ಮುಕ್ವೆ ಶಾಲಾ ಪರಿಸರ ಸ್ವಚ್ಛಗೊಳಿಸಿಮಾದರಿಯಾದ ಎಸ್‌ಡಿಎಂಸಿ ಸದಸ್ಯ

0

ಪುತ್ತೂರು: ಶಾಲಾ ಎಸ್‌ಡಿಎಂಸಿ ಸದಸ್ಯರೋರ್ವರು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ. ಮುಕ್ವೆ ಸ.ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಸದಸ್ಯರಾಗಿರುವ ಪುರುಷರಕಟ್ಟೆ ನಿವಾಸಿ ಶೇಕ್ ಮಹಮ್ಮದ್ ಹನೀಫ್ ಎಂಬವರು ಶಾಲಾ ಪರಿಸರದಲ್ಲಿ ಬೆಳೆದಿದ್ದ ಹುಲ್ಲು ಗಿಡಗಂಟಿಗಳನ್ನು ಯಂತ್ರದ ಮೂಲಕ ಸ್ವಂತ ಖರ್ಚಿನಲ್ಲಿ ತೆರವುಗೊಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಈ ಹಿಂದೆಯೂ ಮುಕ್ವೆ ಶಾಲಾ ಪರಿಸರವನ್ನು ಶುಚಿತ್ವಗೊಳಿಸಿದ್ದು ಪುರುಷರಕಟ್ಟೆ ಅಂಗನವಾಡಿ ಕೇಂದ್ರ ಹಾಗೂ ಪುರುಷರ ಮದ್ರಸ ಪರಿಸರವನ್ನು ಸ್ವಚ್ಚಗೊಳಿಸಿದ್ದರು.

ಇವರ ಕಾರ್ಯಕ್ಕೆ ಶಾಲಾ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ. ಶಾಲೆಯ ಬಗ್ಗೆ ಕಾಳಜಿ ಹೊಂದಿರುವ ಶೇಕ್ ಮಹಮ್ಮದ್ ಹನೀಫ್ ಅವರು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದ್ದು ಮುಂದಕ್ಕೆ ಬೇರೆ ಕೆಲಸಗಳಿದ್ದರೂ ಮಾಡುವುದಾಗಿ ನಮ್ಮಲ್ಲಿ ಹೇಳಿಕೊಂಡಿದ್ದಾರೆ ಎಂದು ಶಾಲಾ ಶಿಕ್ಷಕ ಚರಣ್ ತಿಳಿಸಿದ್ದಾರೆ.
ನನ್ನ ಮೂವರು ಮಕ್ಕಳು ಮುಕ್ವೆ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ನಮ್ಮ ಮನೆಯ ಪರಿಸರವನ್ನು ನಾವು ಸ್ವಚ್ಛವಾಗಿಡುವಂತೆ ಶಾಲೆಯ ಪರಿಸರವನ್ನೂ ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ. ಹಿಂದೆಯೂ ನಾನು ಶಾಲೆ, ಅಂಗನವಾಡಿ ಪರಿಸರ ಸ್ವಚ್ಛತೆ ಮಾಡಿದ್ದೇನೆ ಎಂದು ಶೇಕ್ ಮಹಮ್ಮದ್ ಹನೀಫ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here