ಪುತ್ತೂರು:ನವೋದಯ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜೂ.17ರಂದು ನಡೆಸಲಾಯಿತು. ಶಾಲಾ ನಾಯಕ ಮಹಮ್ಮದ್ ಆದಿಲ್ ಶಾ, ಉಪನಾಯಕ ಮಾನಸ್.ಬಿ. ವಿರೋಧ ಪಕ್ಷದ ನಾಯಕ ಶ್ರವಣ್ ಎನ್, ವಿರೋಧ ಪಕ್ಷದ ನಾಯಕಿ ಆಯಿಷತ್ ಸಹಲಾ. ಕ್ರೀಡಾ ಮಂತ್ರಿ ಅಬ್ದುಲ್ ನಾಫಿಹ್, ಉಪಕ್ರೀಡಾ ಮಂತ್ರಿ ಸೈಯ್ಯದ್ ಅಬ್ದುಲ್ಲಾ. ವಿದ್ಯಾ ಮಂತ್ರಿ ಶೃತಿ.ಕೆ, ಉಪವಿದ್ಯಾಮಂತ್ರಿ ಯಶಸ್ವಿ. ರಕ್ಷಣಾ ಮಂತ್ರಿ ಹರ್ಷಿತಾ, ಉಪರಕ್ಷಣಾ ಮಂತ್ರಿ ಚೈತನ್ಯ. ಸ್ತ್ರೀಹಿತ ರಕ್ಷಣಾ ಮಂತ್ರಿ ಹರ್ಷ, ಉಪಸ್ತ್ರೀಹಿತ ರಕ್ಷಣಾ ಮಂತ್ರಿ ಚೈತನ್ಯ.ಕೆ. ನೀರಾವರಿಮಂತ್ರಿ ಮಹಮ್ಮದ್ ಅಫ್ ನಾನ್, ಉಪನೀರಾವರಿ ಮಂತ್ರಿ ಮುನೈಝ್. ಕೃಷಿ ಮಂತ್ರಿ ಶಹಲ, ಉಪಕೃಷಿ ಮಂತ್ರಿ ನುಸ್ರತ್ ಬಾನು. ಆರೋಗ್ಯ ಮಂತ್ರಿ ಅರ್ಫಾನ, ಉಪ ಆರೋಗ್ಯ ಮಂತ್ರಿ ಸುಹೈಬಾ. ಸಂಸತ್ ಕಾರ್ಯದರ್ಶಿ ಶಿಲ್ಪ, ಉಪ ಸಂಸತ್ ಕಾರ್ಯದರ್ಶಿ ಸಮೀಕ್ಷಾ. ಉಪಸಭಾಪತಿ ಮಹಮ್ಮದ್ ಅಸ್ಫಕ್. ಸ್ಚಚ್ಚತಾ ಮಂತ್ರಿ ವಿನೀತ್ ಕುಮಾರ್, ಉಪ ಸ್ಚಚ್ಚತಾ ಮಂತ್ರಿ ಸಂಪ್ರೀತ್ ಎ.ಯು. ಸಾಂಸ್ಕೃತಿಕ ಮಂತ್ರಿ ಸಮೀಕ್ಷಾ.ಜಿ, ಉಪಸಾಂಸ್ಕೃತಿಕ ಮಂತ್ರಿ ಹನ್ನತ್ ಮಸ್ತೂರ ಆಯ್ಕೆಯಾದರು.
ಸಂಸತ್ತಿನ ಸಭಾಪತಿಯಾಗಿ ಆಯ್ಕೆಗೊಂಡ ಮಹಮ್ಮದ್ ಶಾಮಿಲ್ ಎ.ಎಂ ಆಯ್ಕೆಗೊಂಡ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರಮಾಣ ವಚನ ಬೋದಿಸಿದರು.ಮುಖ್ಯಗುರುಗಳಾಧ ಶ್ರೀಮತಿ ಪುಷ್ಪಾವತಿ ಎಸ್ ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು. ಮುಖ್ಯ ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಪ್ರವೀಣ ಕುಮಾರಿ ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಗಳಿಗೆ ಶುಭಹಾರೈಸಿದರು. ಸಂಸತ್ತಿನ ನಿಯಮಾವಳಿಗಳನ್ನು ಸಹ ಶಿಕ್ಷಕಿ ಸುಮಂಗಲಾ.ಕೆ ತಿಳಿಸಿದರು. ಸಹಶಿಕ್ಷಕಿಯರಾದ ಶೋಭಾ.ಬಿ, ಭುವನೇಶ್ವರಿ.ಎಂ, ರೇವತಿ.ಪಿ, ರಾಧಾಕೃಷ್ಣ ಕೋಡಿ ಸಹಕರಿಸಿದರು.