ಕ.ಸಾ.ಪ ಗ್ರಾಮ ಸಾಹಿತ್ಯ ಸಂಭ್ರಮ 6 -ಸರಣಿ ಕಾರ್ಯಕ್ರಮ

0

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಹಿತ್ಯ ವೇದಿಕೆ ಒದಗಿಸುವ ಸದುದ್ದೇಶ ಪುತ್ತೂರು ಉಮೇಶ್ ನಾಯಕ್.

ಪುತ್ತೂರು:ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶಾಲಾ ಕಾಲೇಜುಗಳಲ್ಲಿ ಅನೇಕ ಉದಯೋನ್ಮುಖ ಬರಹಗಾರರು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧಕರಿದ್ದು ಅವರನ್ನು ಗುರುತಿಸಿ ಸಾಹಿತ್ಯ ವೇದಿಕೆ ನೀಡುವ ನಿಟ್ಟಿನಲ್ಲಿ ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮವನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಸಾಹಿತಿಗಳಿಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹಿಸಿ ವೇದಿಕೆ ನೀಡಿ ಯುವ ಜನತೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ಉದ್ದೇಶ ಇದಾಗಿದೆ ಎಂದು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹೇಳಿದರು.

ಜೂ. 24 ರಂದು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಶ್ರೀ ಷಣ್ಮುಖದೇವ ಪ್ರೌಢಶಾಲೆಯಲ್ಲಿ ಕ. ಸಾ. ಪ ಪುತ್ತೂರು, ಶಿಕ್ಷಣ ಇಲಾಖೆ ಪುತ್ತೂರು, ಗ್ರಾಮ ಪಂಚಾಯತ್ ಕೊಳ್ತಿಗೆ ಮತ್ತು ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಿತ್ರಂಪಾಡಿ ಜಯರಾಮ ರೈ ಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷವಾಕ್ಯದಲ್ಲಿ ನಡೆಯುವ ಗ್ರಾಮ ಸಾಹಿತ್ಯ ಸಂಭ್ರಮ-6 ಸರಣಿ ಕಾರ್ಯಕ್ರಮ ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಶ್ರೀ ಷಣ್ಮುಖದೇವ ಪ್ರೌಢಶಾಲೆಯ ಅಧ್ಯಕ್ಷ ತೀರ್ಥಾನಂದ ದುಗ್ಗಳ ದೀಪ ಪ್ರಜ್ವಲನೆ ಮೂಲಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತಕುಮಾರ್ ರೈ ವಹಿಸಿ ಮಾತನಾಡಿದರು.

ಗ್ರಾಮದ 7 ಸಾಧಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಎಸ್. ಜಿ. ಕೃಷ್ಣ, ಗಣೇಶ್ ಭಟ್ ಮಾಪಲಮಜಲು, . ಹಾ. ಮ. ಸತೀಶ, ಉದಯಗೌರಿ ಬಿರ್ಮುಕಜೆ, ಹಿರಿಯ ಸಹಕಾರಿ ಕುಂಟಿಕಾನ ಲಕ್ಷ್ಮಣಗೌಡ,ಯುವ ಸಾಹಿತಿ ಪೂರ್ಣಿಮಾ ಪೆರ್ಲಂಪಾಡಿ, ಯುವ ಗಾಯಕ ರವಿ ಪಾಂಬಾರುರವರನ್ನು ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ಯಾಮ ಸುಂದರ ರೈ ಸನ್ಮಾನಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಧು ಪ್ರಪಂಚ ಪತ್ರಿಕೆಯ ಪ್ರದಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಉಪಸ್ಥಿತಿಯಲ್ಲಿ ತ್ರೈಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಾಲ್ಕು ವಿವಿಧ ಗೋಷ್ಠಿಗಳು
ಸಾಹಿತ್ಯ ವಿಮರ್ಶಕ ಅಮಲ ಶಿವರಾಮ ಭಟ್ ಸಾಹಿತ್ಯಕ್ಕೆ ಕೊಳ್ತಿಗೆ ಗ್ರಾಮದ ಕೊಡುಗೆ ಕುರಿತು ಉಪನ್ಯಾಸ ಮಾಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗವೇಣಿ ಉಪಸ್ಥಿತರಿದ್ದರು. ಹಿರಿಯ ಸಾಹಿತಿ ಹಾ. ಮ. ಸತೀಶ ಅಧ್ಯಕ್ಷತೆಯಲ್ಲಿ ಬಾಲಕಥಾಗೋಷ್ಠಿ, ಗಣೇಶ್ ಭಟ್ ಮಾಪಲಮಜಲು ಅಧ್ಯಕ್ಷತೆಯಲ್ಲಿ ಬಾಲಕವಿಗೋಷ್ಠಿ, ನಿವೃತ್ತ ಶಿಕ್ಷಕರು ಮತ್ತು ಕಾದಂಬರಿಕಾರ ಉದಯಗೌರಿ ಬಿರ್ಮುಕಜೆ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ವಿಭಾಗದ ಯುವ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿಯಲ್ಲಿ ಸಂಧ್ಯಾ ಪ್ರಶಾಂತ್ ಅರಿಕ್ಕಿಲ, ರವಿ ಪಾಂಬಾರು, ಪೂರ್ಣಿಮಾಗೌಡ ಕುತ್ತಿಮುಂಡ, ಸೌಮ್ಯ ಎರ್ಮೆಟ್ಟಿ ಸುಳ್ಯ, ಆಶಾಮಯ್ಯ ಪುತ್ತೂರು, ಶ್ರೀಕಲಾ ಕಾರಂತ್ ಅಳಿಕೆ, ಅಪೂರ್ವ ಕಾರಂತ್ ದರ್ಬೆ, ಪೂರ್ಣಿಮಾ ಪೆರ್ಲಂಪಾಡಿ, ಕೀರ್ತನ, ಶ್ರೇಯ. ಪಿ. ಭಾಗವಹಿಸಿದ್ದರು.

ವಿವಿಧ ಗೋಷ್ಠಿಗಳಲ್ಲಿ ಕೊಳ್ತಿಗೆ ಗ್ರಾಮದ 9 ಶಾಲೆಯ 80ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಭಾಗವಹಿಸಿದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಅಪೂರ್ವ ಕಾರಂತ್ ದರ್ಬೆ, ಆಶಾಮಯ್ಯ ಪುತ್ತೂರು, ಶ್ರೀಕಲಾ ಕಾರಂತ್ ಅಳಿಕೆ, ನವ್ಯ ಪುತ್ತೂರು, ಸೌಮ್ಯರಾಮ್ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀ ಷಣ್ಮುಖದೇವ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ ,ಶಾಲಾ ಮುಖ್ಯಗುರು ಕೃಷ್ಣವೇಣಿ ಸ್ವಾಗತಿಸಿ ,ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಚಂದ್ರಶೇಖರ ಮಾಲೆತ್ತೋಡಿ ನಿರೂಪಿಸಿ, ಕಾರ್ಯಕ್ರಮ ಸಂಯೋಜಕಿ ಪೂರ್ಣಿಮಾ ಪೆರ್ಲಂಪಾಡಿ ವಂದಿಸಿದರು.

LEAVE A REPLY

Please enter your comment!
Please enter your name here