ಟೊಯೋಟಾ ಕಿರ್ಲೊಸ್ಕರ್, ಜರ್ಮನ್ INDO-MIM ಸಂಸ್ಥೆಗೆ ನರಿಮೊಗರು ಸರಕಾರಿ ಐಟಿಐ ವಿದ್ಯಾರ್ಥಿಗಳು ಆಯ್ಕೆ

0

ಪುತ್ತೂರು: ನರಿಮೊಗರು ಐಟಿಐ ಇಲ್ಲಿನ ಫಿಟ್ಟರ್ ವೃತ್ತಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಬೆಂಗಳೂರಿನ ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಕಂಪೆನಿಗೆ ಆಯ್ಕೆಯಾಗಿರುತ್ತಾರೆ.
ಈ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆದ ಸಂದರ್ಶನದ ಮೂಲಕ ಆಯ್ಕೆಯಾಗಿರುತ್ತಾರೆ. ಅಲ್ಲದೆ ಜರ್ಮನ್ ಮೂಲದ ಬೆಂಗಳೂರಿನಲ್ಲಿರುವ INDO-MIM ಸಂಸ್ಥೆಗೆ ಫಿಟ್ಟರ್ ವೃತ್ತಿ ವಿಭಾಗದ ಆರು ಮಂದಿ ವಿದ್ಯಾರ್ಥಿಗಳು ಅಂತಿಮವಾಗಿ ಆಯ್ಕೆಗೊಂಡಿರುತ್ತಾರೆ. ನರಿಮೊಗರು ಸರಕಾರಿ ಐಟಿಐ ಇದರ ಪ್ರಾಂಶುಪಾಲ ಪಂಡಿತ್ ಆರಾಧ್ಯರವರ ಮಾರ್ಗದರ್ಶನದಲ್ಲಿ ಮೆಕ್ಯಾನಿಕಲ್ ಫಿಟ್ಟರ್ ವೃತ್ತಿ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಯೋಗೀಶ್ ಪಿ.ಶಾಂತಿಗೋಡುರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here