ಹದಿಮೂರು ಪ್ರಕರಣಗಳಲ್ಲಿ ಬೇಕಾಗಿದ್ದ ಖತರ್ನಾಕ್‌ ಕಳ್ಳರಿಬ್ಬರ ಬಂಧನ

0

ಪುತ್ತೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಸುರತ್ಕಲ್‌ ಠಾಣೆಯ ಪೊಲೀಸ್‌ ನಿರೀಕ್ಷಕರಾದ ಮಹೇಶ್‌ ಪ್ರಸಾದ್‌ ನೇತೃತ್ವದ ಪೊಲೀಸ್‌ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರನ್ನು ಕೃಷ್ಣಾಪುರ ಮೂಲದ ಹಬೀಬ್‌ ಹಸನ್‌, (ಬಂಟ್ವಾಳದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ) ಮತ್ತು ಉಳ್ಳಾಲದ ಮೊಹಮ್ಮದ್‌ ಫೈಝಲ್‌ ಎಂದು ಗುರುತಿಸಲಾಗಿದೆ. ಇಬ್ಬರೂ ಈ ಹಿಂದೆ ಮಂಗಳೂರು ಮತ್ತು ಕಾರವಾರ ಮತ್ತು ಮಂಗಳೂರು ಜೈಲಿನಲ್ಲಿದ್ದು ಸಜೆ ಅನುಭವಿಸಿದ್ದರು. ಹಬೀಬ್‌ ಹಸನ್‌ ವಿರುದ್ದ ಒಟ್ಟು 35ಪ್ರಕರಣಗಳು ದಾಖಲಾಗಿದ್ದು, ಮೊಹಮ್ಮದ್‌ ಫೈಝಲ್‌ ವಿರುದ್ದ ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ 15 ಪ್ರಕರಣಗಳು ದಾಖಲಾಗಿವೆ.

ಇವರ ಬಂಧನಕ್ಕೆ ಮಂಗಳೂರು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಲಾಗಿತ್ತು.ಕಳವುಗೈದ ಮೋಟರ್‌ ಬೈಕ್‌ ಮತ್ತು ಸ್ಕೂಟರ್‌ ನಲ್ಲಿ ಅಲ್ಲಲ್ಲಿ ಕಳ್ಳತನ ಮಾಡುತ್ತಿದ್ದ ಇವರು ಜೂ.23ರಂದು ಬಂಟ್ವಾಳದಲ್ಲಿ ವೃದ್ಧ ಮಹಿಳೆಯೊಬ್ಬರ ಸರಗಳ್ಳತನ ಮಾಡಿ ಬಂದಿರುವ ಚಿನ್ನಾಭರಣಗಳನ್ನು ಮತ್ತು ಸುರತ್ಕಲ್‌ ಬಳಿಯ ತಡಂಬೈಲು ಎಂಬಲ್ಲಿ ವೃದ್ಧ ಮಹಿಳೆಯಿಂದ ಸುಲಿಗೆ ಮಾಡಿದ ಚಿನ್ನಾಭರಣಗಳನ್ನು ಮಂಗಳೂರು ನಗರದಲ್ಲಿ ಮಾರಾಟ ಮಾಡಲು ವಿಫಲರಾಗಿ ಸುರತ್ಕಲ್‌ ಠಾಣಾ ವ್ಯಾಪ್ತಿಯ ಕಾಟಿಪಳ್ಳ ಕಡೆಯಿಂದ ಮಧ್ಯ-ಚೇಳೆರು ಮೂಲಕ ಸುರತ್ಕಲ್‌ ನಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಸ್ಕೂಟರ್‌ ನಲ್ಲಿ ಬಂದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಸಿದ 13 ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ ಆರೋಪಿಗಳಿಂದ ಒಟ್ಟು 12ಲಕ್ಷದ 48 ಸಾವಿರದ 550 ಮೌಲ್ಯದ ಚಿನ್ನಾಭರಣಗಳನ್ನು ಮತ್ತು 1ಲಕ್ಷದ 34ಸಾವಿರ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದ್ದು ಮಾನ್ಯ ನ್ಯಾಯಾಲವು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here