲಿ ಯಾವ ಧರ್ಮದವರೂ ಸಾಯಬಾರದು. ಕೋಮು ಸೌಹಾರ್ದತೆ ರಾಜ್ಯದಲ್ಲಿ ಮೂಡಬೇಕು. ನೈತಿಕ ಪೊಲೀಸ್‌ ಗಿರಿ ನಡೆಯದಂತೆ ಖಡಕ್‌ ಸೂಚನೆ ನೀಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ರೈ, ಸಲೀಮ್‌ ಅಹಮದ್‌, ಝಮೀರ್‌ ಅಹಮದ್‌, ಶಾಹುಲ್‌ ಹಮೀದ್‌, ತನ್ವೀರ್‌ ಸೇಟ್‌, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here