ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಪೂರ್ವದ ಸ್ವಚ್ಚ ಪುತ್ತೂರು ಯೋಜನೆಯ ಬನ್ನೂರು ಡಂಪಿಂಗ್ ಯಾರ್ಡ್ನಲ್ಲಿರುವ ಹಸಿತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ ಯೋಜನೆಯ ಕಾಮಗಾರಿಯನ್ನು ರೋಟರಿ ಅಂತಾರಾಷ್ಟ್ರೀಯ ನಿರ್ದೇಶಕ ರೊಟೇರಿಯನ್ ಡಾ ಮಹೇಶ್ ಕೊಟಬಾಗಿ ವೀಕ್ಷಿಸಿದರು.
ಈ ಸಂದರ್ಭ ರೋಟರಿ ಕ್ಲಬ್ ಪುತ್ತೂರು ಪೂರ್ವ ಸ್ವಚ್ಚ ಭಾರತ್ ಟ್ರಸ್ಟ್ ಅಧ್ಯಕ್ಷ ಕೃಷ್ಣ ನಾರಾಯಣ ಮುಳಿಯ, ರೋಟರಿ ಫೌಂಡೇಶನ್ ಜಿಲ್ಲಾ ಚಯರ್ ಮೇನ್ ಡಾ ಸೂರ್ಯನಾರಾಯಣ ಕೆ, ರೋಟರಿ ಪುತ್ತೂರು ಪೂರ್ವದ ಅಧ್ಯಕ್ಷ ಶರತ್ ಕುಮಾರ್ ರೈ, ಯೋಜನಾ ನಿರ್ದೇಶಕ ಡಾ| ರಾಜೇಶ್ ಬೆಜ್ಜಂಗಳ ಯೋಜನೆಯ ಮಾಹಿತಿ ನೀಡಿದರು.