ಪುತ್ತೂರು: ಯುವ ವಕೀಲ ಸ್ನೇಹಿತರ ತಂಡದಿಂದ ವಿನೂತನ ರೀತಿಯ ವನಮಹೋತ್ಸವ

0

ಪುತ್ತೂರು: ಮಳೆಗಾಲದ ಸಮಯದಲ್ಲಿ ಯುವಕರು ಪ್ರಕೃತಿ ವೀಕ್ಷಿಸಲು ಹಾಗೂ ಸುತ್ತಾಡಲು ಹೋಗುವುದು ಸಹಜ ಆದರೆ ಪುತ್ತೂರಿನ ಯುವ ವಕೀಲರ ಸ್ನೇಹಿತರ ತಂಡವೊಂದು ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದಾರೆ.

ಜೂ. 25ರಂದು ವಕೀಲ ಸ್ನೇಹಿತರ ತಂಡವೊಂದು ಚಾರ್ಮಾಡಿ ಘಾಟ್, ದೇವರಮನೆ, ಬೇಲೂರು, ಹೀಗೆ ಹಲವು ಕಡೆಗೆ ಪ್ರವಾಸ ಹಮ್ಮಿಕೊಂಡು ಪ್ರವಾಸೋದ್ಯಮ ಸ್ಥಳಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟು ವಿನೂತನ ರೀತಿಯಲ್ಲಿ ವನಮಹೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಫಲವಸ್ತುಗಳಾದ ಹಲಸು, ಮಾವು, ನೆಲ್ಲಿಕಾಯಿ, ರಾಂಬುಟನ್, ನೇರಳೆ ಹಾಗೂ ಇತರೆ ಗಿಡಗಳನ್ನು ನೆಡುವುದರ ಜತೆಗೆ ಸ್ವಚ್ಛತಾ ಕಾರ್ಯವನ್ನು ಮಾಡಿ ಅಲ್ಲಿ ನೆರೆದಿದ್ದ ಪ್ರವಾಸಿಗರಿಗೂ ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಅರಿವನ್ನು ಮೂಡಿಸುತ್ತಾ ಪ್ರಕೃತಿಯ ಜೊತೆ ಆನಂದಿಸುತ್ತಾ ತಮ್ಮ ಪ್ರವಾಸ ದಿನವನ್ನು ಕಳೆದಿದ್ದಾರೆ.


ವಕೀಲರಾದ ಸುದರ್ಶನ್ ಭಟ್ ಬೆದ್ರಾಡಿ, ಮನೋಹರ್ ಭಟ್ ಬೆದ್ರಾಡಿ, ತೇಜಸ್ ಕೊಂಬೆಟ್ಟು, ಶ್ರವಣ್ ಕುಮಾರ್ ಅಮ್ಟಾಡಿ, ವಿನೋದರ ಲಾಯಿಲ, ಸುಜಿತ್ ಕುಮಾರ್, ಜ್ಞಾನೇಶ್ ವಿಟ್ಲ, ಪ್ರಥಮ್, ಸುನೀಲ್ ಕಾಶಿಪಟ್ನ ಇವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here