ವಿಭಿನ್ನ ಹೂಗಳು ಭಿನ್ನ ಪರಿಮಳ ಸೂಸುವ ಹಾಗೆ, ವಿದ್ಯಾರ್ಥಿಗಳಲ್ಲಿ ಹೋಲಿಕೆ ಮನೋಭಾವ ಸರಿಯಲ್ಲ ಸಕಾರಾತ್ಮಕ ಮನೋಭಾವ ರೂಢಿಸಿಕೊಳ್ಳಿ: ರೂಪಲೇಖಾ
ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿ 2023- 24ನೇ ಶೈಕ್ಷಣಿಕ ವರ್ಷಕ್ಕೆ ದಾಖಲಾದ ನವ ವಿದ್ಯಾರ್ಥಿಗಳಿಗೆ ನವಾಗತ ಸ್ವಾಗತ ಕಾರ್ಯಕ್ರಮ ಜೂ 23ರಂದು ನಡೆಯಿತು.
ಮಕ್ಕಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ಗುರು ಹಿರಿಯರ ಪಾದ ನಮಸ್ಕರಿಸಿ ಅಗ್ನಿಹೋತ್ರಕ್ಕೆ ಸಮಿತ್ತುಗಳನ್ನು ಸಮರ್ಪಿಸಿದರು. ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಆರತಿ ಬೆಳಗಿ ಅರಿಶಿನ -ಕುಂಕುಮ ನೀಡುವ ಮೂಲಕ ಪ್ರಿಯದರ್ಶಿನಿ ವಿದ್ಯಾ ಸಂಸ್ಥೆಗೆ ಆತ್ಮೀಯವಾಗಿ ಬರಮಾಡಿಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿರೂಪಲೇಖಾ ಮಕ್ಕಳು ಅನುಕರಣೆಯಲ್ಲಿ ನಿಸ್ಸೀಮರು. ಪೋಷಕರಾದ ನಾವುಗಳು ನುಡಿದಂತೆ ನಡೆಯೋಣ. ಭಿನ್ನ-ಕುಸುಮಗಳು ವಿಭಿನ್ನ ಸುವಾಸನೆ ಬೀರುವಂತೆ ಮಕ್ಕಳನ್ನು ಹೋಲಿಕೆ ಮಾಡುವುದನ್ನು ನಿಲ್ಲಿಸಿ. ಪುಟ್ಟ ಪುಟ್ಟ ಸತ್ಕಾರ್ಯಗಳನ್ನು ಪ್ರಶಂಸಿಸಿ ಎಂದರು.
ಅತಿಥಿ ವೆಂಕಟೇಶ್ವರ ಪವರ್ ಸೊಲ್ಯೂಷನ್ಸ್ ಬೆಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಸತ್ಯ. ಎಂ ಮಾತನಾಡಿ ನಿಮ್ಮ ಮಗುವನ್ನು ದಾಖಲುಮಾಡಲು ಪ್ರಿಯದರ್ಶಿನಿ ವಿದ್ಯಾಸಂಸ್ಥೆಯನ್ನೇ ಆಯ್ಕೆ ಮಾಡಿಕೊಂಡಿರುವುದೇ ಪೋಷಕರಾದ ನಿಮ್ಮ ಅತಿ ದೊಡ್ಡ ಸಾಧನೆ ಎಂದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಸಂಚಾಲಕ ಡಾ. ಸತೀಶ್ ರಾವ್, ಕೋಶಾಧಿಕಾರಿಗಳಾದ ಕರುಣಾಕರ ಶೆಟ್ಟಿ ಕೊಮ್ಮಂಡ ಉಪಸ್ಥಿತರಿದ್ದರು.
ಆಡಳಿತ ಮಂಡಳಿ ಅಧ್ಯಕ್ಷರಾದ ರಂಗನಾಥ ರೈಗುತ್ತು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಗುರು ರಾಜೇಶ್ ಎನ್ ಸ್ವಾಗತಿಸಿ, ಸಹ ಶಿಕ್ಷಕಿ ಶರ್ಮಿಳಾ ವಂದಿಸಿದರು.ಸಹ ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.