ಸತ್ಪ್ರಜೆ ಎನ್ನುವ ನಾಣ್ಯ ಚಲಾವಣೆ ಯಾಗಲು ಪೋಷಕರು, ಶಿಕ್ಷಕರು ಜೊತೆಗಿರಬೇಕು: ಒಡಿಯೂರು ಶ್ರೀ
ಗುರುವಿನ ಸಂದೇಶದಿಂದ ನಿಮ್ಮ ಬಾಳು ಬೆಳಗಲಿ: ಪ್ರಹ್ಲಾದ್ ಜೆ.ಶೆಟ್ಟಿ
ವಿಟ್ಲ: ಜೀವ-ದೇವನ ಸಂಬಂಧ ಯೋಗದಲ್ಲಿದೆ. ಬದುಕನ್ನು ಹೇಗೆ ರೂಪಿಸಬೇಕು ಎನ್ನುವುದನ್ನು ನಾವು ತಿಳಿದುಕೊಳ್ಳುವುದು ಅಗತ್ಯವಿದೆ. ಶಿಸ್ತು ಸ್ವಚ್ಚತೆ ಇದ್ದಲ್ಲಿ ಸದಾಚಾರ ಸಂಪನ್ನತೆಯಾಗುತ್ತದೆ. ಮನಸ್ಸಿನ ಸ್ವಾಸ್ಥ್ಯಕ್ಕೆ ಯೋಗ ಅಗತ್ಯ. ಬಾಲವಿಕಾಸ ವಿದ್ಯಾಸಂಸ್ಥೆ ವ್ಯಕ್ತಿ ವಿಕಾಸದ ಜೊತೆಗೆ ರಾಷ್ಟ್ರ ವಿಕಾಸಕ್ಕೆ ನಾಂದಿಯಾಗಲಿದೆ. ಸತ್ಪ್ರಜೆ ಎನ್ನುವ ನಾಣ್ಯ ಚಲಾವಣೆಯಾಗಲು ಪೋಷಕರು ಹಾಗೂ ಶಿಕ್ಷಕರು ಜೊತೆಗಿರಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಜೂ.21ರಂದು ಮಾಣಿ ವಿದ್ಯಾನಗರ ಪಾಳ್ಯದಲ್ಲಿರುವ ಬಾಲವಿಕಾಸ ಆಂಗ್ಲ ಮಾದ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಶಾಲೆಯ ದಿ. ಪಾಳ್ಯ ಅನಂತರಾಮ ರೈ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈಗಿನ ಕಾಲಘಟ್ಟಕ್ಕೆ ತಕ್ಕುದಾದ ಒಂದು ಸುಸಜ್ಜಿತವಾದ ವ್ಯವಸ್ಥೆ ಈ ಶಿಕ್ಷಣ ಸಂಸ್ಥೆಯಲ್ಲಿರುವುದು ಸಂತಸ ತಂದಿದೆ. ಪ್ರಹ್ಲಾದರಿಗೆ ರಾಷ್ಟ್ರೀಯ ಪ್ರಜ್ಞೆ ಹುಟ್ಟಿದ್ದರಿಂದ ಈ ಸಂಸ್ಥೆಯ ಉಗಮವಾಗಿದೆ. ಬಾಲವಿಕಾಸ ಶಿಕ್ಷಣ ಸಂಸ್ಥೆ ಇತರರಿಗೆ ಮಾದರಿಯಾಗಿದೆ. ನಾನು ಎಂಬುದನ್ನು ಬಿಟ್ಟು ನಮ್ಮದು ಎನ್ನುವುದು ನಮ್ಮಲ್ಲಿ ಬರಬೇಕು. ನಮ್ಮ ಮನಸ್ಸಿನಲ್ಲಿ ಶಾಂತಿ ಕಾಪಿಡುವ ಕೆಲಸವಾಗಬೇಕು. ಸಂಸ್ಥೆಯಿಂದ ಮಕ್ಕಳನ್ನು ಭಾರತ ರಥದ ಸಾರಥಿಯನ್ನಾಗಿ ಮಾಡುವ ಕೆಲಸವಾಗಲಿ. ಮಕ್ಕಳಲ್ಲಿ ಸಂಸ್ಕೃತಿಯ ಬೀಜ ಬಿತ್ತಬೇಕು. ಆಗ ಸದೃಡ ಸಮಾಜ ನಿರ್ಮಾಣವಾಗಲು ಸಾಧ್ಯ. ಸರಿಯಾದ ಆಲೋಚನೆ ಇದ್ದರೆ ರಾಷ್ಟ್ರ ನಿರ್ಮಾಣ ಸಾಧ್ಯ. ಆದರ್ಶ ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಪಾತ್ರವೇನು ಎನ್ನುವುದನ್ನು ಅರಿಯುವ ಕೆಲಸವಾಗಬೇಕು. ಮನುಷ್ಯನ ಮನಸ್ಸಿನಲ್ಲಿ ಸ್ವಚ್ಚತೆಯ ಅಗತ್ಯವಿದೆ. ವಿಕಾಸ ಎನ್ನುವುದು ಅದ್ಬುತ ಶಬ್ದ. ಸಂಸ್ಥೆ ಇನ್ನಷ್ಟು ವಿಕಾಸಗೊಳ್ಳಲಿ ಎಂದರು.
ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಪ್ರಹ್ಲಾದ್ ಜೆ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗುರುವಿನ ಸಂದೇಶದಿಂದ ನಿಮ್ಮ ಬಾಳು ಬೆಳಗಲಿ. ಶಿಸ್ತು ಸಂಯ್ಯಮ ನಮ್ಮಲ್ಲಿರಬೇಕು. ಶಿಸ್ತು ಇದ್ದಲ್ಲಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ವ್ಯಕ್ತಿ ಯಾಗಲು ಸಾಧ್ಯ. ಸಂಸ್ಥೆ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾಗಲಿ. ವಿದ್ಯಾರ್ಥಿಗಳ ಕನಸು ನನಸಾಗುವ ದಿನ ಈ ಯೋಗದಿನದಿಂದ ಆಗಲಿ ಎಂದರು.
ಟ್ರಸ್ಟ್ ನ ಉಪಾಧ್ಯಕ್ಷ ಯತಿರಾಜ್ ಎನ್., ನ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕಸ್ತೂರಿ ಪಿ. ಶೆಟ್ಟಿ, ವೈದ್ಯರಾದ ಮನೋಹರ ರೈ, ಸಂಸ್ಥೆಯ ಹಿತೈಶಿ ಉಗ್ಗಪ್ಪ ಶೆಟ್ಟಿ ಕೊಂಬಿಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿದರು. ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಪ್ರಹ್ಲಾದ್ ಜೆ. ಶೆಟ್ಟಿ ಹಾಗೂ ಅವರ ಪತ್ನಿ ಸುಜಯ ಪಿ.ಶೆಟ್ಟಿ ಸ್ವಾಮೀಜಿಗೆ ಫಲಪುಷ್ಪ ನೀಡಿ ನೀಡಿ ಗೌರವಿಸಿದರು.
ಶಾಲಾ ಆಡಳಿತಾಧಿಕಾರಿಗಳು ರವೀಂದ್ರ ದರ್ಬೆ, ಸ್ವಾಗತಿದರು. ಸುಧಾ ಎನ್.ರಾವ್ ಹಾಗೂ ಸುಪ್ರಿಯಾ ಡಿ.ಕಾರ್ಯಕ್ರಮ ನಿರೂಪಿಸದರು. ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ. ಶೆಟ್ಟಿ ವಂದಿಸಿದರು.