ಸಂಘದ ನೂತನ 9ನೇ ಶಾಖೆ ಬೆಳ್ಳಾರೆಯಲ್ಲಿ ಜು.6 ರಂದು ಶುಭಾರಂಭ: ಚಿದಾನಂದ ಬೈಲಾಡಿ
ಕುಂಬ್ರ:ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿರುವ ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಸಂಕೀರ್ಣ ದಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಇದರ ಕುಂಬ್ರ ಶಾಖೆಯು ಯಶಸ್ವಿ 9ನೇ ವರ್ಷಕ್ಕೆ ಪಾದಾರ್ಪಣೆಗೊಂಡ ಹಿನ್ನಲೆಯಲ್ಲಿ ಕುಂಬ್ರ ಕಿರಣ್ ಸಂಕೀರ್ಣದಲ್ಲಿರುವ ಸಂಘದ ಕಛೇರಿಯಲ್ಲಿ ಪುರೋಹಿತ ಶ್ರೀಕೃಷ್ಣ ಉಪಾಧ್ಯಾಯ ಹೊಸಮೂಲೆ ಇವರ ಪೌರೋಹಿತ್ಯದಲ್ಲಿ ಗಣಹೋಮ ಹಾಗೂ ಲಕ್ಷ್ಮಿಪೂಜೆ ಜೂ. 21 ರಂದು ಬೆಳಿಗ್ಗೆ ನಡೆಯಿತು.
ನಂತರ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಆಡಳಿತ ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು 2002 ರಲ್ಲಿ ಆರಂಭ ಗೊಂಡು ಅನಂತರ ಅವಧಿಯಲ್ಲಿ 8 ಶಾಖೆ ಗಳನ್ನು ಆರಂಭಿಸಿಕೊಂಡು, ಎಲ್ಲ ಶಾಖೆಗಳು ಅತ್ಯುತ್ತಮ ರೀತಿಯಲ್ಲಿ ಯಶಸ್ವಿಯಾಗಿ ವ್ಯವಹಾರ ನಡೆಸುತಿದ್ದು, ಸಂಘದ ನೂತನ 9 ನೇ ಶಾಖೆ ಜು 6 ರಂದು ಬೆಳ್ಳಾರೆ ಯಲ್ಲಿ ಆರಂಭಗೊಳ್ಳಲಿದೆ ಎಂದರು.
ಸಂಘವು ರೂ.400 ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟು ಹೊಂದಿದ್ದು,ಶೇಕಡಾ 99.01% ಸಾಲ ವಸೂಲಾತಿ ನಡೆಸುವುದರ ಮೂಲಕ ರೂ.1 ಕೋಟಿಗೂ ಹೆಚ್ಚು ಲಾಭ ಗಳಿಸುತ್ತಿದೆ.ಕಳೆದ ಆರ್ಥಿಕ ವರ್ಷದಲ್ಲಿ ಕುಂಬ್ರ ಶಾಖೆಯು ಸುಮಾರು ರೂ. 39ಕೋಟಿ ಗೂ ಅಧಿಕ ವ್ಯವಹಾರ ನಡೆಸಿದ್ದು, ಸಾಲ ವಸೂಲಾತಿ ಶೇಕಡಾ 99.34% ಮಾಡುವ ಮೂಲಕ ಕುಂಬ್ರ ಶಾಖೆಯ ಅತ್ಯುತ್ತಮ ಮಟ್ಟದ ಸಾಧನೆ ಮಾಡಿದೆ.ಈ ಸಾಧನೆಗೆ ಪ್ರಮುಖ ಕಾರಣಕರ್ತರಾದ, ಸಲಹಾ ಸಮಿತಿ ಸದಸ್ಯರಿಗೆ,ಸಿಬ್ಬಂದಿ ವರ್ಗ ಹಾಗೂ ಗ್ರಾಹಕ ಬಂಧುಗಳಿಗೆ ಅಭಿನಂದನೆ ತಿಳಿಸಿದರು.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹಾಗೂ ಕುಂಬ್ರ ಶಾಖೆಯು ಸಲಹಾ ಸಮಿತಿಯ ಅಧ್ಯಕ್ಷ ಲೋಕೇಶ್ ಚಾಕೋಟೆ ಮಾತನಾಡಿ ಕುಂಬ್ರ ಶಾಖೆಯು ಆರಂಭದಿಂದಲೂ ಗ್ರಾಹಕ ಬಂಧುಗಳ ಪೂರ್ಣ ಸಹಕಾರ, ಆಡಳಿತ ಮಂಡಳಿ ಹಾಗೂ ಶಾಖ ಸಲಹಾ ಸಮಿತಿ ಸದಸ್ಯರ ಮಾರ್ಗದರ್ಶನ ಹಾಗೂ ಸಿಬ್ಬಂದಿ ವರ್ಗದ ದಕ್ಷ ಹಾಗೂ ನಗುಮೊಗದ ಪ್ರಾಮಾಣಿಕ ಸೇವೆಯಿಂದ ಕುಂಬ್ರ ಶಾಖೆಯು ವ್ಯವಹಾರದಲ್ಲಿ ಉತ್ತಮ ಸಾಧನೆಗೈಯಲು ಸಾಧ್ಯವಾಗಿದೆ ಎಂದರು.
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯುರು ಮಾತನಾಡಿ ,ಸಂಘದ ಪ್ರಧಾನ ಕಚೇರಿ ಸೇರಿದಂತೆ ಎಲ್ಲಾ ಶಾಖೆಗಳಲ್ಲಿ ಉತ್ತಮ ವ್ಯವಹಾರ ನಡೆಸುತ್ತಿದ್ದು ಲಾಭದಲ್ಲಿ ಮುನ್ನಡೆಯುತ್ತಿರುವುದು ಸಂತಸದ ವಿಚಾರ ,ಸಂಘವು ಇನ್ನಷ್ಟು ಬೆಳವಣಿಗೆಯಾಗಲಿ ಎಂದು ಶುಭ ಹಾರೈಸಿದರು.
ಗೌರವಾರ್ಪಣೆ ಕಾರ್ಯಕ್ರಮ
2022-023ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಲ್ಲಿ 606 ಅಂಕ ಪಡೆದು ಉತ್ತಮ ಸಾಧನೆಗೈದ ಪ್ರತಿಭಾ ಪ್ರೌಢ ಶಾಲೆ ಪಟ್ಟೆ ಬಡಗನ್ನೂರು ಶಾಲೆಯ ವಿದ್ಯಾರ್ಥಿನಿ ಕನ್ನಯ ಬೆಳಿಯಪ್ಪ ಗೌಡರ ಪುತ್ರಿ ಪಲ್ಲವಿ ಕೆ ಬಿ ಇವರನ್ನು ಇವರ ಅನುಪಸ್ಥಿತಿಯಲ್ಲಿ ತಂದೆಗೆ ಶಾಲು ಹೊದಿಸಿ, ಹೂಗುಚ್ಚ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಇದರ ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ರಾಮಕೃಷ್ಣ ಗೌಡ ಕರ್ಮಲ,ತೇಜಸ್ವಿನಿ ಶೇಖರ ಗೌಡ ಕಟ್ಟಪುಣಿ, ಮಾಜಿ ನಿರ್ದೇಶಕರು, ಕುಂಬ್ರ ಶಾಖ ಗೌರವ ಸಲಹೆಗಾರರು ಶಿವರಾಮ ಗೌಡ ಇದ್ಯಾಪೆ,ನಿರ್ದೇಶಕರು ಹಾಗೂ ಕುಂಬ್ರ ಸಲಹಾ ಸಮಿತಿ ಉಪಾಧ್ಯಕ್ಷರಾದ ಸತೀಶ್ ಪಾಂಬಾರು, ಮಾಜಿ ನಿರ್ದೇಶಕರು ವಿಜಯ ಬಿ ಕೆ,ಸಂಘದ ಪ್ರವರ್ತಕರಾದ ನಾರಾಯಣ ಗೌಡ ಅರ್ವಾರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ್ ಕೆ, ತಾಲೂಕು ಒಕ್ಕಲಿಗ ಗೌಡ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಜೊತೆ ಕಾರ್ಯದರ್ಶಿ ನವೀನ ಬಿ ಡಿ,ಕುಂಬ್ರ ಶಾಖ ಸಲಹಾ ಸಮಿತಿ ಸದಸ್ಯರಾದ ಹಾಗೂ ಮಾಜಿ ಆಡಳಿತ ಸಮಿತಿ ನಿರ್ದೇಶಕರಾಗಿದ್ದ ರೇಖಾ ಆರ್ ಗೌಡ, ಸಲಹಾ ಸಮಿತಿ ಸದಸ್ಯರಾದ ನಾಗಪ್ಪ ಗೌಡ ಬೊಮ್ಮೆಟ್ಟಿ,ಉಮೇಶ್ ಗೌಡ ಕನ್ನಯ, ಚಂದ್ರ ಶೇಖರ ಗೌಡ ಸಾರೆಪ್ಪಾಡಿ,ಶ್ರೀಧರ ಗೌಡ ಅಂಗಡಿಹಿತ್ಲು,ವಿಶ್ವನಾಥ ಗೌಡ ಬೊಳ್ಳಾಡಿ ,ರಾಮಣ್ಣ ಗೌಡ ಬಸವಹಿತ್ಳು,ಶ್ರೀಧರ ಗೌಡ ಎರಕ್ಕಲ ,ವಿಜಯಭಾರತಿ ಮಡ್ಯಾಂ ಗಳ, ತಿರುಮಲೇಶ್ವರ ದೊಡ್ಡಮನೆ,ಸುಬ್ರಾಯ ಗೌಡ ಪಾಲ್ತಾಡಿ, ಕಿರಣ್ ಸಂಕೀರ್ಣದ ಮಾಲಕರಾದ ಪರಮೇಶ್ವರ,ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್, ಗೌರವ ಸಲಹೆಗಾರರು ವೆಂಕಪ್ಪ ಗೌಡ, ರಾಮಣ್ಣ ಗೌಡ ಜ್ಯೋತಿ ನಿಲಯ,ಶಿವರಾಮ್ ಗೌಡ ಬೊಳ್ಳಾಡಿ,ಉಮಾಕಾಂತ್ ಬೈಲಾಡಿ,ಕೇಶವ ಪೂಜಾರಿ ಶೇಖಮಲೆ,ರಾಧಾಕೃಷ್ಣ ಗೌಡ ಕೊಯಿಲತ್ತಡ್ಕ, ದಾಮೋದರ ಗೌಡ ಕೆಮ್ಮತ್ತಡ್ಕ, ಕೇಶವ ಗೌಡ ಪರ್ಪುಂಜ, ವಿಜಯ ಕುಮಾರ್ ಕೆಮ್ಮತ್ತಡ್ಕ, ಗೋಪಾಲಕೃಷ್ಣ ಗೌಡ ನಿರ್ಪಾಡಿ, ರಾಮದಾಸ್ ರೈ ಮದ್ಲ, ಕುಶಾಲಪ್ಪ ಗೌಡ ಮಡ್ಯ0ಗಳ,ಪುಂಡರಿಕ ಗೌಡ,ಅಡ್ವೊಕೇಟ್ ಜಯಪ್ರಕಾಶ್, ಶರತ್ ರೈ ದೇರ್ಲ,ವರ್ತಕರ ಸಂಘದ ಮಾಜಿ ಅಧ್ಯಕ್ಷರಾದ ಮಾಧವ ರೈ ಕುಂಬ್ರ, ಆದರ್ಶ ವಿವಿದೋದ್ದೇಶ ಸಹಕಾರಿ ಸಂಘದ ಸಿಬ್ಬಂದಿ ವರ್ಗ, ಕುಂಬ್ರ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ವರ್ಗ,ಕುಂಬ್ರ ಡಿಸಿಸಿ ಬ್ಯಾಂಕ್ ನ ಸಿಬ್ಬಂದಿ ವರ್ಗ,ಮೂರ್ತೆದಾರರ ಸಂಘದ ಸಿಬ್ಬಂದಿ ವರ್ಗ, ಜ್ಯೋತಿ ಸ್ಟುಡಿಯೋ ಮಾಲಕರಾದ ಕರುಣಾಕರ ಗೌಡ ಎಲಿಯ, ಸಿಬ್ಬಂದಿ ಸತೀಶ್,ಸುಶ ಡ್ರೆಸ್ಸಸ್ ನ ಸುರೇಶ್ ಕುಮಾರ್,ಜಯರಾಮ ಆಚಾರ್ಯ,ಶೇಷಪ್ಪ ಗೌಡ ಕೆಯ್ಯುರೂ, ಮಾಯಿಲಪ್ಪ ಗೌಡ ಕಂಟ್ರಮಜಲು,ಮಾಧವ ಗೌಡ ,ಚಿದಾನಂದ,ಆಗಮಿಸಿ ಶುಭಹಾರೈಸಿದರು.
ಕುಂಬ್ರ ಶಾಖ ಮೆನೇಜರ್ ಹರೀಶ್ ವೈ, ಸಿಬ್ಬಂದಿಗಳಾದ ಹರಿಣಾಕ್ಷಿ,ಕಾವ್ಯ ಎಸ್,ದಿನೇಶ್ ಕುಮಾರ್, ಪಿಗ್ಮಿ ಸಂಗ್ರಹಕಾರರಾದ ಅನುರಾಜ್ ,ಅಶ್ವಥ್ ಪಿ, ಅಥಿತಿಗಳನ್ನು ಸ್ವಾಗತಿಸಿ ಸತ್ಕರಿಸಿದರು.
ನಿರ್ದೇಶಕರು ಹಾಗೂ ಸಲಹಾ ಸಮಿತಿ ಅಧ್ಯಕ್ಷರಾದ ಲೊಕೇಶ್ ಚಾಕೋಟೆ ಸ್ವಾಗತಿಸಿ, ಉಪಾಧ್ಯಕ್ಷ ಸತೀಶ್ ಪಾಂಬಾರು,ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರ್ವಹಿಸಿದರು.