ಜು.23: ಪುತ್ತೂರು ತಾ. ಯುವ ಬಂಟರ ಸಂಘದಿಂದ ಜಿಲ್ಲಾ ಮಟ್ಟದ ಬಂಟೆರೆ ಪರ್ಬ-ಸಿದ್ಧತಾ ಸಭೆ

0

ಅಭೂತಪೂರ್ವ ಕಾರ‍್ಯಕ್ರಮಕ್ಕೆ ಬಂಟ ಸಮಾಜದ ಸರ್ವರ ಸಹಕಾರ ಬೇಕು- ಶಶಿರಾಜ್ ರೈ ಮುಂಡಾಳ


ಪುತ್ತೂರು: ಜು. 23 ರಂದು ಪುತ್ತೂರು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಬಂಟೆರೆ ಪರ್ಬ ಕಾರ‍್ಯಕ್ರಮದ ಸಿದ್ಧತಾ ಸಭೆಯು ಜೂ. 20 ರಂದು ಪುತ್ತೂರು ಬಂಟರ ಭವನದಲ್ಲಿ ಜರಗಿತು.


ಮಾದರಿ ಕಾರ‍್ಯಕ್ರಮ- ಶಶಿರಾಜ್ ರೈ ಮುಂಡಾಳಗುತ್ತು
ಅಧ್ಯಕ್ಷತೆ ವಹಿಸಿದ್ದ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳರವರು ಮಾತನಾಡಿ ಜಿಲ್ಲಾ ಮಟ್ಟದ ಬಂಟೆರೆ ಪರ್ಬ ಕಾರ‍್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು, ಬಂಟ ಸಮಾಜದ ಪ್ರತಿಭೆಗಳ ಪ್ರದರ್ಶನಕ್ಕೆ ಇದ್ದೊಂದು ವೇದಿಕೆಯಾಗಿದ್ದು, ಈ ಕಾರ‍್ಯಕ್ರಮದ ಸಂಪೂರ್ಣ ಯಶಸ್ಸಿಗೆ ಬಂಟ ಸಮಾಜದ ಪೂರ್ಣ ಸಹಕಾರ ಅಗತ್ಯ ಎಂದು ಹೇಳಿ, ಯುವ ಬಂಟರ ಸಂಘದ ಈ ಕಾರ‍್ಯಕ್ರಮ ಮಾದರಿ ಕಾರ‍್ಯಕ್ರಮವಾಗಿ ಹತ್ತೂರಿನಲ್ಲಿ ಹೆಸರನ್ನು ಪಡೆಯಲಿ ಎಂದು ಆಶಿಸಿದರು.


ಕಾರ‍್ಯಕ್ರಮದ ಸಂಚಾಲಕರಾದ ಭಾಗೇಶ್ ರೈ ಕೆಯ್ಯೂರು ಮತ್ತು ಹರ್ಷಕುಮಾರ್ ರೈ ಮಾಡಾವುರವರುಗಳು ಕಾರ‍್ಯಕ್ರಮದ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಬಂಟರ ಸಂಘದ ನಿರ್ದೇಶಕ ಸಂತೋಷ್ ಶೆಟ್ಟಿ ಸಾಜ, ಯುವ ಬಂಟರ ಸಂಘದ ಕೋಶಾಧಿಕಾರಿ ಕೆ.ಸಿ.ಅಶೋಕ್ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಪದಾಧಿಕಾರಿಗಳಾದ ಗೌತಮ್ ರೈ ಸಾಂತ್ಯ, ರವಿಪ್ರಸಾದ್ ಶೆಟ್ಟಿ, ನವೀನ್ ರೈ ಪಂಜಳ, ಮನ್ಮಥ ಶೆಟ್ಟಿ ಕೊಡಿಪ್ಪಾಡಿ, ಹೇಮಾ ಜೆ.ರೈ, ಶುಭ ರೈ, ಉಮಾಪ್ರಸಾದ್ ರೈ ನಡುಬೈಲು, ಪ್ರಜನ್ ಶೆಟ್ಟಿ , ಪವನ್ ಶೆಟ್ಟಿ, ಭಾಸ್ಕರ್ ರೈ ಬಂಟರಭವನರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here