ಪುತ್ತೂರು: ಮೇನಾಲ ಸ.ಉ.ಹಿ.ಪ್ರಾ ಶಾಲೆಯಲ್ಲಿ2023-24ನೇ ಸಾಲಿಗೆ ಶಾಲಾ ಮಂತ್ರಿ ಮಂಡಲ ರಚಿಸಲಾಯಿತು. ಶಾಲಾ ಮುಖ್ಯಮಂತ್ರಿಯಾಗಿ ಲಿಖಿತಾ (8ನೇ ತರಗತಿ) ಹಾಗೂ ಉಪಮುಖ್ಯಮಂತ್ರಿಯಾಗಿ ಶ್ರೇಯ (7ನೇ ತರಗತಿ) ಆಯ್ಕೆಯಾದರು. ಆಡಳಿತ ಪಕ್ಷದಲ್ಲಿ ಹಿಬಾ, ಫಿದಾ ಖದೀಜಾ, ಆಸ್ನಾ, ಚರಿಷ್ಮಾ, ಕೀರ್ತನ್, ಪ್ರಣಿತ್, ದೀಕ್ಷಿತಾ, ದೀಕ್ಷಾಶ್ರೀ, ಪವನ್, ವರ್ಷಿತಾ, ಚರಣ್ಯ ಕಾರ್ಯನಿರ್ವಹಿಸಲಿದ್ದಾರೆ. ವಿರೋಧ ಪಕ್ಷದಲ್ಲಿ ರಶಾದ್, ಖತೀಜತ್ ಸೆಲ್ವ, ಫಿದಾ ಫಾತಿಮಾ, ದೀಪ್ತಿ, ಮರಿಯಂ ನಿದಾ, ನಿಯಾಜ್ ಇಬ್ರಾಹಿಂ, ಫಾಯಿಜ್, ಇಬ್ರಾಹಿಂ ಬಾತಿಶ, ಮಹಮ್ಮದ್ ಸಿಬಿಲಿ ಕಾರ್ಯ ನಿರ್ವಹಿಸಲಿದ್ದಾರೆ.
ಹೆಚ್ಚುವರಿ ನಾಯಕರಾಗಿ ಸುಜಿತ್, ತಿಲಕ್, ಗಗನ್, ಜ್ಯೋತಿಕಾ, ಅಕಮಲ್, ಯಶ್ವಂತ್, ಅರ್ಷದ್, ಅಫ್ರೀಝ್ ಫಾತಿಮತ್ ರಿಫಾನ, ಇಸ್ಪಾನಾ, ಕಾರ್ತಿಕ್ ರಕ್ಷಿತ್ ಕಾರ್ಯ ನಿರ್ವಹಿಸಲಿದ್ದಾರೆ.
ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರೇವತಿ ಕೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ಎಳವೆಯಲ್ಲಿಯೇ ಕರ್ತವ್ಯ ಜವಾಬ್ದಾರಿಗಳ ಬಗ್ಗೆ ಅರಿತು ಆಡಳಿತಾತ್ಮಕವಾಗಿ ಜ್ಞಾನ ರೂಪಿಸಿಕೊಳ್ಳುವಲ್ಲಿ, ಅನುಭವಾತ್ಮಕವಾಗಿ ನಿರ್ವಹಿಸಲು ಖಾತೆ ಜವಾಬ್ದಾರಿಗಳು ಸಹಕಾರ ನೀಡುತ್ತವೆ ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಮಕ್ಕಳು ತಿಳಿಯುತ್ತಾರೆ ಎಂದು ಹೇಳಿ ಶುಭ ಹಾರೈಸಿದರು. ವಿದ್ಯಾರ್ಥಿಗಳ ಜವಾಬ್ದಾರಿಗಳ ಬಗ್ಗೆ ಶಿಕ್ಷಕಿ ವಾಣಿ.ಕೆ ಮಾತನಾಡಿದರು. ಶಿಕ್ಷಕಿಯರಾದ ಜಯಶ್ರೀ, ಲತಾ ಉಪಸ್ಥಿತರಿದ್ದರು.