ಬಡಗನ್ನೂರು: ಸುಳ್ಯಪದವು ಬಾಲಸುಬ್ರಹ್ಮಣ್ಯ ಅನುದಾನಿತ ಹಿ.ಪ್ರಾ ಶಾಲೆಯಲ್ಲಿ ವಸುದೈವ ಕುಟುಂಬಕಂ ಧ್ಯೇಯ ವಾಕ್ಯದೊಂದಿಗೆ ಮಾನವೀಯತೆಗಾಗಿ ಯೋಗ ಶೀರ್ಷಿಕೆಯಡಿ ಯೋಗ ದಿನಾಚರಣೆ ಆಚರಿಸಲಾಯಿತು. ಮುಖ್ಯ ಶಿಕ್ಷಕ ರಾಮಚಂದ್ರಪ್ಪ ಯೋಗದ ಮಹತ್ವ ಮತ್ತು ಪ್ರಯೋಜನ ಕುರಿತು ತಿಳಿಸಿದರು.ಯೋಗ ಶಿಕ್ಷಕಿ ಅಮರಡ್ಕ ಲತಾರವಿ ಯೋಗಾಭ್ಯಾಸ ಮಾಡಿಸಿದರು.
ಶಾಲಾ ಶಿಕ್ಷಕಿಯರಾದ ಲತಾ ಸ್ವಾಗತಿಸಿ ವಂದಿಸಿದರು, ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು ಶಾಲಾ ವಿದ್ಯಾರ್ಥಿಗಳಾದ ಕೀರ್ತಿ ಹಾಗೂ ಹಸ್ತ ಪ್ರಾರ್ಥಿಸಿದರು.