ಕುಂಬ್ರ: ಬೂಡಿಯಾರ್ ಇಂಡೇನ್ ಗ್ಯಾಸ್ ಸರ್ವಿಸಸ್ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಬ್ಯಾಂಕ್ ಅಫ್ ಬರೋಡಾ ಕುಂಬ್ರ ಶಾಖೆಯ ತಳಮಹಡಿಯಲ್ಲಿ ಕಳೆದ 10 ವರ್ಷಗಳಿಂದ ಕಾರ‍್ಯನಿರ್ವಹಿಸುತ್ತಿದ್ದ ಸಾಮಾಜಿಕ ಮುಂದಾಳು ಬೂಡಿಯಾರ್ ರಾಧಾಕೃಷ್ಣ ರೈಯವರ ಮಾಲಕತ್ವದ ಬೂಡಿಯಾರ್ ಇಂಡೇನ್ ಗ್ಯಾಸ್ ಸರ್ವಿಸಸ್ ಸಂಸ್ಥೆಯು ಕುಂಬ್ರ- ಬೆಳ್ಳಾರೆ ರಸ್ತೆಯ ಬೂಡಿಯಾರ್ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಜೂ.21ರಂದು ಶುಭಾರಂಭಗೊಂಡಿತು.
ಇಂಡಿಯನ್ ಆಯಿಲ್ ಸಂಸ್ಥೆಯ ನಿವೃತ್ತ ಡಿಜಿಎಂ ದಿಲೀಪ್ ರೈ ಮತ್ತು ವೈದ್ಯರಾದ ಡಾ.ಸಂಜೀವ ರೈ ಬೂಡಿಯಾರ್‌ರವರುಗಳು ಉದ್ಘಾಟನೆಗೈದು, ಶುಭಹಾರೈಸಿದರು.


ಸಮಾರಂಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರ, ಉದ್ಯಮಿಗಳಾದ ಪುರಂದರ ರೈ ಮಿತ್ರಂಪಾಡಿ, ಶಿವರಾಂ ಆಳ್ವ ಬಳ್ಳಮಜಲು, ಪುರಂದರ ರೈ ಕೋರಿಕ್ಕಾರ, ಜಯಂತ ನಡುಬೈಲು, ಚಂದಪ್ಪ ಮೂಲ್ಯ, ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಉಪಾಧ್ಯಕ್ಷ ರೋಶನ್ ರೈ ಬನ್ನೂರು, ಪ್ರಧಾನ ಕಾರ‍್ಯದರ್ಶಿ ರಮೇಶ್ ರೈ ಡಿಂಬ್ರಿ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಪುತ್ತೂರು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ‍್ಯದರ್ಶಿ ನಿತೀಶ್ ಶಾಂತಿವನ, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ‍್ಯದರ್ಶಿಗಳಾದ ಸುಭೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಪ್ರಮುಖರಾದ ಕಡಮಜಲು ಸುಭಾಸ್ ರೈ, ಚಂದ್ರಹಾಸ್ ಶೆಟ್ಟಿ ಎನ್, ನುಳಿಯಾಲು ಜಗನ್ನಾಥ ರೈ ಮಾದೋಡಿ, ದಂಬೆಕಾನ ಸದಾಶಿವ ರೈ, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ನಾರಾಯಣ ರೈ ಬಾರಿಕೆ, ಉಮೇಶ್ ರೈ ಮುಂಡಾಳುಗುತ್ತು, ರಾಜೀವ ರೈ ಕುತ್ಯಾಡಿ, ಸುಂದರ ರೈ , ದಿವ್ಯನಾಥ ಶೆಟ್ಟಿ, ದೇರ್ಲ ಅಮಣ್ಣ ರೈ ಪಾಪೆಮಜಲು, ಡಾ.ದೀಪಕ್ ರೈ, ಕೆ.ಪಿ.ವಿಠಲ ಶೆಟ್ಟಿ ಕೊಡ್ಲಾರು, ಸುರೇಂದ್ರ ರೈ ಬಳ್ಳಮಜಲು, ಪ್ರಕಾಶ್ ರೈ ಬಳ್ಳಮಜಲು, ತಾ.ಪಂ. ಮಾಜಿ ಸದಸ್ಯ ಹರೀಶ್ ಬಿಜತ್ರೆ, ಚಿತ್ರನಟರುಗಳಾದ ಸುಂದರ ರೈ ಮಂದಾರ, ದೀಪಕ್ ರೈ ಪಾಣಾಜೆ, ಡಾ.ಸಚ್ಚಿದಾನಂದ ರೈ, ಸದಾನಂದ ಮೇಲಾಂಟ, ಗಣೇಶ್ ರೈ ಬೂಡಿಯಾರ್, ಸುಧಾಮಣಿ ಜಿ.ರೈ ಬೂಡಿಯಾರ್, ಮಧು ನರಿಯೂರು, ಮಹಾಬಲ ರೈ ಕುಕ್ಕುಜೊಡು, ರಮೇಶ್ ರೈ ಬೋಳೋಡಿ, ನಾರಾಯಣ ಪೂಜಾರಿ ಕುರಿಕ್ಕಾರ, ರಾಜೇಶ್ ರೈ ಪರ್ಪುಂಜ, ಹರೀಶ್ ರೈ ಜಾರತ್ತಾರು, ಸದಾಶಿವ ಶೆಟ್ಟಿ ಪಟ್ಟೆ ಸಹಿತ 700ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ಬೂಡಿಯಾರ್ ಇಂಡೇನ್ ಗ್ಯಾಸ್ ಸರ್ವಿಸಸ್ ಸಂಸ್ಥೆಯ ಮಾಲಕ ಬೂಡಿಯಾರ್ ರಾಧಾಕೃಷ್ಣ ರೈ ಸ್ವಾಗತಿಸಿದರು. ಜಯಲಕ್ಷ್ಮಿ ಆರ್ ರೈ ಬೂಡಿಯಾರ್, ಅಕ್ಷತ್ ಶೆಟ್ಟಿ, ರಕ್ಷತಾ ಶೆಟ್ಟಿರವರು ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ಸಿಬ್ಬಂದಿಗಳು ಕಾರ‍್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here