ಬರೆಪ್ಪಾಡಿ ದೇಗುಲದ ಜೀರ್ಣೋದ್ಧಾರ ಕಾರ್ಯ- ದಿನ ನಿತ್ಯ ನಡೆಯುತ್ತಿರುವ ಕರಸೇವೆ

0


ಸುಧಾಕರ್ ಕಾಣಿಯೂರು
ಕಾಣಿಯೂರು : ಇತಿಹಾಸ ಪ್ರಸಿದ್ಧ ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನವು ಶಿಥಿಲಾವಸ್ಥೆಗೆ ತಲುಪಿದ್ದು, ಜೀರ್ಣೋದ್ಧಾರಕ್ಕೆ ಕಾಯುತ್ತಿದ್ದು, ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ನಡೆದಿದೆ. ಸುಮಾರು ೮೦೦ ವರ್ಷಗಳ ಇತಿಹಾಸವಿದ್ದು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡ ದೇವಸ್ಥಾನವಾಗಿದೆ.

ಈ ದೇವಾಲಯದ ಒಂದೇ ಅಂಗಣದಲ್ಲಿ ಎರಡು ದೇವಾಲಯಗಳು ಇವೆ. ಒಂದು ಪಂಚಲಿಂಗೇಶ್ವರ ದೇವಾಲಯ, ಇನ್ನೊಂದು ಕೇಪುಳೇಶ್ವರ ದೇವಾಲಯವಿದೆ.ಒಂದೇ ಅಂಗಣದಲ್ಲಿ ಎರಡು ಗರ್ಭಗುಡಿ ಇರುವ ಶಿವನ ದೇವಸ್ಥಾನ ಇರುವುದು ಇಲ್ಲಿನ ವೈಶಿಷ್ಟ್ಯ.ದೇಗುಲದಲ್ಲಿರುವ ತೀರ್ಥಬಾವಿಯ ಹಿಂದೆಯೂ ಇನ್ನೊಂದು ಐತಿಹ್ಯವಿದೆ. ಹೀಗೆ ಐತಿಹಾಸ ಹಿನ್ನೆಲೆಯಿರುವ ಈ ದೇವಸ್ಥಾನದ ಸುತ್ತುಪೌಳಿ, ನಮಸ್ಕಾರ ಮಂಟಪ, ಎರಡೂ ದೇವರ ಗರ್ಭಗುಡಿಯ ನಿರ್ಮಾಣವಾಗಲಿದೆ. ಸುಮಾರು ೧೦ಕೋಟಿಯಲ್ಲಿ ದೇವಸ್ಥಾನ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಬೈಲುವಾರು ಸಮಿತಿಗಳನ್ನು ರಚಿಸಿಕೊಂಡು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ದಿನ ನಿತ್ಯ ದೇಗುಲದಲ್ಲಿ ಕರಸೇವೆ: ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸ್ವಾಮೀಜಿಯವರ ಹಾಗೂ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮವು ನಡೆದಿದ್ದು, ಬಳಿಕ ದಿನ ನಿತ್ಯ ರಾತ್ರಿ ಊರ, ಪರವೂರ ಹಲವಾರು ಯುವಕರು ದೇಗುಲದಲ್ಲಿ ಕರಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.


ಶಿವ ಪಂಚಾಕ್ಷರಿ ಮಂತ್ರ,ಭಜನಾ ಕಾರ್ಯಕ್ರಮ: ಬರೆಪ್ಪಾಡಿ ಕ್ಷೇತ್ರದ ಜೀರ್ಣೋದ್ಧಾರ ಪ್ರಯುಕ್ತ ಪ್ರತಿ ಸೋಮವಾರ ಶಿವ ಪಂಚಾಕ್ಷರಿ ಮಂತ್ರ, ಓಂ ನಮ: ಶಿವಾಯ, ಮತ್ತು ಭಜನಾ ಕಾರ್ಯಕ್ರಮವು ನಡೆಯುತ್ತಿದೆ. ಕಾರ್ಯಕ್ರಮದಲ್ಲಿಯೂ ಊರವರು ಭಾಗವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here