ನೆಲ್ಯಾಡಿ ಜೇಸಿಐಗೆ ಅತ್ಯುತ್ತಮ ಘಟಕ ರನ್ನರ್ ಪ್ರಶಸ್ತಿ

0

ನೆಲ್ಯಾಡಿ; ಜೇಸಿಐ ಜೋಡುಮಾರ್ಗ ನೇತ್ರಾವತಿ ಇವರ ಆಶ್ರಯದಲ್ಲಿ ನಡೆದ ವಲಯ ಮಧ್ಯಂತರ ಸಮ್ಮೇಳನದಲ್ಲಿ ಜೇಸಿಐ ನೆಲ್ಯಾಡಿ ಘಟಕವು ‘ಅತ್ಯುತ್ತಮ ಘಟಕ ರನ್ನರ್ ಪ್ರಶಸ್ತಿ’ ಹಾಗೂ ಮನ್ನಣೆಗಳನ್ನು ಪಡೆದುಕೊಂಡಿತು. ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿಯವರು ಈ ಪ್ರಶಸ್ತಿಗಳನ್ನು ನೀಡಿದರು. ಜೇಸಿಐ ಮಧ್ಯಂತರ ಅವಧಿಯಲ್ಲಿ ಜೇಸಿಐ ನೆಲ್ಯಾಡಿ ಘಟಕವು ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ, ನೆಲ್ಯಾಡಿ ವಿಶ್ವ ವಿದ್ಯಾಲಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಜ್ಞಾನ ವಿಕಾಸ ಕೇಂದ್ರ ನೆಲ್ಯಾಡಿಯಲ್ಲಿ ಬ್ಯಾಂಕಿಂಗ್ ತರಬೇತಿ ಕಾರ್ಯಾಗಾರ, ಪಡುಬೆಟ್ಟು ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಪರೀಕ್ಷಾ ತಯಾರಿ ಕಾರ್ಯಾಗಾರ, ನೆಲ್ಯಾಡಿ ಐಟಿಐ ವಿದ್ಯಾಸಂಸ್ಥೆಯಲ್ಲಿ ಕೊಕ್ಕಡ ಸೇವಾಧಾಮದವರ ಮುಖೇನ ಬೆನ್ನುಮೂಳೆ ರಕ್ಷಣೆಯ ಬಗ್ಗೆ ಮಾಹಿತಿ ಕಾರ್ಯಾಗಾರ, ಎಲ್‌ಡಿಎಂಟಿ ತರಬೇತಿ ಕಾರ್ಯಾಗಾರ, ನೆಲ್ಯಾಡಿ ಅಯ್ಯಪ್ಪ ದೇವಸ್ಥಾನ ಸಭಾಂಗಣದಲ್ಲಿ ಯೋಗ ತರಬೇತಿ ಕಾರ್ಯಕ್ರಮ, ತಿಂಗಳ ಮಾಸ ಪತ್ರಿಕೆ ಪ್ರಗತಿ ಪ್ರಕಟಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.


ಈ ಪ್ರಶಸ್ತಿ ಹಾಗೂ ಮನ್ನಣೆಗಳ ಮೂಲಕ ಜೇಸಿಐ ನೆಲ್ಯಾಡಿ ಘಟಕವು ತನ್ನ ಹೆಸರನ್ನು ವಲಯದಲ್ಲಿ ಗುರುತಿಸಿಕೊಳ್ಳುವಂತಾಗಲು ಘಟಕದ ಎಲ್ಲಾ ಪದಾಧಿಕಾರಿಗಳು, ಪೂರ್ವಾಧ್ಯಕ್ಷರುಗಳ ಮಾರ್ಗದರ್ಶನ ಹಾಗೂ ಸದಸ್ಯರ ಪರಿಶ್ರಮವೇ ಕಾರಣ ಎಂದು ಘಟಕದ ಅಧ್ಯಕ್ಷ ದಯಾಕರ ರೈ ತಿಳಿಸಿದ್ದಾರೆ. ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ದೇವರಾಜ್ ಕುದ್ಪಾಜೆ, ನೆಲ್ಯಾಡಿ ಘಟಕಾಧ್ಯಕ್ಷ ದಯಾಕರ ರೈ, ಕಾರ್ಯದರ್ಶಿ ಸುಚಿತ್ರಾ ಬಂಟ್ರಿಯಾಲ್, ಜೇಸಿರೆಟ್ ಅಧ್ಯಕ್ಷೆ ರಶ್ಮಾ ದಯಾಕರ ರೈ, ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷ ಪುರಂದರ ಗೌಡ ಡೆಂಜ, ಮಹಿಳಾ ಜೇಸಿ ಸಂಯೋಜಕಿ ಜಾಹ್ನವಿ ಪುರಂದರ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here