ಕೆದಂಬಾಡಿ ಗ್ರಾಪಂನಲ್ಲಿ “ಆಡಳಿತದಲ್ಲಿ ಮಕ್ಕಳು” ಕಾರ್ಯಕ್ರಮ

0

ಪುತ್ತೂರು: ಚೈಲ್ಡ್ ರೈಟ್ ಟ್ರಸ್ಟ್ ಬೆಂಗಳೂರು ಮತ್ತು ಕೆದಂಬಾಡಿ ಗ್ರಾಮ ಪಂಚಾಯತ್ ಮತ್ತು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಎಂಎಸ್‌ಡಬ್ಲ್ಯೂ ವಿಭಾಗ (ಸ್ನಾತಕೋತ್ತರ ಸಮಾಜಕಾರ್ಯ) ಇದರ ಸಹಭಾಗಿತ್ವದಲ್ಲಿ “ಆಡಳಿತದಲ್ಲಿ ಮಕ್ಕಳು” ಎಂಬ ಕಾರ್ಯಕ್ರಮವು ಜೂ.20 ರಂದು ಕೆದಂಬಾಡಿ ಗ್ರಾಮ ಪಂಚಾಯತ್‌ನಲ್ಲಿ ನಡೆಯಿತು.

ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ಸಭಾಧ್ಯಕ್ಷತೆ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಚೈಲ್ಡ್ ರೈಟ್ ಟ್ರಸ್ಟ್‌ನ ಸಂಯೋಜಕಿ ಕಸ್ತೂರಿ ಬೊಳುವಾರುರವರು ಮಾತನಾಡಿ, ಆಡಳಿತದಲ್ಲಿ ಮಕ್ಕಳು ಮತ್ತು ಸರಕಾರದೊಡನೆ ಮಕ್ಕಳ ಭಾಗವಹಿಸುವಿಕೆ, ಅಂತರಾಷ್ಟ್ರೀಯ ಮಕ್ಕಳ ಹಕ್ಕು ,ಒಡಂಬಡಿಕೆ ,ಮಕ್ಕಳ ರಕ್ಷಣೆಗೆ ಇರುವ ವಿವಿಧ ಕಾನೂನುಗಳು , ವಿವಿಧ ಪ್ರಾಧಿಕಾರಗಳು, ಆಡಳಿತ ವ್ಯವಸ್ಥೆ ಹಾಗೂ ಸೃಷ್ಟಿಯ ಅಭಿವೃದ್ಧಿಯ ಗುರಿಗಳು ಹಾಗೂ ಮಕ್ಕಳು ಹಾಗೂ ಗ್ರಾಮ ಪಂಚಾಯತ್ ಜವಾಬ್ದಾರಿಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.


ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು , ಶಾಲಾ ಮುಖ್ಯೋಪಾದ್ಯಾಯರು,ಸಂಜೀವಿನಿ ಒಕ್ಕೂಟ ಸದಸ್ಯರು, ಕೃಷಿ ಸಖಿ,ಯುವಕ-ಯುವತಿ ಮಂಡಲದ ಸದಸ್ಯರು, ಸಂತ ಫಿಲೋಮಿನಾ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು,ಕೆದಂಬಾಡಿ ಗ್ರಾಮ ಪಂಚಾಯತ್‌ನ ಸದಸ್ಯರುಗಳ ಉಪಸ್ಥಿತರಿದ್ದರು. ಕೆದಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ ಕೆ ಸ್ವಾಗತಿಸಿ, ಸಂತ ಫಿಲೋಮಿನಾ ಕಾಲೇಜಿನಾ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ ಸರಿತಾ ಎಮ್ ವಂದಿಸಿ, ವಿದ್ಯಾರ್ಥಿ ಮೊಹಮ್ಮದ್ ಆಶಿಫ್ ಎಂ ಎ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here