ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಮತದಾನ

0

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಮತದಾನ ನಡೆಯಿತು. ವಿದ್ಯಾರ್ಥಿ ನಾಯಕ ಸ್ಥಾನಕ್ಕೆ ಹತ್ತನೇ ತರಗತಿಯ 7 ವಿದ್ಯಾರ್ಥಿಗಳು ಹಾಗೂ ಉಪ ನಾಯಕನ ಸ್ಥಾನಕ್ಕೆ ಏಳನೇ ತರಗತಿಯ 11 ವಿದ್ಯಾರ್ಥಿಗಳು ಕಣದಲ್ಲಿದ್ದರು. ನಾಮಪತ್ರ ಸಲ್ಲಿಕೆಗೆ ಚುನಾವಣಾ ಆಯೋಗದ ನಿರ್ಧಾರದಂತೆ ಪಠ್ಯ ಮತ್ತು ಇತರ ಚಟುವಟಿಕೆಗಳ ಅರ್ಹತೆಗಳ ಮೇಲೆ ಸಲ್ಲಿಸಬೇಕಾಗಿತ್ತು. ನಾಮಪತ್ರ ಹಿಂತೆಗೆತಗಳ ಪ್ರಕ್ರಿಯೆಗಳ ಬಳಿಕ ಪೂರ್ವಾಹ್ನ ನಾಮನಿರ್ದೇಶಿತ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಭಾಷಣ ನಡೆಯಿತು. ಮತದಾನದ ನಿಯಮಾವಳಿಗಳನ್ನು ಸಹ ಶಿಕ್ಷಕಿ ರೇಖಾ ತಿಳಿಸಿಕೊಟ್ಟರು.


ಭಾರತದ ಸಂವಿಧಾನದ ಚುನಾವಣಾ ಪದ್ಧತಿಯಂತೆ, ಚುನಾವಣಾ ಆಯೋಗ, ಮತದಾನ ಕೇಂದ್ರ, ಗುರುತು ಚೀಟಿ, ಕೈಗೆ ಶಾಯಿ, ಮತದಾನ ಮಾಡುವ ಮೊಹರು, ಮತದಾನ ಚೀಟಿ, ಮತದಾನ ಪೆಟ್ಟಿಗೆ, ಮತ ಎಣಿಕೆ, ಮೊದಲಾದವುಗಳನ್ನು ಶಿಕ್ಷಕರೇ ನಿರ್ವಹಿಸಿ, ಪಾರದರ್ಶಕವಾಗಿ ಮಾಡುವುದರ ಮೂಲಕ ಮತದಾನದ ಕಾರ್ಯರೂಪವನ್ನು ವಿದ್ಯಾರ್ಥಿಗಳು ಅನುಭವಿಸಿದರು. ಫಲಿತಾಂಶದಲ್ಲಿ ವಿದ್ಯಾರ್ಥಿ ನಾಯಕ ಸ್ಥಾನಕ್ಕೆ ಸೃಜನ ರೈ.ಎ ಹಾಗೂ ಉಪ ನಾಯಕ ಸ್ಥಾನಕ್ಕೆ ಕುಮಾರಿ ವಂಧ್ಯಾ ಆಯ್ಕೆಯಾದರು.

ಪ್ರಾಂಶುಪಾಲರಾದ ಜಯರಾಮ ರೈ ರವರ ನಿರ್ದೇಶನದಂತೆ ಮತದಾನ ಪ್ರಕ್ರಿಯೆ ನಡೆಯಿತು.
ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಶಿಕ್ಷಕ ಗುರುವಪ್ಪ ನಾಯ್ಕ ಶಾಲಾ ದೈಹಿಕ ಶಿಕ್ಷಕರಾದ ಭಾನುಪ್ರಕಾಶ್, ಶಶಿಕಲಾ ರವರು ಸಹಕರಿಸಿದರು. ಸಹ ಶಿಕ್ಷಕಿ ರಶ್ಮಿ ಕೆ. ಎನ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here