ಕೆದಂಬಾಡಿ ಗ್ರಾಮ ದತ್ತು ಯೋಜನೆಯ ನಾಲ್ಕನೇ ಕಾರ್ಯಕ್ರಮ-ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ, ಸ್ವಚ್ಛತಾ ಜಾಗೃತಿ

0

ಪುತ್ತೂರು : ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಎಂಎಸ್‌ಡಬ್ಲ್ಯೂ ವಿಭಾಗ (ಸ್ನಾತಕೋತ್ತರ ಸಮಾಜಕಾರ್ಯ), ಸ ಹಿ ಪ್ರಾ ಶಾಲೆ ತಿಂಗಳಾಡಿ, ಕೆದಂಬಾಡಿ ಗ್ರಾಮ ಪಂಚಾಯತ್ ಇದರ ಜಂಟಿ ಆಶ್ರಯದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮವು ಜೂ.20 ರಂದು ತಿಂಗಳಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆಯಿತು.

ಸಂತ ಫಿಲೋಮಿನಾ ಕಾಲೇಜಿನ ದತ್ತು ಗ್ರಾಮದ 4ನೇ ಕಾರ್ಯಕ್ರಮ ಇದಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ಮಾತನಾಡಿ, ಆರೋಗ್ಯ ಮಾಹಿತಿ ಕಾರ್ಯಕ್ರಮದಂತಹ ಒಂದು ಒಳ್ಳೆಯ ಕಾರ್ಯಕ್ರಮ ಸಂಘಟಿಸಿದ ಸಂತ ಫಿಲೋಮೀನಾ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ, ಗ್ರಾಮಸ್ಥರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡಾಗ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಿಎಚ್‌ಸಿಒ ವಿದ್ಯಾರವರು ಮಾತನಾಡಿ, ಜನರನ್ನು ಕಾಡುವ ಡೆಂಗ್ಯೂ , ಮಲೇರಿಯಾ,ಇಲಿಜ್ವರ, ಟಿಬಿಯಂತಹ ರೋಗಗಳ ಬಗ್ಗೆ ಹಾಗೂ ಸ್ವಚ್ಚತೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರು.


ಕೆದಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ ಕೆ ,ಗ್ರಾ.ಪಂ ಉಪಾಧ್ಯಕ್ಷ ಭಾಸ್ಕರ್ ರೈ ಮಿತ್ರಂಪಾಡಿ, ಉಪನ್ಯಾಸಕಿ ಪ್ರತಿಭಾ ಕೆ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂತ ಫಿಲೋಮಿನ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ ದಿಶಾ ಡೆಂಗ್ಯೂ ಖಾಯಿಲೆಯ ಮಾಹಿತಿಯನ್ನು ನೀಡಿದರು.

ತಿಂಗಳಾಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯ ಕೆ, ಕೆದಂಬಾಡಿ ಗ್ರಾ.ಪಂ.ಸದಸ್ಯೆ ಜಯಲಕ್ಷ್ಮಿ ಬಲ್ಲಾಳ್ , ಉಪನ್ಯಾಸಕಿ ಪ್ರತಿಭಾ ಕೆ ,ಕೆಯ್ಯೂರು ಕ್ಲಸ್ಟರ್ ಸಿ.ಆರ್.ಪಿ ನಿರಂಜನ್, ಆಶಾ ಕಾರ್ಯಕರ್ತೆ ರೇಖಾ, ಸಂಜೀವಿನಿ ಒಕ್ಕೂಟದ ಸದಸ್ಯೆ ಶುಭ ಉಪಸ್ಥಿತರಿದ್ದರು. ಸ್ನಾತಕೋತ್ತರ ಸಮಾಜ ಕಾರ್ಯ ವಿದ್ಯಾರ್ಥಿನಿ ಅನೀಶಾ ಎಸ್ ಸ್ವಾಗತಿಸಿ, ವಿದ್ಯಾರ್ಥಿ ಮೊಹಮ್ಮದ್ ಆಶಿಫ್ ಎಂ ಎ ವಂದಿಸಿ, ವಿದ್ಯಾರ್ಥಿನಿ ಸರಿತಾ.ಎಮ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here