ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಜೂ.21ರಂದು ಆಚರಿಸಲಾಯಿತು.
ಯೋಗಾಸನವನ್ನು ನಿಯಮಿತವಾಗಿ ಅಭ್ಯಾಸ ಮಾಡಿದಾಗ ಮನಸ್ಸು ಮತ್ತು ದೇಹದಿಂದ ಬರುವ ರೋಗಗಳನ್ನು ದೂರವಿರಿಸುತ್ತದೆ. ನಮ್ಮ ಆರೋಗ್ಯವನ್ನು ನಾವು ಯೋಗದಿಂದ ಸ್ಥಿರವಾಗಿಡಬಹುದು. ಅಲ್ಲದೇ, ಸ್ವೀಕರಿಸಿದ ವಿಷಗಾಳಿಯನ್ನು ಕಪಾಲಭಾತಿ ಕ್ರಿಯೆಯ ಮೂಲಕ ಹೊರಹಾಕಬಹುದು ಎಂದು ಶ್ರೀಮತಿ ಹೇಮಚಂದ್ರಹಾಸ್ ಅಗಳಿ ಹೇಳಿದರು. ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಮಾತನಾಡಿ, ಯೋಗ ಸಾಧನೆಯಿಂದ ನಾವು ಸದೃಡರಾಗಬಹುದು. ಯೋಗ ಆರೋಗ್ಯ ವೃದ್ಧಿಯೊಡನೆ ಸುಂದರ ಜೀವನಕ್ಕೂ ಪೂರಕವಾಗಿದೆ . ನಿತ್ಯ ಜೀವನದ ಭಾಗ ಯೋಗವಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ರಾ. ಸೇ.ಯೋ. ಅಧಿಕಾರಿ ಕಿಶೋರ್ ಕುಮಾರ್ ರೈ ಕೆ ಹಾಗೂ IQAC ಸಂಯೋಜಕ ರಾಕೇಶ್, ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಪ್ರಣಮ್ಯ ಸಿ.ಎ ಹಾಗೂ ಅಂತರಾಷ್ಟ್ರೀಯ ಯೋಗ ಪ್ರಶಸ್ತಿ ವಿಜೇತೆ ಪ್ರತಿಕ್ಷಾ ರೈ ಉಪಸ್ಥಿತರಿದ್ದರು.
ರಾ. ಸೇ. ಯೋ ಸ್ವಯಂ ಸೇವಕರಾದ ನಾಚಪ್ಪ ಸ್ವಾಗತಿಸಿ, ಶ್ರೀಜಿತ್ ವಂದಿಸಿದರು. ನವಮಿ ತಂಡ ಪ್ರಾರ್ಥಿಸಿ, ವಿದ್ಯಾರ್ಥಿ ರೋಹಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಪ್ರಣಮ್ಯ ಹಾಗೂ ಪ್ರತೀಕ್ಷಾ ರೈ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ನಡೆಸಿಕೊಟ್ಟರು.