





ಪುತ್ತೂರು: ಕಳೆದ ಎರಡೂವರೆ ವರ್ಷಗಳಿಂದ ಅನಾರೋಗ್ಯವಂತರಿಗಾಗಿ ದಾನಿಗಳ ಸಹಕಾರದಿಂದ ಬಡ ಕುಟುಂಬಗಳ ಮನೆಗಳನ್ನು ಗುರುತಿಸಿ ಆರ್ಥಿಕ ನೆರವು ಹಾಗೂ ಅವರ ಕುಟುಂಬಕ್ಕೆ ಒಂದೂವರೆ ತಿಂಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ತಲುಪಿಸುವ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಉಪ್ಪಿನಂಗಡಿ ಶ್ರೀ ಚಾಮುಂಡೇಶ್ವರಿ ಜನಾರ್ಪಣ ಸೇವಾ ಟ್ರಸ್ಟ್ನಿಂದ ಹಿರೇಬಂಡಾಡಿಯ ವಳಕಡಮ ಎಂಬಲ್ಲಿ ಒಂದು ಬಡ ಕುಟುಂಬಕ್ಕೆ 2೦೦೦ ಚೆಕ್ ಹಾಗೂ ಒಂದೂವರೆ ತಿಂಗಳಿಗೆ ಬೇಕಾದ ಆಹಾರ ಸಾಮಗ್ರಿಗಳ ಕಿಟ್ನ್ನು ಅವರ ಮನೆಗೆ ತೆರಲಿ ಹಸ್ತಾಂತರಿಸಿದರು. ಟ್ರಸ್ಟ್ನ ಅಧ್ಯಕ್ಷ ಜಯರಾಜ್ ಅಮೀನ್ ಉಪ್ಪಿನಂಗಡಿ ಹಾಗೂ ಟ್ರಸ್ಟಿ ಉಮೇಶ್ ಶೆಟ್ಟಿ ಆಲಂಕಾರ್ ಇವರು ವಿತರಿಸಿದರು.








