ಮುಖ್ಯಮಂತ್ರಿಯಾಗಿ ಆಯಿಷತ್ ಫರ್ಹಾನ, ಉಪಮುಖ್ಯಮಂತ್ರಿಯಾಗಿ ಮಹಮ್ಮದ್ ಜಾಸಿರ್
ಕಾಣಿಯೂರು:ಬೆಳಂದೂರು ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ ಪಳ್ಳತ್ತಾರಿನಲ್ಲಿ ಮಂತ್ರಿ ಮಂಡಲ ರಚಿಸಲಾಯಿತು.ಮುಖ್ಯಮಂತ್ರಿಯಾಗಿ 7ನೇ ತರಗತಿಯ ಆಯಿಷತ್ ಫರ್ಹಾನ ಹಾಗೂ ಉಪಮುಖ್ಯಮಂತ್ರಿಯಾಗಿ 6ನೇ ತರಗತಿಯ ಮಹಮ್ಮದ್ ಜಾಸಿರ್ ಎನ್ ಆಯ್ಕೆಯಾಗಿದ್ದಾರೆ.ಶಿಕ್ಷಣ ಮಂತ್ರಿಯಾಗಿ ಸಮ್ನಾ, ಅಭಿವೃದ್ಧಿ ಮಂತ್ರಿಯಾಗಿ ಮಹಮ್ಮದ್ ಫಝಲ್,ಮಹಮ್ಮದ್ ಸಮ್ಮಾಸ್,ರಕ್ಷಣಾ ಮಂತ್ರಿಯಾಗಿ ಜೀವನ್, ಆರೋಗ್ಯ ಮಂತ್ರಿಯಾಗಿ ನೆಫೀಸತ್ ಲಿಯಾನ, ಅಹಮ್ಮದ್ ಅಫೀಝ್, ಹಣಕಾಸು ಮಂತ್ರಿಯಾಗಿ ಫಾತಿಮತ್ ಝೌಬಿಯ, ಆಹಾರ ಮಂತ್ರಿಯಾಗಿ ಮಹಮ್ಮದ್ ಇಝಾಮುದ್ದೀನ್, ಕ್ರೀಡಾಮಂತ್ರಿಯಾಗಿ ಫಾತಿಮತ್ ಶೈಮಾ, ನೀರಾವರಿ ಮಂತ್ರಿಯಾಗಿ ಮಹಮ್ಮದ್ ಶಮೀಮ್,ವಾರ್ತಾ ಮಂತ್ರಿಯಾಗಿ ಫಾತಿಮತ್ ಫರ್ಹಾನ,ಸ್ವಚ್ಛತಾ ಮಂತ್ರಿಯಾಗಿ ಆಯಿಶತ್ ಮಹ್ಶೂಕಾ, ಕಾನೂನು ಮಂತ್ರಿಯಾಗಿ ಮಹಮ್ಮದ್ ಹಾಷಿರ್, ಗ್ರಂಥಾಲಯ ಮಂತ್ರಿಯಾಗಿ ಆಯಿಷತ್ ರಿಝಾ, ತೋಟಗಾರಿಕಾ ಮಂತ್ರಿಯಾಗಿ ಸುಚಿತ್ರ, ಮಹಮ್ಮದ್ ಫರಾಝ್,ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ರಾಫಿಲ್ ಆಯ್ಕೆಯಾದರು.ಮತದಾನದ ಅಧಿಕಾರಿಗಳಾಗಿ ಮುಖ್ಯಗುರು ಕೆ. ಜಿ ಸೀತಾರಾಮ ಹಾಗೂ ಸಹ ಶಿಕ್ಷಕರು ಕಾರ್ಯ ನಿರ್ವಹಿಸಿದರು.