ಪುತ್ತೂರು: ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಹಾಗು ಕಥೋಲಿಕ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪೂಜ್ಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಪುತ್ತೂರು ಮಾಯ್‌ದೆ ದೇವುಸ್ ಚರ್ಚ್ ಹಾಗು ಮಾಯ್‌ದೆ ದೇವುಸ್ ಶಿಕ್ಷಣ ಸಂಸ್ಥೆಗಳಿಗೆ ಜೂನ್ 24 ರಂದು ಅಧಿಕೃತ ಭೇಟಿ ನೀಡಿದರು.
ಬೆಳಿಗ್ಗೆ ಪುತ್ತೂರು ಮಾಯ್‌ದೆ ದೇವುಸ್ ಚರ್ಚ್‌ಗೆ ಆಗಮಿಸಿ ಪ್ರಾರ್ಥನ ವಿಧಿಗಳನ್ನು ನೆರವೇರಿಸಿದ ನಂತರ ಮಾಯ್‌ದೆ ದೇವುಸ್ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಸಂಸ್ಥೆಯ ವಿದ್ಯಾರ್ಥಿಗಳ ಭೇಟಿ ಹಾಗು ಸಂವಾದ:
ಮೌಲ್ಯಭರಿತ ಜೀವನ ಮನುಷ್ಯನಿಗೆ ಬಹುಮುಖ್ಯ. ಕೇವಲ ಜ್ಞಾನ ಸಂಪಾದನೆ ಮಾತ್ರ ಶಿಕ್ಷಣದ ಗುರಿಯಲ್ಲ ಬದಲಾಗಿ ಜೀವನದ ಮೌಲ್ಯಗಳ ಸಂಪಾದನೆ ಬಹು ಮುಖ್ಯ ಸಂಸ್ಕಾರ, ಪ್ರೀತಿ, ಕರುಣೆ, ಗೌರವ, ಆದ್ಯಾತ್ಮಕತೆಯ ಮೌಲ್ಯಗಳನ್ನು ನೀಡುವ ಶಿಕ್ಷಣ ಒಂದು ಪರಿಪೂರ್ಣ ಶಿಕ್ಷಣ. ಬದಲಾಗುವ ಈ ಜಗತ್ತಿನಲ್ಲಿ ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ಸನ್ನು ಸಾಧಿಸುವ ಪ್ರಜೆಗಳಾಗಿ ಬಾಳೋಣ ಎಂದರು.
ಸಂಸ್ಥೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳ ಭೇಟಿ ಹಾಗು ಸಂವಾದ:
ಶಿಕ್ಷಣ ನೀಡುವುದು ಕೇವಲ ಒಂದು ಕೆಲಸವಲ್ಲ ಬದಲಾಗಿ ಜೀವನರೂಪಿಸುವ ಜವಬ್ದಾರಿ. ಶಿಕ್ಷಕರ ಜವಬ್ದಾರಿ ಕೇವಲ ಜ್ಞಾನವನ್ನು ನೀಡುವುದಲ್ಲ ಬದಲಾಗಿ ವಿದ್ಯಾರ್ಥಿಗಳನ್ನು ಒಳ್ಳೆಯ ಮನುಷ್ಯರನ್ನಾಗಿ ರೂಪಿಸುವುದು. ನಿಮ್ಮ ಜೀವನ ಶೈಲಿಯ ಮುಖಾಂತರ ವಿದ್ಯಾರ್ಥಿಗಳಿಗೆ ಪ್ರೆರಣೆಯಾಗಿ ಎಂದರು.
ಮಾಯ್‌ದೆ ದೇವುಸ್ ಚರ್ಚ್ ವಠಾರದಲ್ಲಿರುವ ಸಂತ ವಿಕ್ಟರ್ ಬಾಲಿಕಾ ಪ್ರೌಡ ಶಾಲೆ, ಮಾಯ್‌ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆ, ಸಂತ ವಿಕ್ಟರ್ ಆಂಗ್ಲಮಾದ್ಯಮ ಶಾಲೆ ಹಾಗು ಸಂತ ಫಿಲೋಮಿನಾ ಕ್ಯಾಂಪಸ್‌ನಲ್ಲಿರುವ ಸಂತ ಫಿಲೋಮಿನಾ ಆಂಗ್ಲ ಮಾದ್ಯಮ ಶಾಲೆ, ಸಂತ ಫಿಲೋಮಿನಾ ಪ್ರೌಡ ಶಾಲೆ, ಸಂತ ಫಿಲೋಮಿನಾ ಪಿ.ಯುಕಾಲೇಜು, ಸಂತ ಫಿಲೋಮಿನಾ ಕಾಲೇಜಿಗೆ ಬೇಟಿ ನೀಡಿ ವಿದ್ಯಾರ್ಥಿ, ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಸಂತಫಿಲೋಮಿನಾ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿ ನಿಲಯಗಳಿಗೆ ಭೇ ಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಈ ಅಧಿಕೃತ ಭೇಟಿಯ ಸಂಧರ್ಬದಲ್ಲಿ ಮಾಯ್‌ದೆ ದೇವುಸ್ ಚರ್ಚಿನ ಪ್ರದಾನ ಧರ್ಮಗುರುಗಳು ಹಾಗು ಮಾಯ್‌ದೆ ದೇವುಸ್ ಶಿಕ್ಶಣ ಸಂಸ್ಥೆಗಳ ಸಂಚಾಲಕ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ಆಜಯ್ ಲೋಹಿತ್ ಮಸ್ಕರೇನ್ಹಸ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್‌ಡಿಕೋಸ್ತಾ, ಕಾರ್ಯದರ್ಶಿಗಳಾದ ಎವ್ಲಿನ್ ಹಾಗು ಚರ್ಚ್ ಪಾಲನ ಮಂಡಳಿಯ ಸರ್ವ ಸದಸ್ಯರು ಹಾಗು ಭಕ್ತಾಧಿಗಳು ಉಪಸ್ಥಿತರಿದ್ದರು.
ಶಿಕ್ಷಣ ಸಂಸ್ಥೆಗಳ ಭೇಟಿಯ ಸಂಧರ್ಭದಲ್ಲಿ ಮಾಯ್‌ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಮಖ್ಯ ಶಿಕ್ಷಕಿ ಜಾನೆಟ್‌ಡಿಸೋಜ.ಸಂತ ವಿಕ್ಟರ್ ಆಂಗ್ಲಮಾದ್ಯಮ ಶಾಲೆಯ ಮಖ್ಯ ಶಿಕ್ಷಕ ಹ್ಯಾರಿ ಡಿಸೋಜ, ಸಂತ ವಿಕ್ಟರ್ ಬಾಲಿಕಾ ಪ್ರೌಡ ಶಾಲೆಯ ಮಖ್ಯ ಶಿಕ್ಷಕ ರೋಸ್‌ಲಿನ್ ಲೋಬೊ,ಸಂತ ಫಿಲೋಮಿನಾ ಆಂಗ್ಲ ಮಾದ್ಯಮ ಶಾಲೆಯ ಮಖ್ಯ ಶಿಕ್ಷಕ ಸಿ| ಲೋರಾ ಪಾಯಸ್,ಸಂತ ಫಿಲೋಮಿನಾ ಪ್ರೌಡ ಶಾಲೆಯ ಮಖ್ಯ ಶಿಕ್ಷಕ ಮಾಕ್ಸಿಮ್ ಡಿಸೋಜ, ಸಂತ ಫಿಲೋಮಿನಾ ಪಿ.ಯುಕಾಲೇಜಿನ ಪ್ರಾಂಶುಪಾಲ ಆಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಆಂಟನಿ ಪ್ರಕಾಶ್ ಮೊಂತೆರೊ, ಸಂತ ಫಿಲೋಮಿನಾ ವಿದ್ಯಾರ್ಥಿ ನಿಲಯದ ವಾರ್ಡನ್ ರೂಪೇಶ್ ತಾವ್ರೊ, ಸಂತ ಫಿಲೋಮಿನಾ ವಿದ್ಯಾರ್ಥಿನಿ ನಿಲಯದ ವಾರ್ಡನ್ ಲೂರ್‍ದ್‌ಮೇರಿ ಹಾಗು ಸಂತ ಪಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೊ ಉಪಸ್ಥಿತರಿದ್ದರು.